janadhvani

Kannada Online News Paper

ರೂಪಾಯಿ ಮೌಲ್ಯ ಕುಸಿತ- ಹಣ ಕಳುಹಿಸಲು ಉತ್ಸುಕರಾದ ಅನಿವಾಸಿಗಳು

ದುಬೈ: ರೂಪಾಯಿ ಮೌಲ್ಯ ಕುಸಿದಿರುವುದರಿಂದ ಗಲ್ಫ್ ವಲಸಿಗರು ದೇಶಕ್ಕೆ ಹಣ ಕಳುಹಿಸಲು ಉತ್ಸಾಹ ತೋರುತ್ತಿದ್ದಾರೆ. ಭಾರತಕ್ಕೆ ಹಣ ಕಳುಹಿಸುವವರ ಪ್ರಮಾಣವು ಶೇ. 10 ಹೆಚ್ಚಾಗಿದೆ ಎಂದು ಹಣ ವಿನಿಮಯ ಕೇಂದ್ರಗಳ ಮೂಲಗಳಿಂದ ತಿಳಿದು ಬಂದಿದೆ.

ದೀರ್ಘಕಾಲದ ನಂತರ ರೂಪಾಯಿಯ ಮೌಲ್ಯವು ಕುಸಿದಿದೆ. ಯುಎಇ ದಿರ್ಹಮ್ ಮತ್ತು ಕತ್ತರ್ ರಿಯಾಲ್ಗೆ 18 ರೂಪಾಯಿಗಿಂತ ಮೇಲೆ ದರ ದಾಖಲಿಸಿದೆ.ಕುವೈತ್ ದಿನಾರ್ 221 ರೂ. ಮತ್ತು ಬಹ್ರೈನ್ ದಿನಾರ್ ಗೆ 176.68 ರೂ. ಲಭ್ಯವಿದೆ. ತಿಂಗಳ ಪ್ರಾರಂಭವಾದ ಕಾರಣವೂ ದೇಶಕ್ಕೆ ಹಣದ ಹರಿವು ಹೆಚ್ಚಿದೆ.

ತೈಲ ಬೆಲೆ ಹೆಚ್ಚಳ ಮತ್ತು ಯು.ಎಸ್ ಫೆಡರಲ್ ದರ ಹೆಚ್ಚಳವು ರೂಪಾಯಿ ಹೆಚ್ಚು ದುರ್ಬಲವಾಗುವಂತೆ ಮಾಡಿದೆ ಎಂದು ತಜ್ಞರು ಹೇಳುತ್ತಾರೆ.ಡಾಲರ್ ಬಲ ಪಡೆಯುವುದರೊಂದಿಗೆ, ರೂಪಾಯಿ ಮೌಲ್ಯವು ಮತ್ತಷ್ಟು ಕುಸಿದು ವಿನಿಮಯ ದರವು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅವರು ಹೇಳುತ್ತಾರೆ.

ವಿನಿಮಯ ದರ ಹೆಚ್ಚಳಗೊಂಡ ಕಾರಣ  ಭಾರತಕ್ಕೆ ಹಣ ಕಳುಹಿಸುವವರ  ಸಂಖ್ಯೆಯಲ್ಲಿ  ಶೇ 8 ರಿಂದ ಶೇ 10 ಕ್ಕೆ ಏರಿದೆ ಎಂದು ಯುಎಇ ಎಕ್ಸ್‌ಚೇಂಜ್ ಸಿಇಒ ಪ್ರಮೋದ್ ಮಂಗಾಟ್ ಹೇಳಿದರು.

13 ತಿಂಗಳಲ್ಲಿ ಅತಿದೊಡ್ಡ ಕುಸಿತವನ್ನು ರೂಪಾಯಿ ಕಂಡಿದೆ.ಆರ್ಬಿಐ ಮಧ್ಯಪ್ರವೇಶಿಸದಿದ್ದರೆ, ರೂಪಾಯಿ ದರ ಮತ್ತಷ್ಟು ಕುಸಿಯ ಬಹುದು ಎನ್ನಲಾಗಿದೆ.ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಿಂದ ರೂಪಾಯಿಯಲ್ಲಿ ಪ್ರಭಾವ ಬೀರಿದೆ. ಕಳೆದ ನಾಲ್ಕು ವಾರಗಳಲ್ಲಿ ರೂಪಾಯಿ ಕುಸಿತ ಕಂಡು ಬಂದಿದೆ.

ಭಾರತಕ್ಕೆ ಮೊದಲ ಸ್ಥಾನ

ವಿಶ್ವ ಬ್ಯಾಂಕ್ ವರದಿಯ ಪ್ರಕಾರ, ಕಳೆದ ವರ್ಷ  ವಲಸಿಗರು ಭಾರತಕ್ಕೆ 6900 ಕೋಟಿ ಡಾಲರ್ ಗಳನ್ನು ಕಳುಹಿಸಿದ್ದಾರೆ.ಈ ವಿಷಯದಲ್ಲಿ, ಭಾರತವು ಚೀನಾ ಮತ್ತಿತರ ದೇಶಗಳನ್ನು ಹಿಂದಿಕ್ಕಿ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.ಚೈನಿಗರು 6400 ಕೋಟಿ ಡಾಲರ್ ಗಳಷ್ಟು ಹಣವನ್ನು ಕಳುಹಿಸಿದ್ದಾರೆ. ಫಿಲಿಫೈನ್ಸ್ನವರು 3300 ಕೋಟಿ ಡಾಲರ್ ಕಳುಹಿಸಿರುವುದಾಗಿ ತಿಳಿದು ಬಂದಿದೆ.

ಯುಎಇ ಸೆಂಟ್ರಲ್ ಬ್ಯಾಂಕ್ ವರದಿಯ ಪ್ರಕಾರ, ಭಾರತೀಯರು ಸೇರಿದಂತೆ ವಿದೇಶೀಯರು ಕಳೆದ ವರ್ಷ ಒಟ್ಟು $ 16,430 ಕೋಟಿ ಹಣವನ್ನು ವಿದೇಶಕ್ಕರ ಕಳುಹಿಸಿದ್ದಾರೆ.

error: Content is protected !! Not allowed copy content from janadhvani.com