janadhvani

Kannada Online News Paper

ನ.22,23:ಜಾಮಿಅ ಸಅದಿಯ್ಯ ಸನದುದಾನ ಸಮಾರಂಭ ಹಾಗೂ ತಾಜುಲ್ ಉಲಮಾ ನೂರುಲ್ ಉಲಮಾ ಆಂಡ್ ನೇರ್ಚೆ

ಕಾಸರಗೋಡು: ದಕ್ಷಿಣ ಭಾರತದ ಪ್ರಖ್ಯಾತ ಧಾರ್ಮಿಕ ಲೌಕಿಕ ಶಿಕ್ಷಣ ಸಮುಚ್ಚಯವಾದ ಜಾಮಿಅ ಸಅದಿಯ್ಯ ಅರಬಿಯ್ಯ ಕಾಸರಗೋಡು ಇದರ ಶರೀಅತ್ ಕಾಲೇಜು ಹಾಗೂ ಹಿಫ್ಲುಲ್ ಕುರ್ ಆನ್ ಮತ್ತು ಸ್ನಾತಕೋತ್ತರ ಪದವಿ ಪಡೆದವರಿಗಾಗಿ ಸನದುದಾನ ಸಮ್ಮೇಳನ ಮತ್ತು ಸುದೀರ್ಘ ಐದು ದಶಕಗಳ ಕಾಲ ಸಅದಿಯ್ಯದ ಸಾರಥ್ಯವನ್ನು ವಹಿಸಿದ್ದ ಮರ್ಹೂಮ್ ತಾಜುಲ್ ಉಲಮಾ ಉಳ್ಳಾಲ ತಙಳ್ ಮತ್ತು ಶೈಖುನಾ ನೂರುಲ್ ಉಲಮಾ ಎಂ ಎ ಉಸ್ತಾದರ ವಾರ್ಷಿಕ ಆಂಡ್ ನೇರ್ಚೆಯು ಇದೇ ಬರುವ ನವೆಂಬರ್ 22,23ದಿನಾಂಕ ಗಳಲ್ಲಿ ಸಅದಿಯ್ಯದಲ್ಲಿ ನಡೆಯಲಿದೆ.

ಎಂದು ಮಜ್ಲಿಸುಲ್ ಉಲಮಾಯಿ ಸ್ಸಅದಿಯ್ಯೀನ್ ಕರ್ನಾಟಕ ರಾಜ್ಯ ಸಮಿತಿಯ ಉಪಾಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ನಾವೂರು ಇಂದು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

22ರಂದು ಬೆಳಿಗ್ಗೆ 7ಘಂಟೆಗೆ ಎಟ್ಟಿಕ್ಕುಳಂ ನಲ್ಲಿರುವ ತಾಜುಲ್ ಉಲಮಾ ಮಖ್ಬರ ಝಿಯಾರತ್ ನೊಂದಿಗೆ ಚಾಲನೆ ಆಗಲಿದೆ. ಮಧ್ಯಾಹ್ನ 1:30ಕ್ಕೆ ಮರ್ಹೂಮ್ ಸಈದ್ ಮುಸ್ಲಿಯಾರ್,ಕೆ ವಿ ಉಸ್ತಾದ್,ಅಬ್ದುಲ್ ಖಾದರ್ ಮುಸ್ಲಿಯಾರ್ ಮೇಲ್ಪರಂಬ್ ಮತ್ತು 3ಘಂಟೆಗೆ ನೂರುಲ್ ಉಲಮಾ ಎಂ ಎ ಉಸ್ತಾದ್ ಹಾಗೂ ಕಲ್ಲಟ್ರ ಅಬ್ದುಲ್ ಖಾದರ್ ಹಾಜಿ ಯವರ ಮಖ್ಬರ ಝಿಯಾರತ್ ಸಯ್ಯಿದ್ ಪಿ ಎಸ್ ಆಟಕೋಯ ತಂಙಳ್ ಪಂಜಿಕ್ಕಲ್ಲು ನೇತೃತ್ವದಲ್ಲಿ ನಡೆಯಲಿದೆ.

3.30ಕ್ಕೆ ಸಯ್ಯಿದ್ ಇಸ್ಮಾಯಿಲ್ ಅಲ್ ತಂಙಳ್ ಪಾನೂರು ನೇತೃತ್ವದಲ್ಲಿ ಖತಮುಲ್ ಕುರ್ ಆನ್ ನಡೆಯಲಿದ್ದು ಸಂಜೆ 4ಘಂಟೆಗೆ ಸಯ್ಯಿದ್ ಇಬ್ರಾಹಿಮ್ ಪೂಕುಞಿ ತಂಙಳ್ ಕಲ್ಲಕಟ್ಟ ಧ್ವಜಾರೋಹಣಗೈಯ್ಯುವರು.

4.30ಕ್ಕೆ ನಡೆಯುವ ಸಾಂಸ್ಕೃತಿಕ ಸಮಾವೇಶ ವು ಸಅದಿಯ್ಯ ಅಧ್ಯಕ್ಷರಾದ ಸಯ್ಯಿದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಳ್ ರವರ ಅಧ್ಯಕ್ಷತೆಯಲ್ಲಿ ಕೇರಳ ರಾಜ್ಯ ಸಚಿವರಾದ ಅಹ್ಮದ್ ದೇವರ್ ಕೋವಿಲ್ ರವರು ಉದ್ಘಾಟಿಸುವರು. ಕರ್ನಾಟಕ ರಾಜ್ಯ ಪ್ರತಿಪಕ್ಷದ ಉಪನಾಯಕ ಯು ಟಿ ಕಾದರ್ ವರು ಅತಿಥಿಯಾಗಿ ಭಾಗವಹಿಸುವರು. ಶಾಸಕರಾದ ಅಡ್ವೊಕೇಟ್ ಸಿ ಎಚ್ ಕುಞಂಬು,ಎನ್ ಎ ನೆಲ್ಲಿಕುನ್ನು,ಇ ಚಂದ್ರ ಶೇಖರನ್,ಎಕೆಎಂ ಅಶ್ರಫ್ ಹಾಗೂ ರಾಜಗೋಪಾಲ ರವರು ಭಾಗವಹಿಸುವರು.
ಮಗ್ರಿಬ್ ನಂತರ 7ಘಂಟೆಗೆ ನಡೆಯುವ ಮುಹ್ಯಿದ್ದೀನ್ ರಾತೀಬಿಗೆ ಮುಹಮ್ಮದ್ ಸ್ವಾಲಿಹ್ ಸಅದಿ ನೇತೃತ್ವ ನೀಡಲಿದ್ದು ಎಂ ಪಿ ಎಂ ಅಶ್ರಫ್ ಸಅದಿ ಮಲ್ಲೂರು ಉದ್ಬೋಧನೆ ನಡೆಸಲಿದ್ದಾರೆ. ನಂತರ ಬುರ್ದಾ ಮಜ್ಲಿಸ್ ನಡೆಯಲಿದೆ.

23ರಂದು ಬೆಳಿಗ್ಗೆ 6.30 ಕ್ಕೆ ತಾಜುಲ್ ಉಲಮಾ ನೂರುಲ್ ಉಲಮಾ ಮೌಲಿದ್ ನಡೆಯಲಿದ್ದು ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್ ನೇತೃತ್ವ ನೀಡಲಿದ್ದಾರೆ. 9ಘಂಟೆಗೆ ಆಲುಂನಿ ಮೀಟ್ ನಡೆಯಲಿದೆ.

ನಂತರ 10ಘಂಟೆಗೆ ಬೃಹತ್ ಸಅದೀ ಸಂಗಮ ನಡೆಯಲಿದ್ದು ಕೇಂದ್ರ ಸಮಿತಿಯ ಅಧ್ಯಕ್ಷರಾದ ಸಯ್ಯಿದ್ ಜಲಾಲುದ್ದೀನ್ ಅಲ್ ಬುಖಾರಿ ಯವರ ಅಧ್ಯಕ್ಷತೆಯಲ್ಲಿ ಸಯ್ಯಿದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಳ್ ಉದ್ಘಾಟನೆ ಮಾಡುವರು. ಎ.ಪಿ ಅಬ್ದುಲ್ಲ ಮುಸ್ಲಿಯಾರ್ ಮಾಣಿಕೋತ್ ,ಕೆ ಕೆ ಹುಸೇನ್ ಬಾಖವಿ ಮುಖ್ಯ ಪ್ರಭಾಷಣ ಮಾಡುವರು. ಅಬ್ದುಲ್ ಲತೀಫ್ ಸಅದಿ ಕೊಟ್ಟಿಲ,ಯು ಕೆ ಮುಹಮ್ಮದ್ ಸಅದಿ ವಳವೂರು,ಇಸ್ಮಾಯಿಲ್ ಸಅದಿ ಪಾರಪ್ಪಳ್ಳಿ ಅಶ್ರಫ್ ಸಅದಿ ಮಲ್ಲೂರು,ಉಸ್ಮಾನ್ ಸಅದಿ ಪಟ್ಟೋರಿ,ಇಸ್ಮಾಯಿಲ್ ಸಅದಿ ಕಿನ್ಯ, ಮುಂತಾದವರು ಮಾತನಾಡಲಿದ್ದಾರೆ.

ಮಧ್ಯಾಹ್ನ 12ಘಂಟೆಗೆ ಪದವಿದಾರರಿಗೆ ವಸ್ತ್ರದಾನ ನಡೆಯಲಿದ್ದು ಸಯ್ಯಿದ್ ಜಾಫರ್ ಸಾದಿಖ್ ತಂಙಳ್ ಕುಂಬೋಳ್ ನೇತೃತ್ವ ನೀಡಲಿದ್ದಾರೆ. ಮಧ್ಯಾಹ್ನ 1 ಘಂಟೆಗೆ ಗಲ್ಫ್ ಮೀಟ್ ನಡೆಯಲಿದ್ದು ಎರಡು ಘಂಟೆಗೆ ಸಾಂಘಿಕ ಸಮಾವೇಶದಲ್ಲಿ ಸಮಸ್ತ ಮುಶಾವರ ಸದಸ್ಯರಾದ ಮುಹಮ್ಮದ್ ಅಲಿ ಸಖಾಫಿ ತೖಕರಿಪೂರ ರವರು ಅಧ್ಯಕ್ಷತೆ ವಹಿಸಲಿದ್ದು ಕೇರಳ ರಾಜ್ಯ ಹಜ್ ಸಮಿತಿ ಅಧ್ಯಕ್ಷ ಸಿ ಮುಹಮ್ಮದ್ ಫೈಝಿ ಉದ್ಘಾಟನೆ ಮಾಡಲಿದ್ದಾರೆ. ಕೂಟಂಬಾರ ಅಬ್ದುಲ್ ರಹಿಮಾನ್ ದಾರಿಮಿ ವಿಷಯ ಮಂಡಿಸಲಿದ್ದು ಪ್ರೊಫೆಸರ್ ಎ. ಕೆ ಅಬ್ದುಲ್ ಹಮೀದ್ , ಸಯ್ಯಿದ್ ಜಲಾಲುದ್ದೀನ್ ತಂಙಳ್ ಉಜಿರೆ,ಡಾ ಎಂಎಸ್ಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್,ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ ಅಬ್ದುಲ್ ರಹಿಮಾನ್ ಮದನಿ ಜೆಪ್ಪು,ಕಾಟ್ಟಿಪ್ಪಾರ ಅಬ್ದುಲ್ ಖಾದರ್ ಸಖಾಫಿ ಮುಂತಾದವರು ಭಾಗವಹಿಸಲಿದ್ದಾರೆ.

ಸಂಜೆ 5ಘಂಟೆಗೆ ಸನದುದಾನ ಸಮಾರಂಭ ನಡೆಯಲಿದ್ದು ಸಅದಿಯ್ಯ ಅಧ್ಯಕ್ಷರಾದ ಸಯ್ಯಿದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಳ್ ರವರ ಅಧ್ಯಕ್ಷತೆಯಲ್ಲಿ ಕೇರಳ ರಾಜ್ಯ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಇಬ್ರಾಹಿಮ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಉದ್ಘಾಟನೆ ಮಾಡಲಿದ್ದಾರೆ. ಸಯ್ಯಿದ್ ಅಲೀ ಬಾಫಕೀಹ್ ತಙಳ್ ದುವಾ ನೇರವೇರಿಸುವರು. ಸಮಸ್ತ ಅಧ್ಯಕ್ಷರಾದ ರಈಸುಲ್ ಉಲಮಾ ಇ ಸುಲೈಮಾನ್ ಮುಸ್ಲಿಯಾರ್ ಸನದುದಾನ ಮಾಡುವರು. ಅಬ್ದುಲ್ ರಹಿಮಾನ್ ಸಖಾಫಿ ಪೇರೋಡು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಕೆ ಪಿ ಹುಸೇನ್ ಸಅದಿ ಕೆ ಸಿ ರೋಡು ಸ್ವಾಗತ ಭಾಷಣ ಮಾಡಲಿದ್ದು ಕೆ ಪಿ ಅಬೂಬಕ್ಕರ್ ಮುಸ್ಲಿಯಾರ್ ಪಟ್ಟುವಂ,ಹಸನ್ ಮುಸ್ಲಿಯಾರ್ ವಯನಾಡ್,ಝೈನುಲ್ ಉಲಮಾ
ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ,ವಿಪಿಎಂ ಫೈಝಿ ವಿಲ್ಯಾಪ್ಪಳ್ಳಿ,ಕರ್ನಾಟಕ ವಕಫ್ ಬೋರ್ಡ್ ಅಧ್ಯಕ್ಷ ಎನ್ ಕೆ ಎಂ ಶಾಫಿ ಸಅದಿ ಬೆಂಗಳೂರು ,ಸಿ ಎನ್ ಜಾಫರ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದ ಮಾಹಿತಿ ನೀಡಿದರು. ಪತ್ರಿಕಾ ಗೋಷ್ಠಿಯಲ್ಲಿ ಮಜ್ಲಿಸುಲ್ ಉಲಮಾಯಿ ಕೇಂದ್ರ ಸಮಿತಿಯ ನಾಯಕ ಎಂ ಪಿ ಎಂ ಅಶ್ರಫ್ ಸಅದಿ ಮಲ್ಲೂರು ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಚ್ ಇಸ್ಮಾಯಿಲ್ ಸಅದಿ ಕಿನ್ಯ,ಸಅದಿಯ್ಯ ಕತರ್ ಸಮಿತಿಯ ಕಾರ್ಯದರ್ಶಿ ಅಬ್ದುಲ್ ರಹೀಮ್ ಸಅದಿ ಕತ್ತಾರ್,ಸಅದಿಯ್ಯ ಮಂಗಳೂರು ಸಿಟಿ ಸಮಿತಿಯ ಅಧ್ಯಕ್ಷ ಅಲ್ ಹಾಜ್ ಮೊಯಿದೀನ್ ಅಲ್ ಸಫರ್ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com