ರಿಯಾದ್: ಸೌದಿ ಅರೇಬಿಯಾದಲ್ಲಿ ಸ್ವದೇಶೀಕರಣ ಜಾರಿಗೆಬಂದ ನಂತರ ಜ್ಯುವೆಲ್ಲರಿಗಳಲ್ಲಿ 487 ಕಾನೂನು ಉಲ್ಲಂಘನೆಗಳು ಕಂಡುಬಂದಿದೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.ಐದು ತಿಂಗಳಲ್ಲಿ 13,000 ಆಭರಣಗಳ ಅಂಗಡಿಗಳನ್ನು ಪರಿಶೀಲನೆ ಎಂದು ಇಲಾಖೆಯು ತಿಳಿಸಿದೆ.
ಕಳೆದ ಡಿಸೆಂಬರ್‌ನಿಂದ ಸೌದಿ ಅರೇಬಿಯಾದ ಜ್ಯವೆಲ್ಲರಿಗಳನ್ನು ಸಂಪೂರ್ಣ ಸ್ವದೇಶೀಕರಣ ಮಾಡಲಾಯಿತು.ದೇಶದ 13 ಪ್ರಾಂತ್ಯಗಳಲ್ಲಿ ಕಾರ್ಯಾಚರಿಸುವ 12,923 ಜ್ಯವೆಲ್ಲರಿಗಳಲ್ಲಿ ವಿವಿಧ ಖಾತೆಗಳು ತಪಾಸಣೆ ನಡೆಸಿತು. ಈ ವೇಳೆಯಲ್ಲಿ 487 ಉಲ್ಲಂಘನೆ ಕಂಡುಬಂದಿದೆ.
ಹತ್ತು ವರ್ಷಗಳ ಹಿಂದೆ, ಜ್ಯುವೆಲ್ಲರಿಗಳಲ್ಲಿ ಸ್ವದೇಶೀಕರಣ ಜಾರಿಗೆ ನಿರ್ಧರಿಸಲಾಗಿತ್ತಾದರೂ, ಪರಿಣಾಮಕಾರಿಯಾಗಿ ಅವುಗಳನ್ನು ಜಾರಿಗೆ ತರಲು ಸಾಧ್ಯವಾಗಿರಲಿಲ್ಲ.ಆದ್ದರಿಂದ ಕಾರ್ಮಿಕ ಸಚಿವಾಲಯವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.ಜೊತೆಗೆ, ಜ್ಯವೆಲ್ಲರಿ ಸಮೇತ ಸಂಸ್ಥೆಗಳಲ್ಲಿ ಕೆಲಸ ಕಂಡುಕೊಳ್ಳುವ ಸ್ಥಳೀಯ ಯುವಕರಿಗೆ ತರಬೇತಿ ಕೂಡಾ ನೀಡಲಾಗುತ್ತಿದೆ.
ಜ್ಯುವೆಲ್ಲರಿಗಳ ಸ್ವದೇಶೀಕರಣ ತೀವ್ರ ಗೊಂಡಿರುವ ಕಾರಣ ನೂರಾರು ವಿದೇಶಿಯರು ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ.ಕಾನೂನು ಉಲ್ಲಂಘನೆಗಾರರಿಗೆ ದಂಡ ಸಮೇತ ಶಿಕ್ಷೆ ವಿಧಿಸಲಾಗುವುದು ಎಂದು ಕಾರ್ಮಿಕ ಸಚಿವಾಲಯ ಎಚ್ಚರಿಸಿದೆ.