ಮಂಗಳೂರು : ಸುರತ್ಕಲ್ ಕಾಟಿಪಳ್ಳ ದಲ್ಲಿ ಅಂಗಡಿಯಲ್ಲಿ ಕೆಲಸಕ್ಕಿರುವ ಜಲೀಲ್ ಎಂಬ ವ್ಯಕ್ತಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದು ಖಂಡನೀಯ, ದ ಕ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅನೈತಿಕ ಪೊಲೀಸ್ ಗಿರಿ ಘಟನೆಗಳು ನಡೆದಾಗ, ಹಲವು ಬಾರಿ ಜಿಲ್ಲಾಡಳಿತ ದೊಂದಿಗೆ ಎಚ್ಚರವಹಿಸಲು ಮನವಿಯನ್ನು ನೀಡಿದ್ದೆವು.
ಆರೋಪಿಗಳಿಗೆ ಸಣ್ಣ ಪುಟ್ಟ ಕೇಸು ಹಾಕಿ ಬಿಡುಗಡೆ ಯಾಗುವಂತೆ ಪೊಲೀಸ್ ಇಲಾಖೆ ಸಹಕರಿಸಿದ್ದೇ ದುಷ್ಕರ್ಮಿಗಳಿಗೆ ಕ್ರಿಮಿನಲ್ ಗಳಲ್ಲಿ ಭಾಗವಹಿಸಲು ಪ್ರೇ ರಣೆ ನೀಡಿದಂತಾಗಿ,ಕಾನೂನಿನ ಹೆದರಿಕೆ ಇಲ್ಲದಂತಾಗಿದೆ. ಕ್ರಿಯೆಗೆ ಪ್ರತಿಕ್ರಿಯೆ ಎಂಬ ಹೇಳಿಕೆಯೂ ಇದಕ್ಕೆ ನೇರ ಪ್ರೇರಣೆ ಯಾಗಿದೆ.
ಅನೈತಿಕ ಪೊಲೀಸಗಿರಿ ಮತ್ತು ಅಮಾಯಕರನ್ನು ಬಲಿ ತೆಗೆದುಕೊಳ್ಳುವ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಸರಕಾರ ನೇರ ಹೊಣೆ. ಜಿಲ್ಲಾಡಳಿತ ಕೂಡಲೇ ಮದ್ಯೆ ಪ್ರವೇಶಿಸಿ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ದಕ್ಷಿಣ ಕನ್ನಡ ಮುಸ್ಲಿಂ ಸಂಘಟನೆ ಗಳ ಒಕ್ಕೂಟ ಅಧ್ಯಕ್ಷ, ಮಾಜಿ ಮೇಯರ್ ಕೆ .ಅಶ್ರಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.