janadhvani

Kannada Online News Paper

ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದು ಆರಾಧನೆಯಾಗಿದೆ – ಮೂಸಾ ಸಖಾಫಿ ಕಳತ್ತೂರು

ಪುತ್ತೂರು : ಅಹ್ಲ್ ಸುನ್ನ ವಲ್ ಜಮಾಅದ ತತ್ವಾದರ್ಶದಲ್ಲಿ ಪೂರ್ವಿಕ ಮಹಾತ್ಮರು ಸ್ಥಾಪಿಸಿದ ಹಾಗೂ ವಿದ್ವಾಂಸರು ನೇತೃತ್ವ ನೀಡುವ ಸುನ್ನಿ ಸಂಘಟನೆಗಳು ನಮ್ಮೆಲ್ಲರ ಇಹಪರ ವಿಜಯಕ್ಕೆ ದಾರಿಯಾಗಿದೆ. ಇಂತಹ ಸಂಘಟನೆಗಳು ಆಧ್ಯಾತ್ಮಿಕ ಮಜ್ಲಿಸ್ ನಡೆಸಿ ಆತ್ಮ ಸಂಸ್ಕರಣಗೊಳಿಸಲು ಸಹಕಾರಿಯಾಗುತ್ತದೆ. ಸುನ್ನಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದು ಆರಾಧನೆಯಾಗಿದೆ ಎಂದು ಎಸ್‌ವೈಎಸ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಮೂಸ ಸಖಾಫಿ ಉಸ್ತಾದ್ ಕಳತ್ತೂರುರವರು ಹೇಳಿದರು.ಅವರು ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ರಿ.) ಎಸ್‌ವೈಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿಯು ದಿನಾಂಕ 23.10.2022 ರ ರವಿವಾರ ಅಪರಾಹ್ನ ಉಪ್ಪಿನಂಗಡಿ ಹೋಟೆಲ್ ರೊಯಲ್ ಮೆಕ್ಸಿಕೊ ಸಭಾ ಭವನದಲ್ಲಿ ಇಸಾಬಾ ಸದಸ್ಯರಿಗಾಗಿ ಹಮ್ಮಿಕೊಂಡ ಇಸಾಬಾ ಅಸೆಂಬ್ಲಿಯಲ್ಲಿ ಮುಖ್ಯ ತರಗತಿಯನ್ನು ನೀಡಿ ಮಾತನಾಡಿದರು.ಉಮರಾ ನಾಯಕರು ಸಭಾ ಭವನದ ಮಾಲಿಕರಾದ ಅಬ್ದುರ್ರಶೀದ್ ಶುಕ್ರಿಯಾರವರು ಧ್ವಜಾರೋಹಣ ಗೈದರು. ಸುನ್ನಿ ಮದರಸ ಅಸೋಸಿಯೇಷನ್ ಈಸ್ಟ್ ಜಿಲ್ಲಾಧ್ಯಕ್ಷರಾದ ಅಸೆಯ್ಯಿದ್ ಸಾದಾತ್ ತಂಙಲ್ ಕರ್ವೇಲ್ ರವರು ದುಆಃ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್‌ವೈಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಸ‌ಅದಿ ಮಜೂರುರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್‌ವೈಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ. ಎಂ. ಕಾಮಿಲ್ ಸಖಾಫಿರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಎಸ್‌ವೈಎಸ್ ರಾಜ್ಯ ಸಾಂತ್ವನ ಕಾರ್ಯದರ್ಶಿ ಬಶೀರ್ ಸ‌ಅದಿ ಬೆಂಗಳೂರು ಹಾಗೂ ಎಸ್‌ವೈಎಸ್ ದ.ಕ. ಜಿಲ್ಲಾ ಉಸ್ತುವಾರಿ ವಿ. ಪಿ. ಮೊಯ್ದಿನ್ ಪೊನ್ನತ್ ಮೊಟ್ಟೆ ಸಂದರ್ಭೋಚಿತವಾಗಿ ಮಾತನಾಡಿದರು.ರಾಜ್ಯ ಜಂಇಯ್ಯತುಲ್ ಉಲಮಾ ನಾಯಕರಾದ ಖಾಸಿಂ ಮದನಿ ಉಸ್ತಾದ್ ಕರಾಯ, ಹೈದರ್ ಮದನಿ ಉಸ್ತಾದ್, ಎಸ್‌ವೈಎಸ್ ರಾಜ್ಯಾಧ್ಯಕ್ಷರಾದ ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್, ಹಿರಿಯ ವಿದ್ವಾಂಸ ಅಬೂಬಕ್ಕರ ಫೈಝಿ ಪೆರುವಾಯಿ, ಎಸ್‌ವೈಎಸ್ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ಕೆ. ಮದನಿ, ರಾಜ್ಯ ಸಾಮಾಜಿಕ ಕಾರ್ಯದರ್ಶಿ ಕಾಸಿಂ ಪದ್ಮುಂಜ, ಟೀಂ ಇಸಾಬಾ ರಾಜ್ಯ ಡೈರೆಕ್ಟರ್ ಇಕ್ಬಾಲ್ ಬಪ್ಪಳಿಗೆ, ಎಸ್‌ವೈಎಸ್ ರಾಜ್ಯ ನಾಯಕರಾದ ಎಂ. ಎಚ್. ಖಾದರ್ ಹಾಜಿ, ಹಮೀದ್ ಬೀಜಕೊಚ್ಚಿ, ಎಸ್‌ವೈಎಸ್ ಈಸ್ಟ್ ಜಿಲ್ಲಾ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಸಖಾಫಿ ಕೊಡುಂಗಾಯಿ, ಪ್ರಧಾನ ಕಾರ್ಯದರ್ಶಿ ಎಂ. ಬಿ. ಸ್ವಾದಿಖ್ ಮಲೆಬೆಟ್ಟು, ಕೋಶಾಧಿಕಾರಿ ಜಿ. ಮುಹಮ್ಮದ್ ಕುಂಞಿ ಜೋಗಿಬೆಟ್ಟು, ಸಂಘಟನಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಳಪದವು, ಸಾಂಸ್ಕೃತಿಕ ಕಾರ್ಯದರ್ಶಿ ಅಬ್ಬಾಸ್ ಮದನಿ ಬಂಡಾಡಿ, ಮಾಧ್ಯಮ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರು, ಸಾಮಾಜಿಕ ಕಾರ್ಯದರ್ಶಿ ಅಬ್ದುಲ್ ಕರೀಂ ಹಾಜಿ ಚೆನ್ನಾರ್, ಸ್ವಾಗತ ಸಮಿತಿ ಚೇರ್ಮನ್ ಶುಕೂರು ಮೇದರ ಬೆಟ್ಟು, ಕನ್ವೀನರ್ ಅಬ್ಬಾಸ್ ಬಟ್ಲಡ್ಕ, ಉಮರಾ ನಾಯಕರಾದ ಇಸ್‌ಹಾಖ್ ಹಾಜಿ ಮೇದರಬೆಟ್ಟು, ಮುಸ್ತಫಾ ಸುಳ್ಯ, ಖಾಸಿಂ ಹಾಜಿ ಮಿತ್ತೂರು, ಆದಂ ಹಾಜಿ ಪಡೀಲ್ ಮೊದಲಾದವರು ಉಪಸ್ಥಿತಿತರಿದ್ದರು.

ಕೊನೆಯಲ್ಲಿ ಸ್ವಲಾತುನ್ನಾರಿಯಾ ಹೇಳಿ ಇಂಡಿಯನ್ ಗ್ರಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ ಎ. ಪಿ. ಉಸ್ತಾದರ ಆಫಿಯತ್ ಹಾಗೂ ಸಂಘ ಕುಟುಂಬದ ನಾಯಕರು, ಕಾರ್ಯಕರ್ತರಿಗಾಗಿ ರಾಜ್ಯ ಜಂಇಯ್ಯತುಲ್ ಉಲಮಾ ನಾಯಕರಾದ ಮುಹಮ್ಮದ್ ಸ‌ಅದಿ ರವರು ವಿಶೇಷ ದುಆಃ ನಡೆಸಿದರು. ತ್ಯ್ತೆಬಾ ಎಜುಕೇಶನ್ ಈಶ್ವರಮಂಗಿಳ ದರ್ಸ್ ವಿಧ್ಯಾರ್ಥಿಗಳು ಕುಂಡೂರು ಉಸ್ತಾದ್ ಬೈತ್ ಆಲಾಪಿಸಿದರು.ಎಸ್‌ವೈಎಸ್ ದ.ಕ. ಈಸ್ಟ್ ಜಿಲ್ಲಾ ಸಾಂತ್ವನ ಕಾರ್ಯದರ್ಶಿ ಸ್ವಾಲಿಹ್ ಮುರರವರು ಸ್ವಾಗತಿಸಿದರು. ಇಸಾಬಾ ಜಿಲ್ಲಾ ಡೈರೆಕ್ಟರ್ ಸಂಶುದ್ದೀನ್ ಬೆಳ್ಳಾರೆ ಧನ್ಯವಾದ ಗೈದರು. ದ‌ಅ್‌ವಾ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com