janadhvani

Kannada Online News Paper

ಅನೈತಿಕ ಪೊಲೀಸ್ ಗಿರಿ, ಗಾಂಜಾ ವ್ಯಸನದ ವಿರುದ್ಧ ಪೊಲೀಸರು ನಿಗಾ ವಹಿಸಬೇಕು- ತಬೂಕ್ ದಾರಿಮಿ

ಬುದ್ದಿವಂತರ ಜಿಲ್ಲೆ ಎಂದೇ ಪ್ರಖ್ಯಾತಿ ಹೊಂದಿದ ದಕ್ಷಿಣ ಕನ್ನಡ ಜಿಲ್ಲೆಯು ಇತ್ತೀಚಿನಿಂದ ಅಪರಾಧಿಗಳ ತಾಣವಾಗಿ ಮಾರ್ಪಟ್ಟಿದೆ.

ಅನೈತಿಕ ಪೊಲೀಸ್ ಗಿರಿ ಹಾಗೂ ಗಾಂಜಾ ವ್ಯಸನದ ಆಮಲಿನಲ್ಲಿ ಕೊಲೆ,ಗೂಂಡಾಗಿರಿ, ಸುಲಿಗೆ, ಹಾಗೂ ಇನ್ನಿತರ ಭಯೋತ್ಪಾದನೆ ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ಕೃತ್ಯಗಳು ನಮ್ಮ ಜಿಲ್ಲೆಯ ಖ್ಯಾತಿಗೆ ದಕ್ಕೆಯಾಗುತ್ತಿದೆ ಹಾಗೂ ಅಭಿವೃದ್ಧಿಯನ್ನು ಕುಂಠಿತ ಗೊಳಿಸುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ.

ಇದರ ಮುಂದುವರೆದ ಭಾಗವೆಂಬಂತೆ ಕಾಟಿಪಳ್ಳ ಜಲೀಲ್ ಎಂಬವರ ಹತ್ಯೆಯು ತಾಜಾ ಉದಾಹರಣೆಯಾಗಿ ನಮ್ಮ ಮುಂದಿದೆ.
ತಪ್ಪಿತಸ್ಥರು ಯಾರೇ ಆದರೂ ಅವರ ವಿರುದ್ಧ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಬೇಕಾಗಿದೆ.

ಅಪರಾಧಿಗಳ ಮೇಲೆ ನೆಪ ಮಾತ್ರಕ್ಕೆ ಕೇಸು ದಾಖಲಿಸಿ ಠಾಣೆಯಿಂದಲೇ ಜಾಮಿನು ಸಿಗುವಂತಹ ಸೆಕ್ಷನ್ ಹಾಕಿ ಬಿಡುಗಡೆಗೊಳಿಸುವುದು ಹೀನ ಕೃತ್ಯಗಳಿಗೆ ಕೈ ಹಾಕುವವರಿಗೆ ಬಹುಶಃ ಧೈರ್ಯ ತುಂಬುವಂತಾಗುತ್ತದೆ. ಆದ್ದರಿಂದ ಭಯೋತ್ಪಾದನೆ ಕೃತ್ಯಗಳು ಮಾಡುವ ಯಾರೇ ಆದರೂ ಜಾತಿ ಧರ್ಮ ಕುಲ ಯಾವುದನ್ನೂ ಪರಿಗಣಿಸದೇ ಅವರನ್ನು ಬಂದಿಸಿ ಜೈಲಿಗಟ್ಟಬೇಕು.

ಜಾತ್ಯಾತೀತತೆ ಎಂಬ ಮಹತ್ತರವಾದ ಉದ್ದೇಶವನ್ನು ಹೊಂದಿದ ನಮ್ಮ ದೇಶದ ಪಾರಂಪರ್ಯವನ್ನು ಉಳಿಸಲು ಹಾಗೂ ಸಂವಿಧಾನವನ್ನು ಕಾಪಾಡಲು ರಾಜಕಾರಣಿಗಳು ಶವ ರಾಜಕೀಯವನ್ನು ಬಿಟ್ಟು ಅಭಿವೃದ್ಧಿ ರಾಜಕೀಯದ ಮಂತ್ರ ಮುಂದುವರೆಸಬೇಕು.

ನಮ್ಮ ಜಿಲ್ಲೆಯ ನಿಷ್ಠಾವಂತ ಪೊಲೀಸ್ ಇಲಾಖೆ ನಿಷ್ಪಕ್ಷ ತನಿಖೆ ನಡೆಸಲು ಸಹಕರಿಸಿದರೆ ಅಲ್ಪವಾದರೂ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬಹುದು.ಇಲ್ಲವೆಂದಾದರೆ ನಮ್ಮ ಜಿಲ್ಲೆಯ ಶಾಂತಿ ಮರೀಚೆಕೆಯಾಗಿ ಜನರು ಭಯಬೀತರಾಗುವ ಪರಿಸ್ಥಿತಿ ನಿರ್ಮಾಣ ಆಗುವುದು ಖಚಿತ.

error: Content is protected !! Not allowed copy content from janadhvani.com