ದೋಹಾ : ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಖತ್ತರ್ ಅಧೀನದ ದೋಹಾ ಝೋನ್ ಸಮಿತಿ ವತಿಯಿಂದ ಅರಳುವ ಕನಸು ಉತ್ಸಾಹದ ಬೆಳಕು ಎಂಬ ಘೋಷವಾಕ್ಯದ ಪ್ರತಿಭೋತ್ಸವ -2k23 ಕಾರ್ಯಕ್ರಮವು ದಿನಾಂಕ 03-03-2023 ರಂದು ದೋಹಾದ ಐಐಸಿಸಿ ಸಭಾಂಗಣದಲ್ಲಿ ನಡೆಯಿತು.
ದೋಹಾ ಝೋನ್ ಪ್ರತಿಭೋತ್ಸವ ಸಮಿತಿ ಚೇರ್ಮಾನ್ ತಲ್ಹತ್ ಪೆರ್ನೆ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸದಸ್ಯರಾದ ಯೂಸುಫ್ ಸಖಾಫಿ ಅಯ್ಯಂಗೇರಿ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಸಿಎಫ್ ನಡೆಸುವ ಕಾರ್ಯಚಟುವಟಿಕೆಗಳು ಹಾಗೂ ಪ್ರತಿಭೋತ್ಸವದ ಮಹತ್ವವನ್ನು ಸವಿಸ್ತಾರವಾಗಿ ವಿವರಿಸಿದರು.
ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿಯ ಪ್ರಧಾನಿ ಕಾರ್ಯದರ್ಶಿ ಫಾರೂಖ್ ಕೃಷ್ಣಾಪುರ, ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಖಾಲಿದ್ ಹಿಮಮಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಶುಭಹಾರೈಸಿದರು.
ವೇದಿಕೆಯಲ್ಲಿ ದೋಹಾ ಝೋನ್ ಅಧ್ಯಕ್ಷರಾದ ನಿಯಾಝ್ ಕುರ್ನಾಡ್, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸದಸ್ಯರಾದ ಕಬೀರ್ ದೇರಳಕಟ್ಟೆ, ಅಲ್’ಮದೀನಾ ಮಂಜನಾಡಿ ಖತ್ತರ್ ಸಮಿತಿ ಅಧ್ಯಕ್ಷರಾದ ಹಾಜಿ ಅರಬಿ ಕುಙ್ಞಿ, ರಾಷ್ಟ್ರೀಯ ಪ್ರತಿಭೋತ್ಸವ ಸ್ವಾಗತ ಸಮಿತಿ ಕನ್ವೀನರ್ ಫಾರೂಖ್ ಜೆಪ್ಪು, ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗ ಅಧ್ಯಕ್ಷರಾದ ಮಿರ್ಶಾದ್ ಕನ್ಯಾನ, ಅಝೀಝಿಯಾ ಅಧ್ಯಕ್ಷರಾದ ಅಲಿ ಕೊಡಗು, ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮುನೀರ್ ಮಾಗುಂಡಿ ಉಪಸ್ಥಿತರಿದ್ದರು.
ಆರಂಭದಲ್ಲಿ ಆಧ್ಯಾತ್ಮಿಕ ಸ್ವಲಾತ್ ಮಜ್ಲಿಸ್ ಹಾಗೂ ಕೆಸಿಎಫ್ ಮದೀನಾ ಖಲೀಫಾ ಝೋನ್ ಅಧ್ಯಕ್ಷರಾದ ಇಸ್ಹಾಖ್ ನಿಝಾಮಿ ರವರಿಂದ ಖಿರಾಅತ್ ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಮುಖ್ಯ ಭಾಗವಾಗಿ ಮಕ್ಕಳನ್ನೊಳಗೊಂಡ ವಿವಿಧ ಪ್ರತಿಭೆಗಳಿಂದ ಭಾಷಣ, ಹಾಡು, ಕ್ವಿಝ್, ಹಿಫ್ಳ್ ಖುರ್’ಆನ್ ಎಂಬಿತ್ಯಾದಿ ವಿಭಾಗಗಳಲ್ಲಿ ನಡೆದ ಸ್ಪರ್ಧೆಯು ನೆರೆದಿರುವ ಅತಿಥಿಗಳು ಹಾಗೂ ಕಾರ್ಯಕರ್ತರಿಗೆ ವಿಶೇಷ ಮನರಂಜನೆಯಾಗಿತ್ತು.
ಕೆಸಿಎಫ್ ದೋಹಾ ಝೋನ್ ಪ್ರಧಾನ ಕಾರ್ಯದರ್ಶಿ ಸದಕತುಲ್ಲಾ ಕೂಳುರು ಸ್ವಾಗತಿಸಿ, ದೋಹಾ ಝೋನ್ ಪ್ರತಿಭೋತ್ಸವ ಸಮಿತಿ ಕನ್ವೀನರ್ ಹಾಶಿರ್ ಕೆಸಿ ರೋಡ್ ವಂದಿಸಿದರು. ಹಸೈನಾರ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.