janadhvani

Kannada Online News Paper

ವಿಟ್ಲ: ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ SMA ವಿಟ್ಲ ರೀಜಿನಲ್ ಇದರ ವತಿಯಿಂದ ಮೊಹಲ್ಲಾ ಲೀಡರ್ಸ್ ಮೀಟ್ ಕಾರ್ಯಕ್ರಮ ಒಕ್ಕೆತ್ತೂರು ಮದ್ರಸ ಸಭಾಭವನದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು SMA ವಿಟ್ಲ ರೀಜಿನಲ್ ಅಧ್ಯಕ್ಷರಾದ ಅಬ್ದುಲ್ ಹಕೀಮ್ ಶಾಂತಿನಗರ ನಿರ್ವಹಿಸಿದರು.ಬಹು ವಾಲೆಮುಂಡೋವು ಉಸ್ತಾದ್ ಪ್ರಾರ್ಥನೆಗೆ ನೇತೃತ್ವ ನೀಡಿದರು.

ಕಾರ್ಯಕ್ರಮವನ್ನು SMA ರಾಜ್ಯ ಕೋಶಾಧಿಕಾರಿ ಹಾಜಿ ಹಮೀದ್ ಕೋಡಂಗಾಯಿ ಉದ್ಘಾಟಿಸಿ ಮಾತನಾಡಿ, ಮದರಸ ಸಬಲಿಕರಣಕ್ಕಾಗಿ ಕಾರ್ಯಾಚರಿಸುತ್ತಿರುವ ಸಂಘಟನೆಯಾಗಿದೆ SMA ಈ ಸಂಘಟನೆಯನ್ನು ಬಲಿಷ್ಠಗೊಳಿಸಿ ಸಮುದಾಯದ ಯಶಸ್ವಿಗೆ ಮ್ಯಾನೇಜ್ಮೆಂಟ್ ಕೈಜೋಡಿಸಬೇಕಿದೆ. ಆದ್ದರಿಂದ ಜನವರಿ 27ನೇ ತಾರೀಕಿನಂದು ನಡೆಯುವ “ಮದರಸ ದಿನ” ಯಶಸ್ವಿಗೊಳಿಸಲು ಕರೆ ನೀಡಿದರು.

ಸಭೆಯಲ್ಲಿ ಬದುರುದ್ದೀನ್ ಅಹ್ಸನಿ ವಿಷಯ ಮಂಡನೆ ನಡೆಸಿದರು. ಪ್ರಸ್ತಾವಿಕವಾಗಿ SMA ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮದನಿ ಮಾತನಾಡಿ, ಮೊಹಲ್ಲಾ ಪ್ರತಿನಿಧಿಗಳು SMA ನಡೆಸುತ್ತಿರುವ ಸೇವೆಯನ್ನು ಮೊಹಲ್ಲಾಗಳಿಗೆ ಮುಟ್ಟಿಸುವಂತಾಗಬೇಕು. ಇದರಿಂದ ಸಮಾಜವನ್ನು ಮುಖ್ಯ ವಾಹಿನಿಗೆ ತರಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ SMA ರಾಜ್ಯ ಅಧ್ಯಕ್ಷರಾದ ಇಸ್ಮಾಯಿಲ್ ತಂಙಳ್ ಉಜಿರೆ, ಪ್ರಧಾನ ಕಾರ್ಯದರ್ಶಿ ರಹ್ಮಾನ್ ಮದನಿ ಜಪ್ಪು, ಕೋಶಾಧಿಕಾರಿ ಹಾಜಿ ಹಮೀದ್ ಕೊಡಂಗಾಯಿ, ಪತ್ರಿಕಾ ವರದಿಗಾರರಾದ ಅಲಿ ವಿಟ್ಲ ಇವರನ್ನು ವಿಟ್ಲ ರೀಜಿನಲ್ SMA ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ SMA ಜಿಲ್ಲಾ ಅಧ್ಯಕ್ಷರಾದ ಸಾದಾತ್ ತಂಙಳ್, SMA ಜಿಲ್ಲಾ ಕೋಶಾಧಿಕಾರಿ ಯೂಸುಫ್ ಸಾಜ, ಸುನ್ನಿ ಕೊಡಿನೇಷನ್ ಅಧ್ಯಕ್ಷರಾದ ಇಬ್ರಾಹಿಂ ಮದನಿ ಕಂಬಳಬೆಟ್ಟು, ಹಾಫಿಳ್ ಶರೀಫ್ ಸಖಾಫಿ, ಒಕ್ಕೆತ್ತೂರು ಮಸೀದಿ ಅಧ್ಯಕ್ಷರಾದ ಉಮ್ಮರ್ pwd, ಕಾರ್ಯದರ್ಶಿ ಇಕ್ಬಾಲ್ ಚಂದಲಿಕೆ, ಇಸ್ಮಾಯಿಲ್ ಸೂಪರ್, ಅಶ್ರಫ್ ಒಕ್ಕೆತ್ತೂರು, SMA ಝೋನ್ ಕೋಶಾಧಿಕಾರಿ ಉಮ್ಮರ್ ವಿಟ್ಲ, ಪ್ರಧಾನ ಕಾರ್ಯದರ್ಶಿ ಕಾಸಿಂ ಸಖಾಫಿ, SJM ರೇಂಜ್ ಅಧ್ಯಕ್ಷರಾದ ಶರೀಫ್ ಮದನಿ ಹಾಗೂ ಎಲ್ಲಾ ಜಮಾಅತಿನ ಖತೀಬ್ ಉಸ್ತಾದರು ಹಾಗೂ ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದ್ದು SMA ವಿಟ್ಲ ರೀಜನಲ್ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಸಖಾಫಿ ಸ್ವಾಗತಿಸಿದರು.ಹಾರಿಸ್ ಮದನಿ ಶಾಂತಿನಗರ ವಂದಿಸಿದರು.

1
1
1

error: Content is protected !! Not allowed copy content from janadhvani.com