ರಿಯಾದ್:ವಿದೇಶಿ ಉಮ್ರಾ ಯಾತ್ರಾರ್ಥಿಗಳು ತಮ್ಮ ವೀಸಾ ಅವಧಿ ಮುಗಿಯುವ ಮೊದಲು ದೇಶಕ್ಕೆ ಹಿಂತಿರುಗುವಂತೆ ಹಜ್ ಮತ್ತು ಉಮ್ರಾ ಸಚಿವಾಲಯ(Ministry of Hajj and Umrah) ಹೇಳಿದೆ. ವೀಸಾ ಅವಧಿ ಮುಗಿಯುವ ಮೊದಲು ಉಮ್ರಾ ಪೂರ್ಣಗೊಳಿಸಬೇಕು. ಅದರ ನಂತರ ದೇಶದಲ್ಲಿ ಉಳಿಯುವುದು ನಿಯಮಗಳ ಉಲ್ಲಂಘನೆಯಾಗಿದೆ.
ಉಮ್ರಾ ವೀಸಾದಲ್ಲಿ ಬರುವವರ ವಾಸ್ತವ್ಯದ ಅವಧಿಯನ್ನು 30 ರಿಂದ 90 ದಿನಗಳವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಯಾತ್ರಿಕರು ಮಕ್ಕಾ ಮತ್ತು ಮದೀನಾ ಮತ್ತು ಸೌದಿ ಅರೇಬಿಯಾದ ಇತರ ಎಲ್ಲಾ ನಗರಗಳ ನಡುವೆ ಪ್ರಯಾಣಿಸಲು ಅವಕಾಶವಿದೆ. ಸೌದಿ ಅರೇಬಿಯಾದ ಎಲ್ಲಾ ಅಂತರಾಷ್ಟ್ರೀಯ ಮತ್ತು ದೇಶೀಯ ವಿಮಾನ ನಿಲ್ದಾಣಗಳ ಮೂಲಕ ಯಾತ್ರಾರ್ಥಿಗಳಿಗೆ ದೇಶಕ್ಕೆ ಪ್ರವೇಶಿಸಲು ಮತ್ತು ಹಿಂತಿರುಗಲು ಅನುಮತಿಸಲಾಗಿದೆ.
ಆದರೆ ದೇಶಕ್ಕೆ ಬಂದ ನಂತರ, ಸಚಿವಾಲಯದ ‘NUSUK’ ಅಪ್ಲಿಕೇಶನ್ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಉಮ್ರಾಗೆ ಪರವಾನಗಿ ಪಡೆಯಬೇಕು. ಪ್ರವಾಸೋದ್ಯಮ, ಭೇಟಿ, ಉಮ್ರಾ ಮುಂತಾದ ಯಾವುದೇ ವೀಸಾ ಮೂಲಕ ಸೌದಿ ಅರೇಬಿಯಾವನ್ನು ಪ್ರವೇಶಿಸಬಹುದು ಎಂದು ಸಚಿವಾಲಯ ಹೇಳಿದೆ.
















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಮಂಗಳೂರಿನ MRPL ಘಟಕದಲ್ಲಿ ಭಾರೀ ಸ್ಫೋಟ: ದಟ್ಟ ಹೊಗೆ, ಸುತ್ತಮುತ್ತಲಿನ ಮನೆಗಳಿಗೆ ಹಾನಿ- ಹಲವರಿಗೆ ಗಾಯ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಗಂಟೆಗಟ್ಟಲೆ ರೀಲ್ಸ್ ಸ್ಕ್ರೋಲಿಂಗ್- ದೇಹದ ಮೇಲೆ ಪರಿಣಾಮ!
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ