ಚಿಕ್ಕಮಗಳೂರು,ಅ.15: ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಎಸ್ಸೆಸ್ಸೆಫ್ ರಾಜ್ಯ ಸಮಿತಿ ನಡೆಸುತ್ತಿರುವ ಸಾಹಿತ್ಯೋತ್ಸವ ಶ್ಲಾಘನೀಯವಾಗಿದ್ದು ಈ ಮೂಲಕ ಸಂಘಟನೆಯು ಸಮುದಾಯದ ಮಕ್ಕಳನ್ನು ದೇಶದ ಸೊತ್ತಾಗಿ ಪರಿವರ್ತನೆ ಮಾಡುತ್ತಿದೆ ಎಂದು ಖ್ಯಾತ ಸಾಹಿತಿಗಳು, ಚಿಂತಕರೂ ಆಗಿರುವ ರವೀಶ್ ಕ್ಯಾತನಬೀಡು ಹೇಳಿದರು.
ಅವರು, ಚಿಕ್ಕಮಗಳೂರು ಮಾಗಡಿಯ ಇಂಫಾಲ್ ಆಡಿಟೋರಿಯಂ ನಲ್ಲಿ ನಡೆಯುತ್ತಿರುವ ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವವನ್ನು ಉದ್ಘಾಟನೆ ಮಾಡುತ್ತಾ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲಾಭಿರುಚಿಯನ್ನು ಪೋಷಿಸಿ ಬೆಳೆಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹ ಎಂದರು.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ ಅಧ್ಯಕ್ಷತೆ ವಹಿಸಿದರು.
ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಳೂರು, ಕೋಶಾಧಿಕಾರಿ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ, ಸಾಹಿತ್ಯೋತ್ಸವ ಚೇರ್ಮನ್ ಹುಸೈನ್ ಸಅದಿ ಹೊಸ್ಮಾರ್, ಸಫ್ವಾನ್ ಚಿಕ್ಕಮಗಳೂರು, ಜಿಲ್ಲಾಧ್ಯಕ್ಷ ಆಬಿದ್ ಸಖಾಫಿ ಉಪಸ್ಥಿತರಿದ್ದರು.
ಸಾಹಿತ್ಯೋತ್ಸವ ಸಮಿತಿ ಕನ್ವೀನರ್ ಮುಹಮ್ಮದ್ ಅಲಿ ಉಪ್ಪಿನಂಗಡಿ ಸ್ವಾಗತಿಸಿ ವಂದಿಸಿದರು.