janadhvani

Kannada Online News Paper

ದಮ್ಮಾಮ್ : ಕಳೆದ ಹತ್ತು ವರ್ಷಗಳಿಂದ ದಮ್ಮಾಂ 91ರಲ್ಲಿ ಬಕಾಲ ನಡೆಸುತ್ತಿದ್ದ ಕೇರಳ ತಿರುವನಂತಪುರಂ ಸ್ವದೇಶಿ ಮುಹಮ್ಮದ್ ಸಿದ್ದೀಕ್‌ ಎನ್ನುವ ಸಹೋದರನು ಕೆಲವು ದಿನಗಳ ಮುನ್ನ ಅಸೌಖ್ಯದ ಕಾರಣದಿಂದ ಸೊಂಟದ ಕೆಳಭಾಗವು ಸಂಪೂರ್ಣ ನಿಶ್ಚಲವಾಗಿ ಯಾರ ಸಹಾಯವೂ ಇಲ್ಲದೇ ಎದ್ದೇಳದ ಸ್ಥಿತಿಯಲ್ಲಿದ್ದರು.

ಕಳೆದ ಐದು ವರ್ಷಗಳಿಂದ ಊರಿಗೆ ತೆರಳದೇ ಇದ್ದ ಇವರ ಬಗ್ಗೆ ಕರ್ನಾಟಕ ಕಲ್ಕರಲ್ ಫೌಂಡೇಶನ್ (ಕೆ.ಸಿ.ಎಫ್) ನಾರ್ತ್ ಸೆಕ್ಟರ್ ಕಾರ್ಯಕರ್ತನಾದ ನಾಸಿರ್ ಕುತ್ತಾರ್ ರವರು ಕೆ.ಸಿ.ಎಫ್ ದಮ್ಮಾಂ ಝೋನ್ ಸಾಂತ್ವನ ವಿಭಾಗದ ಅಧ್ಯಕ್ಷರಾದ ಬಾಷಾ ಗಂಗಾವಳಿ ಹಾಗೂ ಕೆ.ಸಿ.ಎಫ್ ನಾಯಕರಾದ ಮುಹಮ್ಮದ್ ಮಲೆಬೆಟ್ಟು ರವರಿಗೆ ವಿಷಯ ತಿಳಿಸಿದಾಗ, ತಕ್ಷಣವೇ ಸ್ಪಂದಿಸಿ ಆ ಸಹೋದರನ ಚಿಕಿತ್ಸೆ ಮತ್ತು ಊರಿಗೆ ಕಳುಹಿಸಲು ಬೇಕಾದ ಎಲ್ಲಾ ದಾಖಲೆಗಳನ್ನು ಸರಿಪಡಿಸಿ 28 ಮಾರ್ಚ್ 2023 ರ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ. ಜೊತೆಗೆ ICF ನಾಯಕರಾದ ಕೇರಳ ಸ್ವದೇಶಿ ನಾಸಿರ್ ರವರು ಕೂಡಾ ಸಹಕರಿಸಿದ್ದಾರೆ.

ಕೆಸಿಎಫ್ ದಮ್ಮಾಂ ಝೋನ್

error: Content is protected !! Not allowed copy content from janadhvani.com