janadhvani

Kannada Online News Paper

ಕೆ.ಸಿ.ಎಫ್.ಮದೀನಾ ಖಲೀಫ ಝೋನ್ – ಮಹಬ್ಬ ಮೀಲಾದ್ ಕಾನ್ಫರೆನ್ಸ್

ದೋಹಾ ಖತ್ತರ್ : ಕರ್ನಾಟಕ ಕಲ್ಚರಲ್ ಫೌಂಡೇಶನ್ ಮದೀನಾ ಖಲೀಫಾ ಝೋನ್ ಸಮಿತಿಯ ವತಿಯಿಂದ ದಿನಾಂಕ 20-10-2022 ರ ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಮಹಬ್ಬ ಮಿಲಾದ್ ಸಮಾವೇಶ ಉಮ್ಸಲಾಲ್ ಅಲಿ, ಅತಿಥಿಗೃಹದಲ್ಲಿ ಜರುಗಿತು.

KCF ಮದೀನಾ ಖಲೀಫಾ ಝೋನ್ ಅಧ್ಯಕ್ಷರಾದ ಇಸ್ಹಾಖ್ ನಿಝಾಮಿ (ಕೊಡ್ಲಿಪೇಟೆ) ಅವರ ಅಧ್ಯಕ್ಷತೆಯಲ್ಲಿ ನಡೆದ ಮಿಲಾದ್ ಸಮಾವೇಶದ ಉದ್ಘಾಟನೆಯನ್ನು ಹಾಫಿಝ್ ಉಮರುಲ್ ಫಾರೂಖ್ ಸಖಾಫಿ (ಎಮ್ಮೆಮಾಡು) ನೆರವೇರಿಸಿದರು.

ಮಹ್ರೂಫ್ ಸುಲ್ತಾನಿ ಉಸ್ತಾದರು ಮುಖ್ಯ ಪ್ರಭಾಷಣ ಮಾಡಿದರು KCF ಖತ್ತರ್ ರಾಷ್ಟ್ತ್ರೀಯ ಪ್ರಧಾನ ಕಾರ್ಯದರ್ಶಿ ಫಾರೂಖ್ ಕೃಷ್ಣಾಪುರ ಮತ್ತು KCF ಖತ್ತರ್ ಶಿಕ್ಷಣ ವಿಭಾಗ ಅಧ್ಯಕ್ಷರಾದ ಖಾಲಿದ್ ಹಿಮಮಿ ಉಸ್ತಾದರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಆಸಿಫ್ ಅನ್ವಾರಿ ಉಸ್ತಾದ್ ( ಕಂಡಕ್ಕರೆ) ಹಾಗೂ ಇಸ್ಹಾಖ್ ನಿಝಾಮಿ ಉಸ್ತಾದ್ (ಕೊಡ್ಲಿಪೇಟೆ) ತಂಡದ ವತಿಯಿಂದ ಬುರ್ಧಾ ಶರೀಫ್ ಆಲಾಪನೆ ನಡೆಯಿತು.
KCF INC ನೇತಾರರಾದ ಹಾಫಿಝ್ ಉಮರುಲ್ ಫಾರೂಖ್ ಸಖಾಫಿ ಉಸ್ತಾದ್ ಹಾಗೂ ಕಬೀರ್ ಬಾಯ್ ದೇರಳಕಟ್ಟೆ , ನಅತೇ ಶರೀಫ್ ಗಾಯಕರಾದ ಇಮ್ರಾನ್ (ಮಡಿಕೇರಿ)
ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.

ಪುಟ್ಟ ಪುಟಾಣಿಗಳು ಮತ್ತು ಕೆಲವು ಸದಸ್ಯರು ಪ್ರವಾದಿ ಖೀರ್ತನೆಯನ್ನು ಕೊಂಡಾಡಿದರು…
ವೇದಿಕೆಯಲ್ಲಿ KCF ರಾಷ್ಟ್ರೀಯ ಅಧ್ಯಕ್ಷರಾದ ಹನೀಫ್ ಪಾತೂರ್, ಯಹ್ಯಾ ಸಅದಿ ಕಡಂಗ, INC ಅಡ್ಮಿನ್ ಅಧ್ಯಕ್ಷರಾದ ಕಬೀರ್ ಬಾಯ್ ದೆರಳಕಟ್ಟೆ, ಇಕ್ಬಾಲ್ ಪೂಂಜಾಲ್ ಕಟ್ಟೆ, ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೊದಲಿಗೆ KCF MK ಝೋನ್ ಪ್ರಧಾನ ಕಾರ್ಯದರ್ಶಿ ಆಶಿಕ್ ಬೈರಿಕಟ್ಟೆ ಸ್ವಾಗತಿಸಿ ಕೊನೆಯಲ್ಲಿ ನಝೀರ್ ಮೂರ್ನಾಡು ವಂದಿಸಿದರು ಶಫೀಕ್ ಉಜಿರೆ ಕಾರ್ಯಕ್ರಮವನ್ನು. ನಿರೂಪಿಸಿದರು..

error: Content is protected !! Not allowed copy content from janadhvani.com