janadhvani

Kannada Online News Paper

ಯುವಕನ ಫೋಟೋ ಬಳಸಿ ಸಾಮಾಜಿಕ ತಾಣಗಳಲ್ಲಿ ಸುಳ್ಳು ಪ್ರಚಾರ- ಸೈಬರ್ ಸೆಲ್‌ಗೆ ದೂರು

ಮಂಗಳೂರು: ಅಮಾಯಕ ಯುವಕನೋರ್ವನ ಫೋಟೋ ಬಳಸಿ ಸಾಮಾಜಿಕ ತಾಣಗಳಲ್ಲಿ ಧ್ವನಿ ಸಂದೇಶವನ್ನು ಹಂಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಸೆಲ್ ಪೋಲೀಸರಿಗೆ ದೂರು ದಾಖಲಿಸಲು ಚಿಂತನೆ.

ಬೆಂಗಳೂರಿನ ಸೂಪರ್‌ಮಾರ್ಕೆಟ್ ಒಂದರಲ್ಲಿ ಕೆಲಸ ಮಾಡುತ್ತಿರುವ, ಮೂಲತಃ ಮಂಗಳೂರಿನ ಯುವಕನ ಫೋಟೋವನ್ನು ಬಳಸಿ ವೈಯಕ್ತಿಕ ತೇಜೋವಧೆ ನಡೆಸಿರುವ ವ್ಯಕ್ತಿಯ ವಿರುದ್ಧ ಮಂಗಳೂರು ಮತ್ತು ಬೆಂಗಳೂರು ಸೈಬರ್ ಸೆಲ್ ಪೋಲೀಸರಿಗೆ ದೂರು ನೀಡಲು ಚಿಂತನೆ ನಡೆಸಲಾಗಿದೆ.

ಇತ್ತೀಚೆಗೆ ಕೆಲ ಯುವಕರು ಬೆಂಗಳೂರಿಗೆ ತೆರಳಿ ಲಿಂಗ ಪರಿವರ್ತನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ, ಫೋಟೋದಲ್ಲಿರುವ ಯುವಕನಿಗೆ ನಂಟನ್ನು ಕಲ್ಪಿಸಿ ಸಾಮಾಜಿಕ ತಾಣಗಳಲ್ಲಿ ಸುಳ್ಳು ಪ್ರಚಾರ ನಡೆಸಿರುವ ವ್ಯಕ್ತಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇಂತಹಾ ಯಾವುದೇ ನೀಚ ಕೃತ್ಯಗಳಲ್ಲಿ ತೊಡಗಿಕೊಳ್ಳದೆ, ಉತ್ತಮ ಜೀವನ ಸಾಗಿಸುತ್ತಿರುವ ಯುವಕನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಸಮೂಹದೆಡೆಯಲ್ಲಿ ಬಿತ್ತರಿಸಿ, ಯುವಕನ ಬಾಳಿಗೆ ಮಸಿ ಬಳಿಯಲು ಯತ್ನಿಸಿರುವ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೂರು ನೀಡುವಂತೆ ಯುವಕನನ್ನು ಬಲ್ಲವರು ಒತ್ತಾಯಿಸಿದ್ದಾರೆ.