janadhvani

Kannada Online News Paper

1

ಸೌದಿ: ಒಂಟೆಗೆ ಡಿಕ್ಕಿ ಹೊಡೆದು ಭೀಕರ ಅಪಘಾತ- ಕರಾವಳಿಯ ಮೂವರು ಸೇರಿ ನಾಲ್ವರು ಮೃತ್ಯು

ದಮ್ಮಾಮ್: ಇಲ್ಲಿನ ಅಲ್ ಅಹ್ಸಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮೂವರು ಯುವಕರು ಸಹಿತ ನಾಲ್ಕು ಮಂದಿ ಮೃತಪಟ್ಟಿದ್ದಾಗಿ ವರದಿಯಾಗಿದೆ.

ಇವರು ಸಂಚರಿಸುತ್ತಿದ್ದ ಕಾರಿಗೆ ಒಂಟೆಯೊಂದು ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಮೃತರನ್ನು ಹಳೆಯಂಗಡಿ ಕದಿಕೆಯ ರಿಝಾನ್, ಕೃಷ್ಣಾಪುರದ ಅಕೀಲ್, ನಾಸಿರ್ ಮತ್ತೋರ್ವ ಯುವಕನನ್ನು ಬಾಂಗ್ಲಾದೇಶದ ಶಿಹಾಬ್ ಎಂದು ಗುರುತಿಸಲಾಗಿದೆ.

ಇವರು ಕೆಲಸಕ್ಕೆಂದು ಮಧ್ಯರಾತ್ರಿ ಪಿಕ್ ಅಪ್ ವಾಹನದಲ್ಲಿ ಸೌದಿ ಅರೇಬಿಯಾದ ರಿಯಾದ್ ಪ್ರಾಂತ್ಯದ ಅಲ್ ಅಹ್ಸಾ ಖುರೈಶ್ ರಸ್ತೆಯಲ್ಲಿ ಸಂಚರಿಸುತ್ತಿದ್ದಂತೆ ಒಂಟೆಯೊಂದು ಏಕಾಏಕಿ ಅಡ್ಡ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿದಂತೆ ಒಟ್ಟು ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇವರೆಲ್ಲರೂ SAQCO ಎಂಬ ಕಂಪನಿಯಲ್ಲಿ ನೌಕರರಾಗಿದ್ದರು ಎಂದು ಕೆಸಿಎಫ್ ಅಲ್ ಅಹ್ಸಾ ನಾಯಕರು ಜನಧ್ವನಿಗೆ ಮಾಹಿತಿ ನೀಡಿದ್ದಾರೆ.

1
1
1

error: Content is protected !! Not allowed copy content from janadhvani.com