janadhvani

Kannada Online News Paper

ಕೆ.ಸಿ.ಎಫ್ ಕುವೈಟ್: ಪ್ರವಾದಿ (ﷺ ) ಮಾನವೀಯತೆಯ ಮಹಾನಾಯಕ- ಮೀಲಾದ್ ಕಾನ್ಫರೆನ್ಸ್ ಯಶಸ್ವಿ ಸಮಾಪ್ತಿ

ಅಬ್ಬಾಸಿಯ್ಯಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ ಸಿ ಎಫ್) ಕುವೈಟ್ ರಾಷ್ಟ್ರೀಯ ಸಮಿತಿ ವತಿಯಿಂದ ಪ್ರವಾದಿ ಮುಹಮ್ಮದ್ (ﷺ ) ಮಾನವೀಯತೆಯ ಮಹಾನಾಯಕ ಎಂಬ ಘೋಷ ವಾಕ್ಯದೊಂದಿಗೆ ಮೀಲಾದ್ ಕಾನ್ಫರೆನ್ಸ್ -22 ಕಾರ್ಯಕ್ರಮ ಅಬ್ಬಾಸಿಯದ ಇಂಡಿಯನ್ ಸೆಂಟ್ರಲ್ ಸ್ಕೂಲ್ ನಲ್ಲಿ ದಿನಾಂಕ 7/10/2022 ರಂದು ಬಹಳ ವಿಜೃಂಭಣೆ ಯಿಂದ ನಡೆಯಿತು.

KCF ಕುವೈತ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹು. ಹುಸೈನ್ ಎರ್ಮಾಡ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ಮೀಲಾದ್ ಸ್ವಾಗತ ಸಮಿತಿ ಚೆರ್ಮನ್ ಬಹು. ಅಬ್ದುಲ್ ರಹ್ಮಾನ್ ಸಖಾಫಿರವರು ಕಾರ್ಯಕ್ರಮ ಉದ್ಘಾಟಿಸಿದರು.
ಸಯ್ಯದ್ ಹಬೀಬ್ ಅಲ್ ಬುಖಾರಿ ತಂಗಳ್ ರವರ ನೇತೃತ್ವ ದಲ್ಲಿ ಮೌಲಿದ್ ಪಾರಾಯಣ ನೆರೆವೇರಿತು. RSC ನಾಯಕರಾದ ಸಮೀರ್ ಮುಸ್ಲಿಯಾರ್ ಮತ್ತು KKMA ನಾಯಕರಾದ ಅಬ್ದುಲ್ ಲತೀಫ್ ಮೂಲರಪಟ್ನಾ ರವರ ಸಾಮಾಜಿಕ ಕಾರ್ಯಕ್ರಮನ್ನು ಗುರುತಿಸಿ ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು.ಬಹು.ಅಸಯ್ಯದ್ ಮುತ್ತನೂರ್ ತಂಙಳ್, ಹಾಗೂ ಮನ್ಸೂರ್ ಕೋಟಗದ್ದೆ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

KCF ಕುವೈತ್ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಜನಾಬ್. ಯಾಕೂಬ್ ಕಾರ್ಕಳ ಸಭಿಕರನ್ನು ಸ್ವಾಗತಿಸಿದರು. ಶಮೀರ್ ಮೂಡಬಿದ್ರೆ ರವರ ಕಿರಾಅತ್ ನೊಂದಿಗೆ ಕಾರ್ಯಕ್ರಮ ಆರಂಭ ಗೊಂಡಿತು.

ಬಹು. ಸಯ್ಯದ್ ಮುತ್ತನೂರ್ ತಂಙಳ್ ದುಆಕೆ ನೇತೃತ್ವ ನೀಡಿದರು. ಪ್ರಖ್ಯಾತ ವಾಗ್ಮಿ ಬಹು.ನೌಫಲ್ ಸಖಾಫಿ ಕಳಸ ರವರು ಮುಖ್ಯ ಭಾಷಣ ನಡಿಸಿದರು.ಮುಖ್ಯ ಅತಿಥಿ ಯಾಗಿ ಭಾಗವಹಿಸಿದ KCF ಮಾಜಿ ಪ್ರ. ಕಾರ್ಯದರ್ಶಿ ಜನಾಬ್. ಮನ್ಸೂರ್ ಕೋಟಗದ್ದೆ ರವರು KCF ಸಂಘಟನೆ ಯಾಕೆ ಬೇಕು ಎಂಬುದರ ಬಗ್ಗೆ ಸಂಷಿಪ್ತವಾಗಿ ವಿವರಿಸಿದರು.Icf ನಾಯಕರಾದ ಬಹು ಅಬ್ದುಲ್ ಹಕೀಮ್ ದಾರಿಮಿ ಉಸ್ತಾದ್, ಅಬ್ದುಲ್ಲಾ ವಡಗರ ಹಾಜರಿದ್ದರು. ಕೆಸಿಎಫ್ ನಾಯಕರಾದ ಬಹು. ಉಮರ್ ಝುಹರಿ ಉಸ್ತಾದ್,ಹಮೀದ್ ಸಅದಿ ಝುಹರಿ ಉಸ್ತಾದ್, ಬದ್ರ್ ಅಲ್ ಶಮ ಕ್ಲಿನಿಕ್ ಬ್ರಾಂಚ್ ಮೆನೇಜರ್ ಅಬ್ದುಲ್ ರಝಾಕ್
ಕಾರ್ಯಕ್ರಮಕ್ಕೆ ಶುಭ ಕೋರಿದರು.

2020-21ಕೋರೋಣ ತುರ್ತು ಸಂದರ್ಭದಲ್ಲಿ ಅವಿರತವಾಗಿ ಪರಿಶ್ರಮ ಮಾಡಿದ kcf ಕುವೈತ್ ರಾಷ್ಟ್ರೀಯ ಸಮಿತಿಯ ಕ್ಯಾಬಿನೆಟ್ ಸದಸ್ಯರಾದ ಜನಾಬ್ ಝಕರಿಯಾ ಆನೇಕಲ್ ರವರಿಗೆ ಕೆಸಿಎಫ್ ರಾಷ್ಟ್ರೀಯ ಸಮಿತಿಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

KKMA ಕುವೈತ್ ಕಿಸ್ವಾ ಕೊಡಗು ಕುವೈತ್ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಮರ್ಕಝುಲ್ ಹುಧಾ ಕುವೈತ್ ಸಮಿತಿ, ಅಲ್ ಮದೀನಾ ಕುವೈತ್ ಸಮಿತಿ, ಮಲ್ಜಅ ಕುವೈತ್ ಸಮಿತಿ, ಮುಹಿಮ್ಮಾತ್ ಕುವೈತ್ ಸಮಿತಿ, DKSC ಕುವೈತ್ ಸಮಿತಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಶುಭ ಕೋರಿದರು.

ಕಾರ್ಯಕ್ರಮ ದಲ್ಲಿಕೆಸಿಎಫ್ ಕುವೈಟ್ ಐ ಟೀಂ ತಂಡ ಹಾಗೂ ದಫ್ಫ್ ಟೀಂ ಬಹಳ ಅತ್ತ್ಯುತ್ತಮ ಕಾರ್ಯ ನಿರ್ವಹಿಸಿರುವುದು ಅದೇ ರೀತಿ ಬುರ್ದಾ ಮೆಹಬೂಲ ಸೆಕ್ಟರ್ ಅಬ್ಬು ಬಂಬ್ರಾಣ ತಂಡ ದವರಿಂದ ಮತ್ತು icf ಮೆಹಬೂಲ ಸಯ್ಯದ್ ಹುಸೈನ್ ಜಿಫ್ರಿ ತಂಗಳ್ ರವರ ನೇತ್ರತ್ವ ದಲ್ಲಿ ಬುರ್ದಾ ನಡೆಸಿ ಕೊಡಲಾಯಿತು.ಅದೇ ರೀತಿಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಮಿತಿ ನಾಯಕರು ಝೋನ್ ನಾಯಕರು, ಸೆಕ್ಟರ್ ನಾಯಕರು ಭಾಗವಹಿಸಿದರು.
ಬಹುಮಾನ್ಯ ಬಾದುಷಾ ಸಖಾಫಿ ಉಸ್ತಾದ್ ರವರು ಕಾರ್ಯಕ್ರಮ ನಿರೂಪಿಸಿದರು ಕೊನೆಯಲ್ಲಿ ಇಬ್ರಾಹಿಂ ವೇಣೂರು ಧನ್ಯವಾದವಿತ್ತರು.

ವರದಿ ಇಬ್ರಾಹಿಂ ವೇಣೂರು ಕುವೈಟ್

error: Content is protected !! Not allowed copy content from janadhvani.com