janadhvani

Kannada Online News Paper

1

ರೀ ಎಂಟ್ರಿಯಲ್ಲಿ ಬರುವ ಗೃಹ ಕಾರ್ಮಿಕರನ್ನು ವಿಮಾನ ನಿಲ್ದಾಣಗಳಲ್ಲಿ ಉದ್ಯೋಗದಾತರೇ ಸ್ವೀಕರಿಸಬೇಕು- ಮುಸನೆದ್

ಮೊದಲ ಬಾರಿಗೆ ಆಗಮಿಸುವ ಗೃಹ ಕಾರ್ಮಿಕರನ್ನು ಸ್ವೀಕರಿಸುವುದು ನೇಮಕಾತಿ ಕಚೇರಿಗಳ ಜವಾಬ್ದಾರಿಯಾಗಿದೆ

ರಿಯಾದ್: ರಜೆಯಲ್ಲಿ ಮನೆಗೆ ತೆರಳಿ, ಸೌದಿಗೆ ಹಿಂದಿರುಗುವ ಗೃಹ ಕಾರ್ಮಿಕರನ್ನು ವಿಮಾನ ನಿಲ್ದಾಣಗಳಲ್ಲಿ ಸ್ವೀಕರಿಸಲು ಉದ್ಯೋಗದಾತರು ಸಂಪೂರ್ಣ ಜವಾಬ್ದಾರರಾಗಿರುತ್ತಾರೆ ಎಂದು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ‘ಮುಸನೆದ್’ ಪ್ಲಾಟ್‌ಫಾರ್ಮ್(Musaned Platform) ತಿಳಿಸಿದೆ.

ದೇಶದ ಏಳು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಗೃಹ ಕಾರ್ಮಿಕರನ್ನು ಸ್ವೀಕರಿಸುವ ಸೌಲಭ್ಯವಿದೆ ಎಂದು ‘ಮುಸನೆದ್’ ತಿಳಿಸಿದೆ.

ರಿಯಾದ್ ಕಿಂಗ್ ಖಾಲಿದ್ ವಿಮಾನ ನಿಲ್ದಾಣ, ದಮಾಮ್ ಕಿಂಗ್ ಫಹದ್ ವಿಮಾನ ನಿಲ್ದಾಣ, ಖಸೀಮ್‌ನ ಅಮೀರ್ ನೈಫ್ ವಿಮಾನ ನಿಲ್ದಾಣ ಮತ್ತು ಮದೀನಾದ ಅಮೀರ್ ಮುಹಮ್ಮದ್ ವಿಮಾನ ನಿಲ್ದಾಣ ಹಾಗೂ ಹಾಯಿಲ್, ಅಲ್-ಅಹ್ಸಾ ಮತ್ತು ಅಬಹಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಈ ಸೌಲಭ್ಯವಿದೆ ಎಂದು ಮುಸನೆದ್ ಹೇಳಿದೆ.

ಉದ್ಯೋಗದಾತರು ಗೃಹ ಕಾರ್ಮಿಕರನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಸ್ವೀಕರಿಸಲು ಬದ್ಧರಾಗಿದ್ದಾರೆ ಮತ್ತು ಹೆಚ್ಚಿನ ಮಾಹಿತಿಗಾಗಿ 920002866 ಅನ್ನು ಸಂಪರ್ಕಿಸಬಹುದು ಎಂದು ಮುಸನೆದ್ ಮಾಹಿತಿ ನೀಡಿದೆ.

ಮೊದಲ ಬಾರಿಗೆ ಸೌದಿ ಅರೇಬಿಯಾಕ್ಕೆ ಆಗಮಿಸುವ ಗೃಹ ಕಾರ್ಮಿಕರನ್ನು ಸ್ವೀಕರಿಸುವುದು ಮತ್ತು ಮಾಲೀಕರಿಗೆ ಹಸ್ತಾಂತರಿಸುವುದು ನೇಮಕಾತಿ ಕಚೇರಿಗಳ (Recruitment Office) ಜವಾಬ್ದಾರಿಯಾಗಿದೆ. ಮತ್ತು ಎಕ್ಸಿಟ್ ರೀ ಎಂಟ್ರಿಯಲ್ಲಿ ಆಗಮಿಸುವವರನ್ನು ಉದ್ಯೋಗದಾತರು ನೇರವಾಗಿ ಸ್ವೀಕರಿಸಬೇಕು ಎಂದು ಪಾಸ್‌ಪೋರ್ಟ್‌ಗಳ ಜನರಲ್ ಡೈರೆಕ್ಟರೇಟ್ (Jawazat) ಈ ಹಿಂದೆ ಘೋಷಿಸಿತ್ತು.

1
1
1

error: Content is protected !! Not allowed copy content from janadhvani.com