ದೇರಳಕಟ್ಟೆ ; ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ವ್ಯಾಪ್ತಿಯ 7 ನೇ ಡಿವಿಶನ್ ಆಗಿ ಘೋಷಿಸಿಲಾದ ದೇರಳಕಟ್ಟೆ ಡಿವಿಶನ್ ನ ರಚನಾ ಸಭೆಯು ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾಧ್ಯಕ್ಷ ನವಾಝ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಕಿನ್ಯ ಬೆಳರಿಂಗೆ ಎಸ್ಸೆಸ್ಸೆಫ್ ಆಫೀಸಿನಲ್ಲಿ ನಡೆಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ದೇರಳಕಟ್ಟೆ ಝೋನ್ ಅಧ್ಯಕ್ಷ ಇಸ್ಮಾಈಲ್ ಸಅದಿ ಉರುಮಣೆ ಸಭೆಯನ್ನು ಉದ್ಘಾಟಿಸಿದರು. ತೌಸೀಫ್ ಸಅದಿ ಹರೇಕಳ ಮುನ್ನುಡಿ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೌಫಲ್ ಫರೀದ್‌ನಗರ, ಜಿಲ್ಲಾ ಕಾರ್ಯದರ್ಶಿಗಳಾದ ಹಮೀದ್ ತಲಪಾಡಿ, ಇರ್ಶಾದ್ ಹಾಜಿ ಗೂಡಿನಬಳಿ, ಸುಹೈಲ್ ಫರಂಗಿಪೇಟೆ, ಮನ್ಸೂರ್ ಬಜಾಲ್, ಜಿಲ್ಲಾ ನಾಯಕರಗಳಾದ ಹನೀಫ್ ಅಹ್ಸನಿ ಸುರತ್ಕಲ್, ಮನ್ಸೂರ್ ಹಿಮಮಿ ಮರಿಕ್ಕಳ, ಸಿದ್ದೀಕ್ ಬಜ್ಪೆ, ಝೈನುದ್ದೀನ್ ಇರಾ ಉಪಸ್ಥಿತರಿದ್ದರು.
ನಂತರ ದೇರಳಕಟ್ಟೆ ಡಿವಿಶನ್ ಹೊಸ ನಾಯಕರನ್ನು ಆರಿಸಲಾಯಿತು. ಅಧ್ಯಕ್ಷರಾಗಿ ನೌಫಲ್ ಅಹ್ಸನಿ ಕಿನ್ಯ, ಪ್ರಧಾನ ಕಾರ್ಯದರ್ಶಿಯಾಗಿ ಉಬೈದ್ ಫರೀದ್‌ನಗರ, ಫೈನಾನ್ಸ್ ಕಾರ್ಯದರ್ಶಿಯಾಗಿ ಅಬೂಸ್ವಾಲಿಹ್ ಫಜೀರ್, ಕ್ಯಾಂಪಸ್ ಮಾಸ್ಟರ್ ಆಲಡ್ಕ, ಕ್ಯೂಡಿ ಕಾರ್ಯದರ್ಶಿಯಾಗಿ ಆಶಿಕ್ ಕಿನ್ಯ, ದಅ್‌ವಾ ಕಾರ್ಯದರ್ಶಿಯಾಗಿ ಇರ್ಫಾನ್ ಸಖಾಫಿ ಕಿನ್ಯ, ಮೀಡಿಯಾ ಕಾರ್ಯದರ್ಶಿಯಾಗಿ ಮುಸ್ತಫಾ ತೋಕರಬೆಟ್ಟು, ರೈಂಬೋ ಕಾರ್ಯದರ್ಶಿಯಾಗಿ ಇಜಾಝ್ ಫಜೀರ್ ರವರನ್ನು ಆರಿಸಲಾಯಿತು.
ಸಿದ್ದೀಕ್ ಬಜ್ಪೆ ಸ್ವಾಗತಿಸಿ, ಉಬೈದ್ ಫರೀದ್‌ನಗರ ಧನ್ಯವಾದವಿತ್ತರು.