ಮಸ್ಕತ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ DKSC ಒಮಾನ್ ವತಿಯಿಂದ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಸನ್ಮಾನ ಕಾರ್ಯಕ್ರಮ ಮಸ್ಕತ್ ನ ಅಲ್ ಫೈಲಾಕ್ ರೆಸ್ಟೋರೆಂಟ್ ಸಭಾಂಗಣದಲ್ಲಿ ದಿನಾಂಕ 04-03-2023 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಸೇರಿದವರನ್ನು ಶುಹೈಬ್ ಮುಹಿಯದ್ದೀನ್ ಪಡುಬಿದ್ರಿ ಸ್ವಾಗತಿಸಿದರು. DKSC ಅಧ್ಯಕ್ಷರಾದ ಹಾಜಿ ಮೋನಬ್ಬ ಅಬ್ದುರ್ರಹ್ಮಾನ್ ಎರ್ಮಾಳ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವಾರು ಗಣ್ಯ ವ್ಯಕಿಗಳು ಭಾಗವಹಿಸದರು ಹಾಗೂ ಹರೇಕಳ ಹಾಜಬ್ಬರ ಸಾಧನೆಯ ಕುರಿತು ವಿವರಿಸಿದರು.
ನಂತರ ಹರೇಕಳ ಹಾಜಬ್ಬರವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಹಾಜಬ್ಬರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಅಶ್ರಫ್ ಮಂಗಳೂರು, ಜನಾಬ್ ಅಯ್ಯೂಬ್ ಕೋಡಿ, ಇಬ್ರಾಹೀಂ ಹಾಜಿ ಅತ್ರಾಡಿ, ಆರಿಫ್ ಕೋಡಿ, ಉಬೈದುಲ್ಲಾ ಸಖಾಫಿ, ಯೂಸುಫ್ ಮುಕ್ಕ, ಸುಹೈಲ್ ಉಪ್ಪಿನಂಗಡಿ, ಕಲಂದರ್ ಬಾವ ಉಸ್ತಾದ್ ಇವರುಗಳು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಅನ್ಸಾರ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. DKSC ಒಮಾನ್ ಪ್ರಧಾನ ಕಾರ್ಯದರ್ಶಿ ಮುಹಿಯದ್ದೀನ್ ಪಡುಬಿದ್ರಿ ಧನ್ಯವಾದಗೈದರು.