janadhvani

Kannada Online News Paper

ಕೆಸಿಎಫ್ ರಿಯಾದ್ ಅಧೀನದಲ್ಲಿ ಯಶಸ್ವಿಯಾದ “ಪ್ರವಾಸಿ ಸಂಗಮ”

ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸೌದಿ ಅರೇಬಿಯಾದ ಅಧೀನದಲ್ಲಿರುವ ರಿಯಾದ್ ಝೋನ್ ವತಿಯಿಂದ ಅಕ್ಟೋಬರ್ 27 ರಂದು ಎಕ್ಸಿಟ್ 18 ರಲ್ಲಿರುವ ಇಸ್ತಿರಾದಲ್ಲಿ “ಪ್ರವಾಸಿ ಸಂಗಮ” ಫ್ಯಾಮಿಲಿ ಗೆಟ್ ಟುಗೆದರ್ ಬಹಳ ಯಶಸ್ವಿಯಾಗಿ ನಡೆಯಿತು.

ರಾತ್ರಿ 06:00 ಗಂಟೆಗೆ ಆರಂಭಿಸಿದ ಕಾರ್ಯಕ್ರಮವು ಮುಂಜಾನೆ 04:00 ಗಂಟೆಯ ವರೆಗೆ ಮುಂದುವರಿಯಿತು.

ಪ್ರವಾಸಿ ಸಂಗಮದಲ್ಲಿ ಆತ್ಮೀಯ ಮಜ್ಲಿಸ್, ಮಕ್ಕಳ ಸಾಂಸ್ಕೃತಿಕ ಸ್ಪರ್ಧೆ, ಮಕ್ಕಳ ಕ್ರೀಡೆ ಹಾಗೂ ಸಭಾ ಕಾರ್ಯಕ್ರಮಗಳು ಒಳಗೊಂಡಿತ್ತು.

ಸ್ವಾಗತ ಸಮಿತಿ ಚೇರ್ಮಾನ್ ಹಂಝಾ ಮೈಂದಾಳರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ರಿಯಾದ್ ಝೋನ್ ಅಧ್ಯಕ್ಷರಾದ ಮುಸ್ತಫಾ ಸಅದಿಯವರು ದುಆ ಮಾಡಿ, ಇಲ್ಯಾಸ್ ಲತೀಫಿಯವರು ಖಿರಾಅತ್ ಪಾರಾಯಣ ಮಾಡಿದರು. ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಪ್ರ.ಕಾರ್ಯದರ್ಶಿ ಸಾಲಿ ಬೆಳ್ಳಾರೆಯವರು ಉದ್ಘಾಟನೆ ಮಾಡಿದ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಸಮಿತಿ ಪ್ರೊಫೆಷನಲ್ ಡೆವೆಲಪ್ಮೆಂಟ್‌ ಇಲಾಖೆಯ ಅಧ್ಯಕ್ಷರಾದ ಜನಾಬ್| ಖಮರುದ್ದೀನ್ ಗೂಡಿನಬಳಿಯವರು ಪ್ರಾಸ್ತಾವಿಕ ಭಾಷಣ ಮಾಡಿ ಕೆಸಿಎಫ್ ರಿಯಾದ್ ಝೋನ್ ಅಧೀನದಲ್ಲಿ ನಡೆಸುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಾಚರಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಚೇರ್ಮಾನ್ ಮೌಲಾನಾ ಶಾಫೀ ಸಅದಿಯವರು ಮುಖ್ಯ ಪ್ರಭಾಷಣ ಮಾಡಿದರು. ಕೆಸಿಎಫ್ ಸಹಯೋಗದೊಂದಿಗೆ ಉತ್ತರ ಕರ್ನಾಟಕದಲ್ಲಿ ಕ್ರಾಂತಿಯನ್ನು ಮಾಡುತ್ತಿರುವ ಇಹ್ಸಾನ್ ಕಾರ್ಯಾಚರಣೆ ಹಾಗೂ ವಕ್ಫ್ ಸಮಿತಿಯ ಕಾರ್ಯಾಚರಣೆಗಳ ಬಗ್ಗೆ ಶಾಫೀ ಸಅದಿಯವರು ಮುಖ್ಯ ಪ್ರಭಾಷಣದಲ್ಲಿ ನೆರೆದವರಿಗೆ ಮನವರಿಕೆ ಮಾಡಿಕೊಟ್ಟರು.

ಮುಖ್ಯ ಪ್ರಭಾಷಣದ ನಂತರ ಸಭಿಕರಿಗೆ ಏನಾದರೂ ಸಂಶಯಗಳಿದ್ದರೆ ಅದನ್ನು ಶಾಫೀ ಸಅದಿಯವರೊಂದಿಗೆ ಕೇಳಿ ನಿವಾರಣೆ ಮಾಡಲಿರುವ ಅವಕಾಶವನ್ನು ನೀಡಲಾಯಿತು.

ಅತಿಥಿಗಳಾಗಿ ಆಗಮಿಸಿದ ಮೌಲಾನಾ ಶಾಫೀ ಸಅದಿ ಹಾಗೂ ಜನಾಬ್ ಖಮರುದ್ದೀನ್ ಗೂಡಿನಬಳಿಯವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಆಗಮಿಸಿದ ಪ್ರತಿಯೊಂದು ಮಕ್ಕಳಿಗೂ ಪ್ರೋತ್ಸಾಹ ಕಾಣಿಕೆ ನೀಡಿ ಅಭಿನಂದನೆಯನ್ನು ಮಾಡಲಾಯಿತು.

ಕಾರ್ಯಕ್ರಮದುದ್ದಕ್ಕೂ ನಡೆದ ಬಹಳ ಆಕರ್ಷಕವಾದ ಸ್ಪೋಟ್ ಕ್ವಿಝ್, ಮಕ್ಕಳ ಸಾಂಸ್ಕೃತಿಕ ಮತ್ತು ಕ್ರೀಡೆ, ದಫ್ಫ್ ಕಾರ್ಯಕ್ರಮ ಹಾಗೂ ಕೊನೆಯಲ್ಲಿ ನಡೆದ ಆನ್ಲೈನ್ ಕ್ವಿಝ್ ಸ್ಪರ್ಧೆ ನೆರೆದವರ ಗಮನ ಸೆಳೆಯಿತು.

ವೇದಿಕೆಯಲ್ಲಿ ಅಲ್-ಮದೀನತುಲ್ ಮುನವ್ವರ ಮೂಡಡ್ಕ ಇದರ ಮ್ಯಾನೇಜರ್ ಅಶ್ರಫ್ ಸಖಾಫಿ ಮಾಡಾವು, ಕೆಸಿಎಫ್ ರಾಷ್ಟ್ರೀಯ ನೇತಾರರಾದ ಯಾಖೂಬ್ ಸಖಾಫಿ, ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಶನ್ ಸೌದಿ ರಾಷ್ಟ್ರೀಯ ಸಮಿತಿ ನೇತಾರರಾದ ಹಂಝ ಮುಸ್ಲಿಯಾರ್ ಚೊಕಂಡಲ್ಲಿ, ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ರಿಯಾದ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬಜ್ಪೆ, ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ ರಿಯಾದ್ ಸಮಿತಿ ಅಧ್ಯಕ್ಷರಾದ ಶೇಖ್ ಭಾಯಿ ಧೀರಾ, ಕೆಸಿಎಫ್ ಹಿರಿಯ ನೇತಾರರಾದ ಹನೀಫ್ ಬೆಳ್ಳಾರೆ, ಇಸ್ಮಾಯಿಲ್ ಶಾಫೀ ವಿಟ್ಲ, ಕೆಸಿಎಫ್ ರಿಯಾದ್ ಝೋನ್ ಕೋಶಾಧಿಕಾರಿ ನವಾಝ್ ಚಿಕ್ಕಮಗಳೂರು, ಸ್ವಾಗತ ಸಮಿತಿ ಕೋಶಾಧಿಕಾರಿ ಇಸ್ಮಾಯಿಲ್ ಕಣ್ಣಂಗಾರ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ 1,500ರಷ್ಟು ಸಭಿಕರು ಆಗಮಿಸಿದ್ದರು.

ಸ್ವಾಗತ ಸಮಿತಿ ಕನ್ವೀನರ್ ಬಶೀರ್ ತಲಪ್ಪಾಡಿಯವರು ಸ್ವಾಗತ ಹೇಳಿ ಝೋನ್ ಪ್ರ.ಕಾರ್ಯದರ್ಶಿ ಅಶ್ರಫ್ ಕಿಲ್ಲೂರು ರವರು ಧನ್ಯವಾದ ಹೇಳಿದ ಕಾರ್ಯಕ್ರಮವನ್ನು ನೌಷಾದ್ ತಲಪ್ಪಾಡಿಯವರು ಬಹಳ ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು.

error: Content is protected !! Not allowed copy content from janadhvani.com