ಮಂಗಳೂರು: ಜಿಲ್ಲೆಯ ಜನರು ಸಮಾನ ಮನಸ್ಕ ಸಂಘಟನೆಯ ಆಶ್ರಯದಲ್ಲಿ ಅಕ್ಟೋಬರ್ 18 ರಂದು ಸುರತ್ಕಲ್ ಟೋಲ್ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರವು, ಜನರು ನಡೆಸುತ್ತಿರುವ ಪ್ರಜಾ ಸತ್ತಾತ್ಮಕ ಹೋರಾಟವನ್ನು ಹತ್ತಿಕ್ಕಲು ಪೊಲೀಸು ದಬ್ಬಾಳಿಕೆಯನ್ನು ಬಳಸುತ್ತಿದೆ.
ಸಂಭಾವ್ಯ ಹೋರಾಟಗಾರರ ಮನೆಗಳಿಗೆ ಮಧ್ಯರಾತ್ರಿ ಬಲವಂತವಾಗಿ ನುಗ್ಗಿ ಪೊಲೀಸು ನೋಟೀಸು ನೀಡಲಾಗುತ್ತಿದ್ದು.ಸರಕಾರದ ಮತ್ತು ಪೊಲೀಸರ ಇಂತಹ ನಡೆ ತೀವ್ರ ಖಂಡನೀಯ ಎಂದು ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವ ಆಡಳಿತದಲ್ಲಿ ಅನ್ಯಾಯದ ವಿರುದ್ಧ ದ್ವನಿ ಎತ್ತುವ ಸಾಮೂಹಿಕ ಜನ ವರ್ಗವನ್ನು ಪೊಲೀಸು ಒತ್ತಡ ಮೂಲಕ ಹತ್ತಿಕ್ಕುವ ಸರಕಾರದ ಯಾವುದೇ ನಡೆ ಫಲಕಾರಿಯಾಗುವುದಿಲ್ಲ.ಹಾಲಿ ಸರಕಾರವು ಜನಾಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.