janadhvani

Kannada Online News Paper

ಜವಳಿ ವ್ಯಾಪಾರಸ್ಥರ ಮೇಲೆ ಹಲ್ಲೆ: ಪೋಲೀಸ್ ಇಲಾಖೆಗೆ ಸವಾಲೆಸದಂತಿದೆ- ಅಶ್ರಫ್ ಕಿನಾರ

ಮಂಗಳೂರು: ಇತ್ತೀಚೆಗೆ ಕಡಬದ ಕಾಣಿಯೂರಿನಲ್ಲಿ, ಹೊಟ್ಟೆಪಾಡಿಗಾಗಿ ಜವಳಿ ವ್ಯಾಪಾರ ನಡೆಸಿ ಕುಟುಂಬವನ್ನು ಸಾಕುತ್ತಿದ್ದ ಬಡಪಾಯಿಗಳಿಗೆ ಹಲ್ಲೆ ನಡೆಸಿ ವಿಕೃತ ಮೆರೆದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಶ್ರಫ್ ಕಿನಾರ ಮಂಗಳೂರು ಆಗ್ರಹಿಸಿದ್ದಾರೆ.

ನಮ್ಮದೇ ಸರಕಾರ ಇದೆ, ಪೋಲೀಸರಿಗೆ ನಮ್ಮನ್ನು ಏನು ಮಾಡುಕ್ಕಾಗೊಲ್ಲ ಎಂಬ ಭಾವನೆ ಕೆಲವು ಪುಂಡಪೋಕರಿಗಳಿಗೆ ಇರುವಂತೆ ಗೋಚರವಾಗುತ್ತಿದೆ. ಇಲ್ಲದಿದ್ದರೆ ರಾಜಾರೋಷವಾಗಿ ಕಾನೂನು ಕೈಗೆತ್ತಿಕೊಂಡು ಇಷ್ಟೊಂದು ಧೈರ್ಯದಿಂದ ಹಲ್ಲೆ ನಡೆಸಿ ವಿಡಿಯೋ ರವಾನೆ ಮಾಡುವುದಾದರೆ ಇದು ಪೋಲೀಸ್ ಇಲಾಖೆಗೆ ಸವಾಲೆಸದಂತೆ.

ಅಲ್ಲದೆ, ಇದರಿಂದ ತಪ್ಪಿಸಿಕೊಳ್ಳಲು ಮಹಿಳೆಯರ ಮೂಲಕ ಸುಳ್ಳು ಕೇಸು ದಾಖಲಿಸಿ ಪ್ರಕರಣದ ದಿಕ್ಕು ತಪ್ಪಿಸಲು ಪ್ರಯತ್ನ ಮಾಡಿರುವುದನ್ನು ಹಿರಿಯ ಅಧಿಕಾರಿಗಳು ಸೂಕ್ತ ತನಿಕೆ ನಡೆಸಬೇಕು, ಹಲ್ಲೆ ಮಾಡಿದ ಸರ್ವರ ಮೇಲೂ ಕೇಸು ದಾಖಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.