ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶ ಸೋಮವಾರ ಬೆಳಗ್ಗೆ 11ಕ್ಕೆ ವೆಬ್ಸೈಟ್ನಲ್ಲಿ ಪ್ರಕಟವಾಗಿದೆ. ಈ ಬಾರಿ ಶೇ 59.56ರಷ್ಟು ಫಲಿತಾಂಶ ಪ್ರಕಟವಾಗಿದೆ, ಉಡುಪಿ ಜಿಲ್ಲೆ ಪ್ರಥಮ ಸ್ಥಾನಗಳಿಸಿದ್ದು, ಚಿಕ್ಕೋಡಿ ಕೊನೆ ಸ್ಥಾನ ಗಳಿಸಿದೆ. ಈ ವರ್ಷದ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಪಿಯು ಮಂಡಳಿಯ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.
ಮೇ 1ರಂದು ರಾಜ್ಯದ ಎಲ್ಲಾ ಪಿಯು ಕಾಲೇಜುಗಳಲ್ಲಿ ದೊರೆಯಲಿದೆ. ಈ ಬಾರಿ ಒಟ್ಟು 4,725 ಕಾಲೇಜುಗಳಿಂದ 6,90,150 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಉತ್ತರ ಪತ್ರಿಕೆಗಳ ನಕಲು ಪ್ರತಿಯನ್ನು ಪಡೆಯಲು, ಮರು ಎಣಿಕೆ ಹಾಗೂ ಮರು ಮೌಲ್ಯಮಾಪನಕ್ಕೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ. ಮೇ ತಿಂಗಳ ಅಂತ್ಯದಲ್ಲಿ ಪೂರಕ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಮಂಡಳಿ ಹೇಳಿದೆ.
ಎಸ್ಎಂಎಸ್ ಮೂಲಕ ಫಲಿತಾಂಶ: ವಿದ್ಯಾರ್ಥಿಗಳು ಎಸ್ಎಂಎಸ್ ಮೂಲಕವೂ ಫಲಿತಾಂಶ ತಿಳಿಯಬಹುದು. ಮೊಬೈಲ್ನಲ್ಲಿ KAR12 ಎಂದು ಟೈಪ್ ಮಾಡಿ ಸ್ಪೇಸ್ ಕೊಟ್ಟು ರೋಲ್ ನಂಬರ್ ನಮೂದಿಸಿ 56263ಗೆ ಸಂದೇಶ ಕಳುಹಿಸಬೇಕು.
ಇನ್ನಷ್ಟು ಸುದ್ದಿಗಳು
ವಾಟ್ಸಾಪ್ ಹೊಸ ಫೀಚರ್- ಅನಗತ್ಯ ಮೆಸೇಜ್ ತಾನಾಗಿಯೇ ಡಿಲೀಟ್
ಬಾಲಾಕೋಟ್ ದಾಳಿ: ಪಾರ್ಥೋ- ಅರ್ನಬ್ ಗೋಸ್ವಾಮಿ ವಾಟ್ಸ್ಆಪ್ ಚಾಟ್ ಕುರಿತು ತನಿಖೆಗೆ ಎನ್ ಸಿಪಿ ಆಗ್ರಹ
ರಾಜ್ಯದಲ್ಲಿ ಇಂದಿನಿಂದ ಗೋಹತ್ಯೆ ನಿಷೇಧ ಕಾಯ್ದೆ ಜಾರಿ
ಮುಸ್ಲಿಮ್ ಒಕ್ಕೂಟ ನಿಯೋಗದಿಂದ ಅ.ಸ.ಇಲಾಖೆ ಚೇರ್ಮನ್ ಭೇಟಿ
ಹಿಂದಿ,ಆಂಗ್ಲಭಾಷೆಯಲ್ಲಿ ಶಂಕುಸ್ಥಾಪನೆ- ಅಮಿತ್ ಶಾ, ಸಿಎಂ ರಿಂದ ಕನ್ನಡಕ್ಕೆ ದ್ರೋಹ
ಅಮಾಯಕರ ಬಂಧನ: ಜ.22 ರಂದು ಬೆಂಗಳೂರು ಬಂದ್- ಮುಸ್ಲಿಂ ಸಂಘಟನೆ ಕರೆ