ರಿಯಾದ್: ವಿಶ್ವಕಪ್ ಪಂದ್ಯಗಳನ್ನು(World Cup) ವೀಕ್ಷಿಸಲು ಕತಾರ್ನ ‘ಹಯ್ಯಾ ಕಾರ್ಡ್'(Hayya Card) ಹೊಂದಿರುವವರಿಗೆ ಉಮ್ರಾ ಯಾತ್ರೆ ಮತ್ತು ಮದೀನಾ ಝಿಯಾರತ್ಗಾಗಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲು ಅನುಮತಿಸಲಾಗಿದೆ.
ಹಯಾ ಕಾರ್ಡ್ ಹೊಂದಿರುವವರಿಗೆ ಸೌದಿ ಅರೇಬಿಯಾ, ಉಚಿತ ವೀಸಾವನ್ನು ನೀಡಲಿದೆ. ಆದರೆ, ಸೌದಿ ಅರೇಬಿಯಾಕ್ಕೆ ಭೇಟಿ ನೀಡುವ ಮುಂಚಿತವಾಗಿ ವೈದ್ಯಕೀಯ ವಿಮೆಯನ್ನು(Health Insurance) ಪಡೆಯುವುದು ಕಡ್ಡಾಯವಾಗಿದೆ. ಸೌದಿ ಅರೇಬಿಯಾದ ವೀಸಾ ಫ್ಲಾಟ್ಫಾಂ ಮೂಲಕ ವೈದ್ಯಕೀಯ ವಿಮಾ ಪಾಲಿಸಿಯನ್ನು ಪಡೆಯಬಹುದು.
ಸೌದಿ ಅರೇಬಿಯಾ, ಹಯಾ ಕಾರ್ಡ್ ಹೊಂದಿರುವವರಿಗೆ ಬಹು ಪ್ರವೇಶ ವೀಸಾಗಳನ್ನು(Multi Entry Visa) ಅನುಮತಿಸುತ್ತದೆ. ಈ ವೀಸಾ ಅವಧಿಯೊಳಗೆ ಎಷ್ಟು ಬಾರಿ ಬೇಕಾದರೂ ಸೌದಿ ಅರೇಬಿಯಾವನ್ನು ಪ್ರವೇಶಿಸಬಹುದು ಮತ್ತು ನಿರ್ಗಮಿಸಬಹುದಾಗಿದೆ.
ಹಯಾ ಕಾರ್ಡ್ ಬಳಸಿ ವೀಸಾ ಪಡೆಯುವವರು ಮೊದಲು ಕತಾರ್ಗೆ ಪ್ರವೇಶಿಸುವ ಅಗತ್ಯವಿಲ್ಲ. ಅವರು ನೇರವಾಗಿ ಸೌದಿ ಅರೇಬಿಯಾವನ್ನು ಪ್ರವೇಶಿಸಬಹುದಾಗಿದೆ. ಹಯಾ ಕಾರ್ಡ್ ಹೊಂದಿರುವವರು ವಿಶ್ವಕಪ್ ಪಂದ್ಯಗಳ ಸಮಯದಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲು ಮತ್ತು ಕಡಿಮೆ ವೆಚ್ಚದಲ್ಲಿ ಸೌದಿ ಅರೇಬಿಯಾದಲ್ಲಿ ಉಳಿಯಲು ಸೌದಿ ಅರೇಬಿಯಾ ಅವಕಾಶವನ್ನು ಸಿದ್ಧಪಡಿಸಿದೆ.
















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು