janadhvani

Kannada Online News Paper

ಕುಟುಂಬ ಸಮೇತ ಯುಎಇಗೆ ಪ್ರಯಾಣಿಸಲು 60 ಮತ್ತು180 ದಿನಗಳ ಹೊಸ ಗ್ರೂಪ್ ವೀಸಾ

60 ದಿನಗಳು ಮತ್ತು 180 ದಿನಗಳ ಮಾನ್ಯತೆಯೊಂದಿಗೆ ಏಕ ಪ್ರವೇಶ ಮತ್ತು ಬಹು ಪ್ರವೇಶ ವೀಸಾಗಳು ಗುಂಪು ವೀಸಾಗಳಾಗಿ ಲಭ್ಯವಿರುತ್ತವೆ.

ಅಬುಧಾಬಿ: ಕುಟುಂಬ ಸಮೇತ ಯುಎಇಗೆ ಆಗಮಿಸುವವರಿಗೆ ಗ್ರೂಪ್ ವೀಸಾ ನೀಡಲಾಗುವುದು ಎಂದು ಯುಎಇಯಲ್ಲಿನ ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಮತ್ತು ಸಿಟಿಜನ್‌ಶಿಪ್ (The Federal Authority for Identity and Citizenship),ಕಸ್ಟಮ್ಸ್ ಮತ್ತು ಬಂದರುಗಳ ಭದ್ರತೆ (Customs, and Ports Security) ಫೆಡರಲ್ ಪ್ರಾಧಿಕಾರ (ಐಸಿಪಿ) ಪ್ರಕಟಿಸಿದೆ. ಪ್ರವಾಸೋದ್ಯಮ, ವೈದ್ಯಕೀಯ ಚಿಕಿತ್ಸೆ ಮತ್ತು ರೋಗಿಯ ಜೊತೆ ತೆರಳುವ ಉದ್ದೇಶಗಳಿಗಾಗಿ ಗುಂಪು ವೀಸಾಗಳನ್ನು ಪಡೆಯಬಹುದು.

ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಮತ್ತು ಸಿಟಿಜನ್‌ಶಿಪ್ (The Federal Authority for Identity and Citizenship),ಕಸ್ಟಮ್ಸ್ ಮತ್ತು ಬಂದರುಗಳ ಭದ್ರತೆ (Customs, and Ports Security) ಪ್ರಾಧಿಕಾರದ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ, ಯುಎಇಯಲ್ಲಿ ವೀಸಾಗಳು ಮತ್ತು ಪ್ರವೇಶ ಪರವಾನಗಿಗಳಿಗೆ ಸಂಬಂಧಿಸಿದ ಸ್ಮಾರ್ಟ್ ಚಾನೆಲ್‌ಗಳ ಮೂಲಕ ಲಭ್ಯವಿರುವ 15 ಸೇವೆಗಳನ್ನು ಇನ್ನಷ್ಟು ಸುಧಾರಿಸಲಾಗಿದೆ.

ವರದಿಗಳ ಪ್ರಕಾರ, 60 ದಿನಗಳು ಮತ್ತು 180 ದಿನಗಳ ಮಾನ್ಯತೆಯೊಂದಿಗೆ ಏಕ ಪ್ರವೇಶ ಮತ್ತು ಬಹು ಪ್ರವೇಶ ವೀಸಾಗಳು ಗುಂಪು ವೀಸಾಗಳಾಗಿ ಲಭ್ಯವಿರುತ್ತವೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ. ಗುಂಪು ವೀಸಾಗಳು ಲಭಿಸುವುದರೊಂದಿಗೆ ವಲಸಿಗರಿಗೆ ಹೆಚ್ಚು ಪ್ರಯೋಜನವಾಗಲಿದೆ.

ಇದಲ್ಲದೆ, 90 ದಿನಗಳ ಸಂದರ್ಶಕ ವೀಸಾದಲ್ಲಿ ಯುಎಇಗೆ ಆಗಮಿಸಿದವರು AED 1,000 ಶುಲ್ಕವನ್ನು ಪಾವತಿಸುವ ಮೂಲಕ ತಮ್ಮ ವೀಸಾವನ್ನು ಇನ್ನೂ 30 ದಿನಗಳವರೆಗೆ ವಿಸ್ತರಿಸಬಹುದು. ಇದಕ್ಕಾಗಿ ದೇಶ ತೊರೆಯುವ ಅಗತ್ಯವಿಲ್ಲ. ಆದರೆ, ದೇಶವನ್ನು ತೊರೆದು ಮತ್ತೊಂದು ವೀಸಾದಲ್ಲಿ ಹಿಂತಿರುಗಿದರೆ ಎರಡು ಅಥವಾ ಮೂರು ತಿಂಗಳು ಯುಎಇಯಲ್ಲಿ ಉಳಿಯಬಹುದು. ಆದ್ದರಿಂದ ಹೆಚ್ಚಿನ ಜನರು ಇದನ್ನು ಆಯ್ಕೆ ಮಾಡುತ್ತಾರೆ.

ಯುಎಇಯಲ್ಲಿ ನಿವಾಸ ವೀಸಾಗಳನ್ನು ಹೊಂದಿರುವ ವಲಸಿಗರಿಗೆ ತಮ್ಮ ಪೋಷಕರು, ಸಂಗಾತಿ ಮತ್ತು ಮಕ್ಕಳನ್ನು ಯುಎಇಗೆ ತಮ್ಮ ಸ್ವಂತ ಪ್ರಾಯೋಜಕತ್ವದ ಅಡಿಯಲ್ಲಿ 90 ದಿನಗಳವರೆಗೆ ಮಾನ್ಯವಾಗಿರುವ ವೀಸಾಗಳ ಮೇಲೆ ಕರೆತರಲು ಹೊಸ ಸುಧಾರಣೆಯು ಸಾಧ್ಯವಾಗಲಿದೆ. ವೈಯಕ್ತಿಕ ವೀಸಾ ಪಡೆಯಲು ವಲಸಿಗರು ಕನಿಷ್ಠ 8000 ದಿರ್ಹಮ್‌ಗಳ ಮಾಸಿಕ ವೇತನವನ್ನು ಹೊಂದಿರಬೇಕು. ಸ್ವಂತ ಹೆಸರಿನಲ್ಲಿ ಕಟ್ಟಡದ ಗುತ್ತಿಗೆ ಒಪ್ಪಂದ ಇರಬೇಕು ಎಂದೂ ಷರತ್ತುಗಳಲ್ಲಿ ಹೇಳಲಾಗಿದೆ.

error: Content is protected !! Not allowed copy content from janadhvani.com