janadhvani

Kannada Online News Paper

ಸಅದಿಯಾ ಎಜುಕೇಶನ್ ಫೌಂಡೇಶನ್ ಹೊಸ ಸಮಿತಿ ರಚನೆ (ಮುಸ್ಲಿಂ ಸಮಾಜದ ಶೈಕ್ಷಣಿಕ ಉದ್ದಾರಕ್ಕಾಗಿ ಸಅದಿಯಾ ಎಜುಕೇಶನ್ )

ಸಅದಿಯಾ ಎಜುಕೇಶನ್ ಫೌಂಡೇಶನ್ ಇದರ ಮಹಾಸಭೆ ರಿಯಾದಿನ ಅಲ್-ಮಾಸ್ ಆಡಿಟೋರಿಯಂನಲ್ಲಿ ತಾರೀಖು 28 ಅಕ್ಟೋಬರ್ 2022 ರಂದು ಜರುಗಿಸಲಾಯಿತು.

ಸಅದಿಯಾ ಎಜುಕೇಶನ್ ಫೌಂಡೇಶನ್ ಇದರ ಸಾರಥಿ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾದ ಸನ್ಮಾನ್ಯ ಕೆ.ಎನ್.ಎಮ್ ಶಾಫಿ ಸಅದಿ ಉಸ್ತಾದರನ್ನು ಅತಿಥಿಯಾಗಿ ಕ್ರಾಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

ಕೆಸಿಎಫ್ ರಿಯಾದ್ ಸಮಿತಿ ಅಧ್ಯಕ್ಷರಾದ ಮುಸ್ತಫಾ ಸಅದಿ ಉಸ್ತಾದರು ಇಸ್ಲಾಮಿನಲ್ಲಿ ಶಿಕ್ಷಣ ಹಾಗೂ ಶಿಕ್ಷಕರ ಮಹತ್ವವನ್ನು ಹದೀಸಿನ ಆಧಾರದಲ್ಲಿ ಸಭಿಕರಿಗೆ ವಿವರಿಸಿ ಕೊಟ್ಟರು. ಸನ್ಮಾನ್ಯ ಶಾಫಿ ಸಅದಿ ಉಸ್ತಾದರು ಸಅದಿಯಾ ಫೌಂಡೇಶನ್ ನಡೆದು ಬಂದ ಹಾದಿ, ಇಷ್ಟರವರೆಗಿನ ಸಾಧನೆಗಳು, ವರ್ತಮಾನ ಹಾಗೂ ಭವಿಷ್ಯತ್ತಿನ ಯೋಜನೆಗಳನ್ನು ಸಾಕ್ಷ್ಯ ಚಿತ್ರಗಳ ಮೂಲಕ ಹಾಗೂ ಮುಸ್ಲಿಂ ಸಮಾಜದ ಮುಂದಿರುವ ಸಮಸ್ಯೆಗಳನ್ನು ಸಭಿಕರಿಗೆ ತಿಳಿಸಿ ಕೊಟ್ಟರು .

ಸಅದಿಯಾ ಎಜುಕೇಶನ್ ಫೌಂಡೇಶನ್ ರಿಯಾದ್ ಸಮಿತಿಯ ನೂತನ ಅಧ್ಯಕ್ಷರಾಗಿ ಸನ್ಮಾನ್ಯ ಬಷೀರ್ ಲಾಯಿಲ , ಪ್ರಧಾನ ಕಾರ್ಯದರ್ಶಿಯಾಗಿ ನಿಝಾಮುದ್ದೀನ್ ಉಸ್ಮಾನ್
ಹಾಗೂ ಕೋಶಾಧಿಕಾರಿಯಾಗಿ ಶಮೀರ್ ಅಮ್ಮುನ್ಜೆ ಇವರನ್ನು ಆರಿಸಲಾಯಿತು. ಸಆದಿಯಾ ಎಜುಕೇಶನ್ ರಿಯಾದ್ ಸಮಿತಿಯ ವತಿಯಿಂದ ಮಾನ್ಯ ಶಾಫಿ ಸಆದಿ ಉಸ್ತಾದರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಹಲವಾರು ಸಂಘ ಸಂಸ್ಥೆಗಳ ನೇತಾರರು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಅದಿಯಾ ಎಜುಕೇಶನ್ ಫೌಂಡೇಶನ್ ಸಂಸ್ಥೆಯ ಸದಸ್ಯರಾದ ಅಶ್ರಫ್ ಕಿಲ್ಲೂರ್ ಸ್ವಾಗತಿಸಿದರು ಹಾಗೂ ಬಷೀರ್ ಲಾಯಿಲ ವಂದಿಸಿದರು.

error: Content is protected !! Not allowed copy content from janadhvani.com