janadhvani

Kannada Online News Paper

ನವೆಂಬರ್ 1ರಿಂದ ದುಬೈ- ಕಣ್ಣೂರು ಸೇವೆ ಆರಂಭ- ಏರ್ ಇಂಡಿಯಾ ಎಕ್ಸ್‌ಪ್ರೆಸ್

ಆರಂಭಿಕ ದಿನಗಳಲ್ಲಿ ದುಬೈನಿಂದ ಕಣ್ಣೂರಿಗೆ 300 ದಿರ್ಹಮ್ ದರದಲ್ಲಿ ಟಿಕೆಟ್ ಲಭ್ಯವಾಗಲಿದೆ

ದುಬೈ: ಏರ್ ಇಂಡಿಯಾ ಎಕ್ಸ್‌ಪ್ರೆಸ್ ನಿಂದ ದುಬೈ-ಕಣ್ಣೂರು ಸೇವೆ ಪ್ರಾರಂಭಗೊಳ್ಳಲಿದೆ. ನವೆಂಬರ್ 1 ರಿಂದ ವಾರದಲ್ಲಿ ನಾಲ್ಕು ದಿನ ಈ ಸೇವೆ ಲಭ್ಯವಿರುತ್ತದೆ. ಆರಂಭಿಕ ದಿನಗಳಲ್ಲಿ ದುಬೈನಿಂದ ಕಣ್ಣೂರಿಗೆ 300 ದಿರ್ಹಮ್ ದರದಲ್ಲಿ ಟಿಕೆಟ್ ಲಭ್ಯವಾಗಲಿದೆ ಎಂದು ಏರ್ ಇಂಡಿಯಾ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನವೆಂಬರ್ 1 ರಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್(Air India Express) ವಿಮಾನವು ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರದಂದು ಕಣ್ಣೂರಿಗೆ ಹಾರಲಿದೆ. ಯುಎಇ ಸಮಯ ಸಂಜೆ 6:40ಕ್ಕೆ ಹೊರಡುವ IX 748 ವಿಮಾನ ಭಾರತೀಯ ಕಾಲಮಾನ ರಾತ್ರಿ 11:50ಕ್ಕೆ ಕಣ್ಣೂರು ತಲುಪಲಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

ವಿಮಾನಯಾನ ಸಂಸ್ಥೆಯು ಮೊದಲ ದಿನಗಳಲ್ಲಿ ಟಿಕೆಟ್ ದರದಲ್ಲಿ 300 ದಿರ್ಹಮ್‌ಗಳು ಮತ್ತು 5 ಕೆಜಿ ಹೆಚ್ಚುವರಿ ಬ್ಯಾಗೇಜ್‌ನ ಪ್ರಯೋಜನಗಳನ್ನು ಘೋಷಿಸಿದೆ. ಕಣ್ಣೂರಿನಿಂದ ಹಿಂದಿರುಗುವ ವಿಮಾನ IX 747 ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ಮಧ್ಯಾಹ್ನ 12.50 ಕ್ಕೆ ಹೊರಡಲಿದೆ. ಸಂಜೆ 3.15ಕ್ಕೆ ದುಬೈ ತಲುಪಲಿದೆ.

ಪ್ರಸ್ತುತ ದುಬೈನಿಂದ ಕಣ್ಣೂರಿಗೆ ಗೋಫಾಸ್ಟ್(Go First) ವಿಮಾನಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ದುಬೈ-ಕಣ್ಣೂರು ಸೇವೆಯ ಹೊರತಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಶಾರ್ಜಾದಿಂದ ಆಂಧ್ರಪ್ರದೇಶದ ವಿಜಯವಾಡಕ್ಕೆ ಹೊಸ ಸೇವೆಯನ್ನು ಘೋಷಿಸಿದೆ. ಈ ತಿಂಗಳ 31 ರಿಂದ ಸೋಮವಾರ ಮತ್ತು ಶನಿವಾರದಂದು ಶಾರ್ಜಾ-ವಿಜಯವಾಡ ಸೇವೆ ಇರಲಿದೆ.

ಯುಎಇಯಿಂದ ವಿಜಯವಾಡಕ್ಕೆ ನೇರ ಸೇವೆಯನ್ನು ನಿರ್ವಹಿಸುವ ಮೊದಲ ವಿಮಾನಯಾನ ಸಂಸ್ಥೆಯಾಗಿದೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ವಿಜಯವಾಡ ವಿಮಾನವು ಶಾರ್ಜಾದಿಂದ ಬೆಳಗ್ಗೆ 11 ಗಂಟೆಗೆ ಹೊರಡಲಿದೆ.

error: Content is protected !! Not allowed copy content from janadhvani.com