ಸೊಹಾರ್: ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಒಮಾನ್ ಸೊಹಾರ್ ಝೋನ್ ವತಿಯಿಂದ ಸಮಾಜ ಸೇವಕ ಅಬೂಬಕರ್ ಕಬ್ಯಾಡಿ ಪರ್ಕಳ ಅವರನ್ನು KCF ಒಮಾನ್ ರಾಷ್ಟ್ರೀಯ ನಾಯಕರ ಸಮ್ಮುಕದಲ್ಲಿ ಸನ್ಮಾನಿಸಲಾಯಿತು.
ದಕ್ಷಿಣ ಕನ್ನಡ ಉಡುಪಿ ಭಾಗದ ಬಡಜನರ ಹಾಗೂ ಹಲವಾರು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಪ್ರಸ್ತುತ ಒಮಾನ್ ಸಂದರ್ಶನದಲ್ಲಿ ಇರುವ ಜನಾಬ್ ಆಬೂಬಕರ್ ಕಬ್ಯಾಡಿ ಪರ್ಕಳ ಅವರನ್ನು ಕೆಸಿಎಫ್ ಸೊಹಾರ್ ಝೇನ್ ಅಧ್ಯಕ್ಷ ಫಾರೂಕ್ ಕುಕ್ಕಾಜೆ ಇವರ ಅಧ್ಯಕ್ಷತೆಯಲ್ಲಿ ಸೊಹಾರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಕೆಸಿಎಫ್ ನ ಕಾರ್ಯವೈಕರಿಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ಹಾಗೂ KCF ಕಾರ್ಯಕರ್ತರು ಹಾಗೂ ಪರಿಚಯಸ್ಥರಿಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದಲ್ಲಿ ತನ್ನಿಂದಾಗುವ ಯಾವುದೇ ರೀತಿಯ ಸಹಾಯ ಮಾಡುವುದಾಗಿಯೂ ಭರವಸೆಯನ್ನಿತ್ತರು.
ಈ ಸಂಧರ್ಭದಲ್ಲಿ ಕೆಸಿಎಫ್ ಒಮಾನ್ ಅಧ್ಯಕ್ಷ ಅಯ್ಯೂಬ್ ಕೋಡಿ, ಕೋಶಾಧಿಕಾರಿ ಆರಿಫ್ ಕೋಡಿ, ಪ್ರದಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ, ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ನಾಯಕರಾದ ಇಬ್ರಾಹಿಮ್ ಹಾಜಿ ಅತ್ರಾಡಿ, ಫ್ಯಾಮಿಲಿ ಮೀಟ್ ಸ್ವಾಗತ ಸಮಿತಿ ಚೇಯರ್ಮೆನ್ ಸಿದ್ದೀಕ್ ಮಾಂಬ್ಳಿ ಸುಳ್ಯ, ಡಾ. ಅಬ್ದುಲ್ ರಜಾಕ್ ಕಾಪು, ಹಾಗೂ ಝೋನ್ ನಾಯಕರಾದ ಲತೀಫ್ ಮಂಜೇಶ್ವರ, ಇಕ್ಬಾಲ್ ಮದನಿ ಚೆನ್ನಾರ್ ಉಪಸ್ಥಿತರಿದ್ದರು. ಕೆಸಿಎಫ್ ಒಮಾನ್ ಇಹ್ಸಾನ್ ವಿಭಾಗದ ಅಧ್ಯಕ್ಷ ಇಕ್ಬಾಲ್ ಎರ್ಮಾಳ್ ಅಭಿನಂದನಾ ಭಾಷಣ ಮಾಡಿದರು. ಮುಬೀನ್ ಜೋಕಟ್ಟೆ ಸ್ವಾಗತಿಸಿ, ಶಫೀಖ್ ಎಲಿಮಲೆ ಸುಳ್ಯ ವಂದಿಸಿ ಅಶ್ರಫ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿದರು.