janadhvani

Kannada Online News Paper

ದಾರುಲ್ ಹಿಕ್ಮ ಬೆಳ್ಳಾರೆ ನವೀಕೃತ ಕಟ್ಟಡ ಕಾಮಗಾರಿಯ 3D image ( BLUE PRINT ) ಅನಾವರಣ

ಬೆಳ್ಳಾರೆ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ 10 ವರ್ಷಗಳಿಂದ ಮರಹೂಂ ಮಾಸ್ತಿಕಟ್ಟೆ ಇಸ್ಮಾಯಿಲ್ ಹಾಜಿ ಅವರ ಹೆಸರಿನಲ್ಲಿ ಮಕ್ಕಳು ದಾನವಾಗಿ ನೀಡಿದ ಸ್ಥಳದಲ್ಲಿ ಕಾರ್ಯಾಚರಿಸುತ್ತಿರುವ ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ.ಇದೊಂದು ಧಾರ್ಮಿಕ ಮತ್ತು ಲೌಕಿಕ ಸಮನ್ವಯ ಕೇಂದ್ರವಾಗಿದೆ . ಇಲ್ಲಿ ಹಿಫ್ಝುಲ್ ಕುರಾನ್ ಕಾಲೇಜು , ದರ್ಸ್, ಅಖಿಲ ಭಾರತದ ಸುನ್ನಿ ವಿದ್ಯಾಭ್ಯಾಸ ಬೋರ್ಡ್ ಮದರಸ , ಇಂಗ್ಲಿಷ್ ಮೀಡಿಯಂ ಸ್ಕೂಲ್ ಸೇರಿದಂತೆ ಸಂಸ್ಥೆಯಲ್ಲಿ ಸುಮಾರು 200 ಕ್ಕಿಂತ ಅಧಿಕ ಮಕ್ಕಳು ವಿದ್ಯಾರ್ಜನೆ ಪಡೆಯುತ್ತಿದ್ದರೆ. ಸಂಸ್ಥೆಯು ಜಮಾಲುಲೈಲಿ ಸಯ್ಯದ್ ಕುಟುಂಬದ ಆದ್ಯಾತ್ಮಿಕ ನೇತಾರರಾದ ಅಸ್ಸಯ್ಯದ್ ಕಾಜೂರ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಬೆಳ್ಳಾರೆ ಮತ್ತು ಪರಿಸರದ ಉಲಮಾ ಉಮರಾ ಹಾಗು ಪ್ರವಾಸಿ ಸಹೋದರರ ಕಠಿಣ ಪರಿಶ್ರಮದಿಂದ ಅಭಿವೃದ್ಧಿಯತ್ತ ಹೆಜ್ಜೆಯಿಡುತ್ತಿದೆ.ಇದೀಗ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಟ್ಟಡ ಕೊರತೆಯು ಪ್ರಮುಖ ಅಂಶವಾಗಿದೆ ಇದನ್ನು ಪರಿಹರಿಸಲು ದಾರುಲ್ ಹಿಕ್ಮ ಇದರ ಅನಿವಾಸಿ ಘಟಕವಾದ ದಾರುಲ್ ಹಿಕ್ಮ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಇದರ ನೇತೃತ್ವದಲ್ಲಿ ವಿಶಾಲವಾದ ಸೌಕರ್ಯವುಳ್ಳ ಕಟ್ಟಡ ಕಾಮಗಾರಿಗೆ ಪದ್ದತಿಯನ್ನು ರೂಪಿಸಿದ್ದು ಇದರ 3D ಇಮೇಜ್ ( BLUE PRINT ) ಅನ್ನು ಸಂಸ್ಥೆಯಲ್ಲಿ ನಡೆದ ನೂರೇ ರಸೂಲ್ ಮೀಲಾದ್ ಕಾರ್ಯಕ್ರಮದಲ್ಲಿ ಅನಾವರಣ ಗೊಳಿಸಲಾಯಿತು.ಅಸ್ಸಯ್ಯದ್ ಕಾಜೂರ್ ತಂಗಳ್ ರವರ ನೇತೃತ್ವದಲ್ಲಿ ನಡೆದ
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ದಾವೂದ್ ಸಹದಿ , ಉಪಾಧ್ಯಕ್ಷರಾದ BA ಮಹಮೂದ್ ಬೆಳ್ಳಾರೆ, ಹಮೀದ್ ಆಲ್ಫಾ, ಮುಸ್ತಫಾ ಮಾಸ್ತಿಕಟ್ಟೆ , ಸತ್ತಾರ್ ಸಖಾಫಿ ,ಹಸ್ಸನ್ ಹಾಜಿ ಇಂದ್ರಾಜೆ, YK ಸುಲೈಮಾನ್ ಹಾಜಿ ಇಂದ್ರಾಜೆ, ಆರೀಫ್ ಬೆಳ್ಳಾರೆ, ಝಕಾರಿಯಾ ಗೋವಾ, ಇಬ್ರಾಹಿಂ ಮದನಿ,ಉಬೈದ್ ಇಂದ್ರಾಜೆ ಮುಂತಾದ ಗಣ್ಯರು , ಸಂಸ್ಥೆಯ ಹಿತೈಷಿಗಳು ಉಪಸ್ಥಿತರಿದ್ದರು.