janadhvani

Kannada Online News Paper

1

ಅಡ್ಯನಡ್ಕ ಶೈಕ್ಷಣಿಕ ಕಾರ್ಯಾಗಾರ ಮೇಲೆ ಸಂಘೀ ಧಾಳಿ- ಮುಸ್ಲಿಮ್ ಒಕ್ಕೂಟ ಖಂಡನೆ

ಪ್ರಯೋಜನಾರ್ಥಿ ವಿದ್ಯಾರ್ಥಿಗಳನ್ನು ಜಾತಿ, ಧರ್ಮ ಆಧಾರದಲ್ಲಿ ವಿಂಗಡಿಸುವುದು ಅಕ್ಷ್ಟಮ್ಮ ಅಪರಾಧ

ಮಂಗಳೂರು: ವಿಟ್ಲ ಅಡ್ಯನಡ್ಕದಲ್ಲಿ ಸರಕಾರೇತರ ಸಂಘ ಸಂಸ್ಥೆಯು ಸ್ಥಳೀಯ ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರ ನಡೆಸಿದ್ದು, ಈ ಕಾರ್ಯಾಗಾರಕ್ಕೆ,ಮುಸ್ಲಿಮೇತರ ವಿಧ್ಯಾರ್ಥಿಗಳ ಭಾಗವಹಿಸುವಿಕೆಯನ್ನು ವಿರೋಧಿಸಿ ಕೆಲವು ಸಂಘೀ ಯುವಕರು ನುಗ್ಗಿ ದಾಂಧಲೆ ನಡೆಸಿರುವುದನ್ನು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ತೀವ್ರವಾಗಿ ಖಂಡಿಸಿದ್ದಾರೆ.

ಈ ಕಾರ್ಯಾಗಾರ ನಡೆಸಿರುವುದೇ ಅನ್ಯಾಯ ಎಂಬಂತೆ ಆಯೋಜಕರು ಮತ್ತು ಸಂಪನ್ಮೂಲ ವ್ಯಕ್ತಿಗಳ ಮೇಲೆ ಸ್ಥಳೀಯ ಪೊಲೀಸು ಸ್ಟೇಶನ್ ನಲ್ಲಿ ಪ್ರಕರಣ ದಾಖಲಿಸಿರುವುದು ತೀವ್ರ ಖಂಡನೀಯ ಮತ್ತು ಸರಕಾರ ಜನರ ಶೈಕ್ಷಣಿಕ ಹಕ್ಕನ್ನು ಕಸಿದು ಕೊಳ್ಳುವ ಪ್ರಯತ್ನವಾಗಿದೆ.

ಕಾರ್ಯಾಗಾರದಲ್ಲಿ ಮುಸ್ಲಿಮೇತರ ವಿಧ್ಯಾರ್ಥಿಗಳು ಭಾಗವಹಿಸಿದ್ದನ್ನು ಆಕ್ಷೇಪಿಸಿರುವುದು, ಸಂಘಿಗಳ ಮನೋಸ್ಥಿತಿಯನ್ನು ಬಹಿರಂಗ ಪಡಿಸುತ್ತದೆ. ಪ್ರಯೋಜನಾರ್ಥಿ ವಿದ್ಯಾರ್ಥಿಗಳನ್ನು ಜಾತಿ, ಧರ್ಮ ಆಧಾರದಲ್ಲಿ ವಿಂಗಡಿಸುವುದು ಅಕ್ಷ್ಟಮ್ಮ ಅಪರಾಧ. ಧಾಳಿ ಕೊರರ ವಿರುದ್ಧ ಪೊಲೀಸರು ಶಾಂತಿ ಭಂಗ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕಿದೆ ಎಂದು ಕೆ.ಅಶ್ರಫ್(ಮಾಜಿ ಮೇಯರ್) ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

1
1
1

error: Content is protected !! Not allowed copy content from janadhvani.com