ವಿಟ್ಲ: ಇಲ್ಲಿನ ಮದಕ ಎಂಬಲ್ಲಿ ಡಿ. 30, ಶುಕ್ರವಾರ ರಾತ್ರಿ ಗಂಟೆ 7ಗೆ ಜಲಾಲಿಯ ರಾತಿಬ್ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಸುನ್ನಿ ಜಮಿಯ್ಯತುಲ್ ಉಲಮಾ ಉಪಾಧ್ಯಕ್ಷರಾದ ಶೈಖುನಾ ಕುಂಬೋಳ್ ಅಟಕೋಯ ತಂಙಳ್ , ಜಪ್ಪು ಉಸ್ತಾದ್, ವಾಲೆಮುಂಡೋವು ಉಸ್ತಾದ್, ಕನ್ಯಾನ ಉಸ್ತಾದ್, ಸಯ್ಯದ್ ಅಬ್ದುಲ್ ಹಮೀದ್ ತಂಙಳ್ ಉದ್ಯಾವರ ಹಾಗೂ ಹಲವು ಉಲಮಾ ಉಮರಾಗಳು ಭಾಗವಹಿಸಲಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ಕಾರ್ಯಕ್ರಮದ ಚೇರ್ ಮ್ಯಾನ್ ಸೈಯದ್ ಶಿಹಾಬುದ್ದೀನ್ ತಂಙಳ್ ಮದಕ ತಿಳಿಸಿದ್ದಾರೆ.