janadhvani

Kannada Online News Paper

ವಲಸಿಗರಿಗೆ ಹಿನ್ನಡೆ- ಸೌದಿ ಅರೇಬಿಯಾದಲ್ಲಿ ಒಂದು ಉದ್ಯೋಗ ವಲಯ ಸಂಪೂರ್ಣ ದೇಶೀಕರಣ

ಈ ವರ್ಷದ ಮೊದಲಾರ್ಧದಲ್ಲಿ ಸೌದಿ ಅರೇಬಿಯಾದಲ್ಲಿ 1.5 ದಶಲಕ್ಷಕ್ಕೂ ಹೆಚ್ಚು ಸ್ಥಳೀಯರು ಕೆಲಸದಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ

ರಿಯಾದ್: ಸೌದಿ ಅರೇಬಿಯಾದಲ್ಲಿ ಗ್ರಾಹಕ ಆರೈಕೆ (Customer Care) ಉದ್ಯೋಗಗಳನ್ನು ಸಂಪೂರ್ಣವಾಗಿ ಸ್ಥಳೀಯರಿಗೆ ಸೀಮಿತಗೊಳಿಸಲಾಗುವುದು ಎಂದು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ(Saudi Ministry of Human Resources and Social Development) ಪ್ರಕಟಿಸಿದೆ. ಇದು ಸೌದೀಕರಣವನ್ನು ಕೈಗೊಳ್ಳಲು ಅನುಮತಿಸಲಾದ ಅವಧಿಯ ಅಂತಿಮ ಘಟ್ದದಲ್ಲಿ ಈ ಘೋಷಣೆ ಬಂದಿದೆ.

ಫೋನ್ ಮೂಲಕ ಗ್ರಾಹಕರೊಂದಿಗೆ ಸಂವಹನ ನಡೆಸುವ ಸಂಸ್ಥೆಗಳಲ್ಲಿ ಗ್ರಾಹಕ ಆರೈಕೆ ಸೇವಾ ವೃತ್ತಿಗಳಲ್ಲಿ (Customer Care Service) 100% ಸೌದಿ ಪ್ರಜೆಗಳು ಉದ್ಯೋಗಿಗಳಾಗಿರಬೇಕು. ಇಂತಹ ಸಂಸ್ಥೆಗಳಲ್ಲಿ ಸೌದಿಯವರನ್ನು ಉನ್ನತ ಹುದ್ದೆಗಳಿಗೂ ನೇಮಿಸಬೇಕು. ಕಾನೂನು ಸಲಹಾ ಸಂಸ್ಥೆಗಳ (Legal Consulting) 70% ರಷ್ಟು ಸೌದೀಕರಣವನ್ನು ಇಂದಿನಿಂದ ಜಾರಿಗೆ ತರಲಾಗಿದೆ.ಪದವೀಧರರಿಗೆ ಕನಿಷ್ಠ 5500 ರಿಯಾಲ್‌ಗಳ ವೇತನವನ್ನು ನೀಡಬೇಕು ಎಂದು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು (Saudi Ministry of Human Resources and Social Development) ಘೋಷಿಸಿದೆ.

ಈ ವರ್ಷದ ಮೊದಲಾರ್ಧದಲ್ಲಿ ಸೌದಿ ಅರೇಬಿಯಾದಲ್ಲಿ 1.5 ದಶಲಕ್ಷಕ್ಕೂ ಹೆಚ್ಚು ಸ್ಥಳೀಯರು ಕೆಲಸದಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಅಂಕಿಅಂಶಗಳನ್ನು ಉಲ್ಲೇಖಿಸಿ ಸ್ಥಳೀಯ ಸೌದಿ ಮಾಧ್ಯಮಗಳು ಇದನ್ನು ವರದಿ ಮಾಡಿದೆ. ವರದಿಗಳ ಪ್ರಕಾರ, ಕೆಲಸ ಮಾಡುವ ಸ್ಥಳೀಯರ ಒಟ್ಟು ಸಂಖ್ಯೆಯಲ್ಲಿ 58 ಪ್ರತಿಶತದಷ್ಟು ಜನರು ತಮ್ಮ ಉದ್ಯೋಗಗಳಿಗೆ ರಾಜೀನಾಮೆ ನೀಡಿದ್ದಾರೆ.

2022ರ ಜನವರಿಯಿಂದ ಜೂನ್‌ವರೆಗೆ ಒಟ್ಟು 1,53,347 ಸ್ಥಳೀಯರು ಕಾರ್ಮಿಕ ಮಾರುಕಟ್ಟೆಯನ್ನು ತೊರೆದಿದ್ದಾರೆ. ಅವರಲ್ಲಿ ಸುಮಾರು 89,000 ಜನರು ತಮ್ಮ ಉದ್ಯೋಗಗಳಿಗೆ ರಾಜೀನಾಮೆ ನೀಡಿದರು. ಈ ಅಂಕಿ ಅಂಶವು ಸೌದಿ ಜನರಲ್ ಆರ್ಗನೈಸೇಶನ್ ಫಾರ್ ಸೋಶಿಯಲ್ ಇನ್ಶೂರೆನ್ಸ್‌ನಲ್ಲಿ(Saudi General Organization for Social Insurance) ನೋಂದಾಯಿಸಲ್ಪಟ್ಟ ವಲಸಿಗರಲ್ಲಿ ಶೇಕಡಾ 58 ರಷ್ಟಿದೆ. ಭಾರತೀಯರು 19 ಕಾರಣಗಳಿಗಾಗಿ ಕಾರ್ಮಿಕ ಮಾರುಕಟ್ಟೆಯನ್ನು ತೊರೆಯುತ್ತಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ರಾಜೀನಾಮೆ ನೀಡಿದ್ದಾರೆ ಎಂದು ವರದಿ ಹೇಳುತ್ತದೆ.

error: Content is protected !! Not allowed copy content from janadhvani.com