ಕರ್ನಾಟಕ ಕಲ್ಚರಲ್ ಫೌಂಡೇಷನ್ KCF ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಉತ್ತರ ಕರ್ನಾಟಕದಲ್ಲಿ ಕಾರ್ಯಚರಿಸುತ್ತಿರುವ ಇಹ್ಸಾನ್ ಮದರಸ ವಿಧ್ಯಾರ್ಥಿಗಳಿಗೆ ಕುರಾನ್ ವಿತರಿಸುವ ಯೋಜನೆಗೆ ಅಧಿಕೃತ ಚಾಲನೆ ನೀಡುವ. ಹಾಗೂ ಇಹ್ಸಾನ್ ಕರ್ನಾಟಕ EO ಬಹು ಅನ್ವರ್ ಅಸ್ ಅದಿ ಇವರನ್ನು ಬೀಳ್ಕೊಡುವ ಸಮಾರಂಭ ಇತ್ತೀಚೆಗೆ ಸೀಬ್ ಮದರಸದಲ್ಲಿ ಕೆಸಿಎಫ್ ಒಮಾನ್ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿ ಇವರ ಅಧ್ಯಕ್ಷತೆಯಲ್ಲಿ ಜರುಗಿತ್ತು.


ಸ

ಭೆಯನ್ನು ಇಹ್ಸಾನ್ ವಿಭಾಗದ ಒರ್ಗನೈಝರ್ ಕಲಂದರ್ ಬಾವ ಪರಪ್ಪು ಉದ್ಘಾಟಿಸಿದರು.
ಇಹ್ಸಾನ್ ಕರ್ನಾಟಕ ಇದರ ಒಮಾನ್ ಪರ್ಯಟನೆಗೆ ಆಗಮಿಸಿದ EO ಮುಹಮ್ಮದ್ ಅನ್ವರ್ ಅಸ್ಅದಿ ತಲಗೂರು ಇವರನ್ನು ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಇಹ್ಸಾನ್ ಕರ್ನಾಟಕ ಮದರಸ ವಿಧ್ಯಾರ್ಥಿಗಳಿಗೆ ಕುರಾನ್ ವಿತರಿಸುವ ಯೋಜನೆಗೆ ಅಧಿಕೃತ ವಾಗಿ ಚಾಲನೆ ನೀಡಲಾಯಿತು.
ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಗೆ ಆಯ್ಕೆಯಾದ ಕೆಸಿಎಫ್ ಒಮಾನ್ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಸಾಂತ್ವನ ಕಾರ್ಯದರ್ಶಿ ಇಕ್ಬಾಲ್ ಬೊಲ್ಮಾರ್ ಬರ್ಕ, ಶಿಕ್ಷಣ ವಿಭಾಗದ ಕಾರ್ಯದರ್ಶಿಯಾಗಿ ಆಯ್ಕೆಯಾದ ಸಯ್ಯದ್ ಆಬಿದ್ ತಂಙಳ್ ಕೊಡಗು, ಇಹ್ಸಾನ್ ಕರ್ನಾಟಕ ವಿಭಾಗದ ಕಾರ್ಯದರ್ಶಿಯಾಗಿ ಆಯ್ಕೆಯಾದ ಹಂಝ ಹಾಜಿ ಕನ್ನಂಗಾರ್ ಇವರನ್ನು ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಸ್ಮರಣಿಕೆ ನೀಡುವ ಮೂಲಕ ಗೌರವಿಸಲಾಯಿತು.
ಕಾರ್ಯಕ್ರಮ ದಲ್ಲಿ ಕೆಸಿಎಫ್ ಕೋಶಾಧಿಕಾರಿ ಜನಾಬ್ ಆರಿಫ್ ಕೋಡಿ, ಉಮರ್ ಸಖಾಫಿ ಮಿತ್ತೂರು, ಆಬಿದ್ ಪಾಷ ಬಾಳೆ ಹೊನ್ನೂರು ,KCF INC ಕೌನ್ಸಿಲರ್ ಇಬ್ರಾಹಿಮ್ ಹಾಜಿ ಅತ್ರಾಡಿ, ಕೆಸಿಎಫ್ ಒಮಾನ್ ಸಂಘಟನಾ ಅಧ್ಯಕ್ಷ ಉಬೈದುಲ್ಲಾ ಸಖಾಫಿ ಮಿತ್ತೂರು, ಸಾಂತ್ವನ ವಿಭಾಗದ ಅಧ್ಯಕ್ಷ ಕಲಂದರ್ ಬಾಷ ತೀರ್ಥ ಹಳ್ಳಿ, ಶಿಕ್ಷಣ ವಿಭಾಗದ ಅಧ್ಯಕ್ಷ ಝುಬೈರ್ ಸ ಅದಿ ಪಾಟ್ರಕೋಡಿ , ಪ್ರಕಾಷಣ ವಿಭಾಗದ ಅಧ್ಯಕ್ಷ ಇರ್ಫಾನ್ ಕೂರ್ನಡ್ಕ, ಆಡಳಿತ ವಿಭಾಗದ ಅಧ್ಯಕ್ಷ ಸಿದ್ದೀಕ್ ಮಾಂಬ್ಳಿ ಸುಳ್ಯ, ಐಟೀಮ್ ಕೋರ್ಡಿನೇಟರ್ ಹನೀಫ್ ಮನ್ನಾಫು ಹಾಗೂ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ನಾಯಕರು ಮತ್ತು ಝೋನ್ ನಾಯಕರು ಉಪಸ್ಥಿತರಿದ್ದರು.
ಕೆಸಿಎಫ್ ಒಮಾನ್ ಇಹ್ಸಾನ್ ವಿಭಾಗದ ಅಧ್ಯಕ್ಷ ಇಕ್ಬಾಲ್ ಎರ್ಮಾಳ್ ಸ್ವಾಗತಿಸಿ ಕೆಸಿಎಫ್ ಒಮಾನ್ ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ ವಂದಿಸಿದರು.







