ನಾಲೆಜ್ ಸಿಟಿ: ಕರ್ನಾಟಕದ ಕೊಡಗು ಜಿಲ್ಲೆಯ 56 ಮೊಹಲ್ಲಾಗಳ ಪದಾಧಿಕಾರಿಗಳು ತಮ್ಮ ಖಾಝಿಯಾದ ಕಾಂದಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರನ್ನು ಭೇಟಿಯಾದರು.
ಕೊಡಗು ಜಿಲ್ಲೆಯ ಸಂಯುಕ್ತ ಖಾಝಿಯಾದ ಕಾಂದಪುರಂ ಉಸ್ತಾದರು ಕೊಡಗಿಗೆ ಆಗಾಗ್ಗೆ ಭೇಟಿ ನೀಡಿ ಸಂಬಂಧವನ್ನು ಹೆಚ್ಚಿಸುತ್ತಿದ್ದರು. ಈ ಸಂಬಂಧವನ್ನು ಗಟ್ಟಿಗೊಳಿಸುವ ಸಲುವಾಗಿ ಸುನ್ನಿ ಸಂಘಟನೆಗಳ ನಾಯಕರು ಹಾಗೂ ಸಮಿತಿಯ ಪದಾಧಿಕಾರಿಗಳು ಜಾಮಿಉಲ್ ಫುತೂಹ್ ಗೆ ಆಗಮಿಸಿ ಸಭೆ ನಡೆಸಿದರು.
ಮೊಹಲ್ಲಾ – ಸಾಂಸ್ಥಿಕ ಸಬಲೀಕರಣ, ಆದರ್ಶ ಪ್ರಚಾರ, ಶಿಕ್ಷಣ ಮತ್ತು ಸಾಮಾಜಿಕ ಸೇವೆ, ಇತ್ಯಾದಿಗಳ ಕುರಿತು ಚರ್ಚೆ ನಡೆದವು. ಕಾದಪುರಂ ಉಸ್ತಾದ್ ಎಲ್ಲಾ ಮಹಲ್ಲುಗಳಲ್ಲಿ ಮಹ್ಲರತುಲ್ ಬದ್ರಿಯ್ಯಃ ಪ್ರಾರಂಭಿಸಲು ಸೂಚಿಸಿ ಇಜಾಝತ್ ನೀಡಿದರು.
ಜೊತೆಗೆ ಈ ಬಾರಿ ಹಜ್ ಗೆ ತೆರಳುವವರಿಗಾಗಿ ಪ್ರಾರ್ಥಿಸಿದರು. ಕಾಂದಪುರಂ ಉಸ್ತಾದ್ ಖಾಝಿಯಾಗಿರುವ ವಿವಿಧ ಮಹಲ್ಲುಗಳ ಸಂಗಮ ಮುಂದಿನ ದಿನಗಳಲ್ಲಿ ಜಾಮಿಉಲ್ ಫುತೂಹ್‌ನಲ್ಲಿ ನಡೆಯಲಿದೆ.
ಸಭೆಯಲ್ಲಿ ಡಾ| ಎಪಿ ಅಬ್ದುಲ್ ಹಕೀಂ ಅಝ್ಹರಿ ಮಹಲ್ಲ್ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನಾಇಬ್ ಖಾಝಿ ಕೆ.ಎಸ್.ಶಾದುಲಿ ಫೈಝಿ, ಕರ್ನಾಟಕ ಎಸ್ ವೈಎಸ್ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಝ್ ಸಅದಿ, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಅಶ್ರಫ್ ಅಹ್ಸನಿ, ಸಿ.ಪಿ.ಅಬ್ದುಲ್ ಮಜೀದ್ ಮದನಿ, ಮುಹಮ್ಮದ್ ಹಾಜಿ, ಅಬ್ದುಲ್ ಹಮೀದ್ ಮುಸ್ಲಿಯಾರ್, ಇಲ್ಯಾಸ್ ತಙ್ಙಳ್ ಎರುಮಾಡ್, ಝುಬೈರ್ ಸಅದಿ, ಅಡ್ವೊಕೇಟ್ ಕುಞ್ಞಬ್ದುಲ್ಲಾ ಹಾಗೂ ಪಿಎ ಯೂಸುಫ್ ಹಾಜಿ ಎಂಬಿವರು ಮಾತನಾಡಿದರು.