janadhvani

Kannada Online News Paper

ಇಂದು ದಮ್ಮಾಮ್‌ನಲ್ಲಿ ‘ಅಲ್ ಖಾದಿಸ’ ಫ್ಯಾಮಿಲಿ ಮೀಟ್-ಯಶಸ್ವಿಗೆ ಕರೆ

ದಮ್ಮಾಮ್,ಅ.27: ಅಲ್ ಖಾದಿಸ ಎಜ್ಯುಕೇಷನಲ್ ಅಕಾಡೆಮಿ ಕಾವಳಕಟ್ಟೆ ಇದರ ದಮ್ಮಾಮ್ ಮತ್ತು ಜುಬೈಲ್ ಸಮಿತಿಯಿಂದ ಇಂದು (27, ಅಕ್ಟೋಬರ್ 2022) ಗುರುವಾರ ದಮ್ಮಾಮ್ 91 ಏರಿಯಾ ಅಲ್ ಹಯಾತ್ ಇಸ್ತಿರಾ ದಲ್ಲಿ ಅಲ್ ಖಾದಿಸ ಫ್ಯಾಮಿಲಿ ಮೀಟ್ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಖಿರಾ ಅತ್ ಹಾಗೂ ಇಸ್ಲಾಮಿಕ್ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಪುರುಷರಿಗೆ ಕ್ವಿಜ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿಜೇತರಿಗೆ ಅತ್ಯಾಕರ್ಷಕ ಹಾಗೂ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುವುದು ಮತ್ತು ಸ್ತ್ರೀಯರಿಗೆ ಪ್ರತ್ಯೇಕ ಸ್ಥಳದ ಏರ್ಪಾಟು ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಬಹು, ಡಾ|ಮುಹಮ್ಮದ್ ಫಾಝಿಲ್ ರಝಿ ರವರ ದುಆ ದೊಂದಿಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ವಿಶೇಷ ಅತಿಥಿಗಳಾಗಿ ಮದನೀಯಂ ಮಜ್ಜಿಸ್ ಉಸ್ತಾದ್ ಅಬ್ದುಲ್ಲತೀಫ್ ಸಖಾಫಿ, ಮುಖ್ಯ ಅತಿಥಿಗಳಾಗಿ ಡಾ|ಯು.ಟಿ. ಇಪ್ತಿಖಾರ್ ಅಹ್ಮದ್ ಮತ್ತು ಜನಾಬ್ ಇನಾಯತ್ ಅಲಿ ಆಗಮಿಸಲಿದ್ದಾರೆ.ಅಲ್ ಖಾದಿಸ ಎಜ್ಯುಕೇಷನಲ್ ಅಕಾಡೆಮಿ ಕಾವಳಕಟ್ಟೆ

ಮೌಲಾನಾ ಡಾ! ಮುಹಮ್ಮದ್ ಫಾಝಿಲ್ ರಝಿರವರ ನೇತೃತ್ವ ದಲ್ಲಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳಕಟ್ಟೆ ಎಂಬ ಪ್ರದೇಶದಲ್ಲಿ 2014 ರಿಂದ ಧಾರ್ಮಿಕ ಲೌಕಿಕ ವಿದ್ಯಾರ್ಜನೆ ಯನ್ನು ಸಮುದಾಯದ ಮಕ್ಕಳಿಗೆ ನೀಡುತ್ತಾ ಬಂದಿರುತ್ತದೆ.

‘ಅಲ್ ಖಾದಿಸ ದಅವಾ ಕಾಲೇಜಿನಲ್ಲಿ ಪ್ರಸಕ್ತ 98 ವಿದ್ಯಾರ್ಥಿಗಳು, ಆಂಗ್ಲ ಮಾಧ್ಯಮ ಶಾಲೆಯಲ್ಲಿ 340 ವಿದ್ಯಾರ್ಥಿಗಳು ಹಾಗೂ 3 ರಿಂದ 5 ನೇ ವರ್ಷದ 50 ಮಕ್ಕಳು ಝಕ್ರತುಲ್ ಖುರ್ ಆನ್ ವ್ಯಾಸಂಗ ಮಾಡುತ್ತಿದ್ದಾರೆ.ಉದ್ದೇಶಿತ ಶೈಕ್ಷಣಿಕ ಅಕಾಡೆಮಿಯು ಕಾವಲ್ಕಟ್ಟೆಯಲ್ಲಿ ಬರಲಿರುವ ಮೆಗಾ ಸಮುದಾಯ ಮತ್ತು ಶೈಕ್ಷಣಿಕ ಕ್ಯಾಂಪಸ್‌ನ ಭಾಗವಾಗಲಿದೆ, ಇದು ವಿಕಲಚೇತನ ಮಕ್ಕಳ ಶೈಕ್ಷಣಿಕ ಮನೆ’, ಬಡವರು ಮತ್ತು ನಿರ್ಗತಿಕರಿಗೆ 200 ಮನೆಗಳನ್ನು ಹೊಂದಿರುವ ವಸತಿ ಕಾಲೋನಿ, ಕಾಲೇಜು ಮುಂತಾದ ಯೋಜನೆಗಳನ್ನು ಒಳಗೊಂಡಿರುತ್ತದೆ.

ಇಸ್ಲಾಮಿಕ್ ವಿಜ್ಞಾನ ಮತ್ತು ಆಧುನಿಕ ಶಾಲಾ ಮತ್ತು ಕಾಲೇಜು ಶಿಕ್ಷಣ ಆವರಣಗಳ ಸರಣಿಯನ್ನು ಕಲಿಸಲು ಸನ್ನದ್ಧವಾಗಿದೆ.ಇನ್ನೂ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು ಅದರ ಯಶಸ್ವಿಗೆ ಹಾಗೂ ಅಭಿವೃದ್ಧಿಗೆ ದಾನಿಗಳ ತನು-ಮನ-ಧನದೊಂದಿಗಿನ ಸಹಾಯ ಸಹಕಾರದ ನಿರೀಕ್ಷೆಯಲ್ಲಿದೆ.

ಇಂದು ನಡೆಯುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅಲ್ ಖಾದಿಸ ಎಜ್ಯುಕೇಷನಲ್ ಅಕಾಡೆಮಿ ದಮ್ಮಾಮ್ ಮತ್ತು ಜುಬೈಲ್ ಸಮಿತಿ ವಿನಂತಿಸಿ ಕೊಂಡಿದ್ದಾರೆ.

ವರದಿ: ಇಸ್ಮಾಯೀಲ್ ಕಾಟಿಪಳ್ಳ

error: Content is protected !! Not allowed copy content from janadhvani.com