janadhvani

Kannada Online News Paper

ತಾಜುಶ್ಶರೀಅಃ ಅಲೀಕುಂಞಿ ಉಸ್ತಾದ್(ಖ.ಸಿ)-ಇಂದು ಎರಡನೇ ಉರೂಸ್ ಸಮಾರಂಭ

ಶಿರಿಯ: ಹಲವಾರು ಮೊಹಲ್ಲಾಗಳ ಖಾಝಿಯೂ ಸಮಸ್ತ ಉಪಾಧ್ಯಕ್ಷರೂ ಆಗಿದ್ದ ತಾಜುಶ್ಶರೀಅಃ ಅಲೀಕುಂಞಿ ಉಸ್ತಾದರ ಎರಡನೇ ಉರೂಸ್ ಸಮಾರಂಭವು ಇಂದು (ಮಾರ್ಚ್ 16) ನಡೆಯಲಿದೆ.

ಬೆಳಿಗ್ಗೆ 9ಗಂಟೆಗೆ ನಡೆಯುವ ಮಖಾಂ ಝಿಯಾರತಿಗೆ ಸಯ್ಯಿದ್ ಎಂಎಸ್ ತಂಙಳ್ ಮದನಿ ಮಾಸ್ತಿಕುಂಡ್ ನೇತೃತ್ವ ವಹಿಸುವರು. ಬೆಳಿಗ್ಗೆ 9.15ಕ್ಕೆ ಮುಟ್ಟಂ ಕುಂಞಿಕೋಯ ತಂಙಳ್ ಧ್ವಜಾರೋಹಣಕ್ಕೆ ನೇತೃತ್ವ ನೀಡುವರು. ಸಯ್ಯಿದ್ ಹಾಮಿದ್ ತಂಙಳ್ ಮಂಜೇಶ್ವರಂ ಖತ್ಮುಲ್ ಖುರ್‌ಆನ್ ಪ್ರಾರಂಭ ನಡೆಸುವರು. ಸಂಜೆ 4 ಗಂಟೆಗೆ ನಡೆಯುವ ದ್ಸಿಕ್ರ್ ಮೌಲಿದ್ ಮಜ್ಲಿಸಿಗೆ ಸಯ್ಯಿದ್ ಕೆಎಸ್ ಅಲಿ ತಂಙಳ್ ಕುಂಬೋಲ್, ಸಯ್ಯಿದ್ ಕೆಎಸ್ ಜಅಫರ್ ಸ್ವಾದಿಕ್ ತಂಙಳ್ ಕುಂಬೋಲ್, ಸಯ್ಯಿದ್ ಅಬ್ದುಲ್ ರಹ್ಮಾನ್ ಶಹೀರ್ ಅಲ್ ಬುಖಾರಿ ಮಳ್‌ಹರ್ ಮುಂತಾದವರು ನೇತೃತ್ವ ವಹಿಸುವರು.

ರಾತ್ರಿ 7 ಗಂಟೆಗೆ ನಡೆಯುವ ಜಲ್ಸತುಲ್ ಉರೂಸ್ ಕಾರ್ಯಕ್ರಮದಲ್ಲಿ ಸಯ್ಯಿದ್ ಸಾದಾತ್ ತಂಙಳ್ ಗುರುವಾಯನಕೆರೆ ದುಃಆ ನಡೆಸುವರು. ಅಬ್ದುಲ್ ರಹ್ಮಾನ್ ನಿಝಾಮಿ ಶಿರಿಯರವರ ಅಧ್ಯಕ್ಷತೆಯಲ್ಲಿ ಸಯ್ಯಿದ್ ಕೆಎಸ್ ಆಟ್ಟಕ್ಕೋಯ ತಂಙಳ್ ಕುಂಬೋಲ್ ಉದ್ಘಾಟಿಸುವರು. ಶೈಖುನಾ ಮಾಣಿ ಉಸ್ತಾದ್, ಅತಾಉಲ್ಲಾ ತಂಙಳ್ ಉದ್ಯಾವರ, ಮಾಣಿಕ್ಕೋತ್ ಅಬ್ದುಲ್ಲ ಮುಸ್ಲಿಯಾರ್, ಹುಸೈನ್ ಸಅದಿ ಕೆಸಿ ರೋಡ್, ಎಕೆಎಂ ಅಶ್ರಫ್ ಎಂಎಲ್‌ಎ ಮುಂತಾದವರು ಪ್ರಭಾಷಣೆ ನಡೆಸುವರು. ಡಾ.ಫಾರೂಕ್ ನಈಮಿ ಕೊಲ್ಲಂ ಅನುಸ್ಮರಣ ಭಾಷಣ ನಡೆಸುವರು.

ರಾತ್ರಿ 9 ಗಂಟೆಗೆ ನಡೆಯುವ ಬುರ್ದಾ ಮಜ್ಲಿಸಿಗೆ ತ್ವಾಹ ತಂಙಳ್ ಪೂಕೋಟೂರ್, ಅಬ್ದುಸ್ಸಮದ್ ಅಮಾನಿ ಪಟ್ಟುವಂ, ಹಾಫಿಳ್ ಸ್ವಾದಿಕ್ ಫಾಳಿಲಿ ಮುಂತಾದವರು ನೇತೃತ್ವ ನೀಡುವರು.
ಸಮಾರೋಪ ಸಮಾರಂಭಕ್ಕೆ ಸಯ್ಯಿದ್ ಸುಹೈಲ್ ಅಸ್ಸಖಾಫ್ ಮಡಕ್ಕರ ನೇತೃತ್ವ ವಹಿಸುವರು. 9.30ಕ್ಕೆ ಅನ್ನದಾನದೊಂದಿಗೆ ಸಮಾಪ್ತಿಗೊಳ್ಳಲಿದೆ.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರು:
ಉರೂಸ್ ಸಮಿತಿ ಪದಾಧಿಕಾರಿಗಳಾದ ಶಾಫಿ ಸಅದಿ ಶಿರಿಯ, ಮುಹಮ್ಮದ್ ಸಖಾಫಿ ಕುಳೂರ್, ಡಿಕೆ ಉಮರ್ ಸಖಾಫಿ, ಅನ್ವರ್ ಸಖಾಫಿ ಶಿರಿಯ, ಸಹಲ್ ಸಖಾಫಿ, ನಸೀರ್ ಶಿರಿಯ ಯೂಸುಫ್ ತರವಾಡ್

error: Content is protected !! Not allowed copy content from janadhvani.com