ಮಂಗಳೂರು :ಸುನ್ನೀ ಯುವ ಜನ ಸಂಘ
(SYS) ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ಇದರ ವತಿಯಿಂದ ಬಡಕಬೈಲ್ ನಲ್ಲಿ ನಿರ್ಮಿಸಿದ ‘ತಾಜ್-ದಾರ್’ (Taj Dar) ಎಂಬ ಹೆಸರಿನ ಮನೆಯನ್ನು ಹಸ್ತಾಂತರಿಸಲಾಯ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಸಿ.ಎಚ್. ಮುಹಮ್ಮದ್ ಅಲಿ ಸಖಾಫಿ ಅಶ್ಅರಿಯ ವಹಿಸಿದ್ದರು.ಮನೆಯ ಕೀಲಿ ಕೈ ಯನ್ನು ಸಯ್ಯಿದ್ ನಿಝಾಮುದ್ದೀನ್ ತಂಙಳ್ ಕೊಯ್ಲಾಂಡಿ ಹಸ್ತಾಂತರಿಸಿದರು.
ಎಸ್ ವೈ ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ
ಜಿ.ಎಂ.ಕಾಮಿಲ್ ಸಖಾಫಿ ಕಾರ್ಯಕ್ರಮವನ್ನು
ಉದ್ಘಾಟಿಸಿದರು.ಸಯ್ಯಿದ್ ಜಲಾಲ್ ತಂಙಳ್ ಉಳ್ಳಾಲ ಪ್ರಾರ್ಥಿಸಿದರು.
ಎಸ್ ವೈ ಎಸ್ ಮಾಜಿ ರಾಜ್ಯಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ, ಜಿಲ್ಲಾ ಕಾರ್ಯದರ್ಶಿಗಳಾದ
ಬಶೀರ್ ಮದನಿ ಕೂಳೂರು, ಇಸ್ಹಾಕ್ ಝುಹ್ರಿ ಕಾನಕೆರೆ ಶುಭಹಾರೈಸಿದರು.
ವೇದಿಕೆಯಲ್ಲಿ ಜಿಲ್ಲಾ ಕೋಶಾಧಿಕಾರಿ ಬಾವ ಫಕ್ರುದ್ದೀನ್, ಜಿಲ್ಲಾ ಕಾರ್ಯದರ್ಶಿ ಗಳಾದ
ಇಸ್ಮಾಯಿಲ್ ನಾವೂರು, ಕೆ.ಎಂ.ಫಾರೂಕ್ ಕೆ.ಸಿ.ರೋಡ್, ಜಿಲ್ಲಾ ಸಮಿತಿ ಸದಸ್ಯರಾದ
ಬದ್ರುದ್ದೀನ್ ಅಝ್ಹರಿ ಬಡಕಬೈಲ್, ಎಸ್.ಎಂ.ಬಶೀರ್ ಹಾಜಿ ಕುಂಬ್ರ, ಇಸ್ಮಾಯಿಲ್ ಎಂಕೆಎಂ, ಹನೀಫ್ ಹಾಜಿ ಬಜ್ಪೆ,ಸಲೀಲ್ ಹಾಜಿ, ಮಜೀದ್ ಫರೀದ್ ನಗರ, ಸಿ.ಎಂ.ಫಾರೂಕ್ ಶೇಡಿಗುರಿ, ಸಿ.ಎಂ.ಅಬೂಬಕರ್ ಲತೀಫಿ, ಮಹ್ಬೂಬ್ ರ್ರಹ್ಮಾನ್ ಸಖಾಫಿ ಕಿನ್ಯ, ಮಹ್ಮೂದ್ ಹಾಜಿ ಖಂಡಿಗ, ಟೀಂ ಇಸಾಬ ಡೈರೆಕ್ಟರ್ ಇಸ್ಮಾಯಿಲ್ ಬಿ.ಎಚ್. ಅಮ್ಮುಂಜೆ ಸೆಂಟರ್ ಅಧ್ಯಕ್ಷ ಮಜೀದ್ ಸಖಾಫಿ, ಮಜ್ಲಿಸ್ ಗಾಣೆಮಾರ್ ವಿದ್ಯಾಸಂಸ್ಥೆಯ ಮ್ಯಾನೇಜರ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ, ಎಸ್ ಎಸ್ ಎಫ್ ಜಿಲ್ಲಾ ನಾಯಕ ಅಲ್ತಾಫ್ ಶಾಂತಿಬಾಗ್, ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮನೆ ನಿರ್ಮಾಣದ ಕೆಲಸ ಕಾರ್ಯಗಳಲ್ಲಿ ಸಹಕರಿಸಿದ ಆನಂದ ಪೂಜಾರಿ ಬಡಕಬೈಲ್, ಜಿಲ್ಲಾ ಸದಸ್ಯರಾದ ಬಶೀರ್ ಗಾಣೆಮಾರ್,ಪಿ.ಎಚ್ ಉಸ್ಮಾನ್ ರವರನ್ನು ಸ್ಮರಣಿಕೆ ನೀಡಿ,ಶಾಲು ಹೊದಿಸಿ ಸನ್ಮಾನಿಸಲಾಯಿತು. ಜಿಲ್ಲಾ ಪ್ರಧಾನ
ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮಾಲಿಕಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.