janadhvani

Kannada Online News Paper

ಕಾಣಿಯೂರು ಹಲ್ಲೆ ಪ್ರಕರಣ: ನಾಳೆ ಪುತ್ತೂರಿನಲ್ಲಿ ಪ್ರತಿಭಟನೆ- ಮುಸ್ಲಿಮ್ ಒಕ್ಕೂಟ ಬೆಂಬಲ

ಮಂಗಳೂರು: ಇತ್ತೀಚೆಗೆ ಕಾಣಿಯೂರು ವಿನಲ್ಲಿ ಇಬ್ಬರು ವರ್ತಕರ ವಿರುದ್ಧ ಸ್ಥಳೀಯ ಸಂಘ ಪರಿವಾರದ ದುಷ್ಕರ್ಮಿ ವ್ಯಕ್ತಿಗಳು ವಿನಾ ಕಾರಣ ಮಾರಣಾಂತಿಕ ಹಲ್ಲೆಗೈದು,ಗಂಭೀರ ಗಾಯಗೊಳಿಸಿದ್ದು,ಆರೋಪಿತರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ನಾಳೆ ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.

ದ.ಕ.ಜಿಲ್ಲೆಯಲ್ಲಿ ಭಯ ಮುಕ್ತ ವ್ಯಾಪಾರ ಸ್ವಾತಂತ್ರ್ಯ ನಿರ್ಮಾಣ ಬೇಡಿಕೆಯನ್ನು ಮುಂದಿಟ್ಟು, ದ.ಕ.ಜಿಲ್ಲಾಡಳಿತ, ಪೊಲೀಸು ಇಲಾಖೆ ಮತ್ತು ಸರಕಾರದ ಸಮಕ್ಷಮ ನಾಳೆ ಶುಕ್ರವಾರ ಅಪರಾಹ್ನ 3.00 ಘಂಟೆಗೆ ಪುತ್ತೂರಿನ ದರ್ಬೆ ವೃತ್ತದಿಂದ ಸಹಾಯಕ ಆಯುಕ್ತರ ಕಚೇರಿವರೆಗೆ ನಡೆಯುವ ಶಾಂತಿಯುತ, ಪ್ರಜಾಸತ್ತಾತ್ಮಕ ಜಾಥಾ ಮತ್ತು ಪ್ರತಿಭಟನಾ ಸಭೆಯನ್ನು ದ.ಕ.ಜಿಲ್ಲಾ ಮುಸ್ಲಿಮ್ ಯುವಜನ ಪರಿಷತ್ ಪುತ್ತೂರು ವತಿಯಿಂದ ಮತ್ತು ಸ್ಥಳೀಯ ಸಂಘಟನೆಗಳು, ಜಮಾಅತ್ ಕಮಿಟಿ ವತಿಯಿಂದ ಆಯೋಜಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ ನೀಡಲಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರೆ ನೀಡಲಾಗಿದೆ ಎಂದು ಕೆ.ಅಶ್ರಫ್(ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com