janadhvani

Kannada Online News Paper

ಕುವೈಟ್: ಕೊಡಗು ಸುನ್ನಿ ವೇಲ್ಪೇರ್ ಅಸೋಸಿಯೇಷನ್ (KSWA)- ನವ ಸಾರಥಿಗಳು

ಕುವೈಟ್: ಪರ್ವಾನಿಯ್ಯ ಮೆಟ್ರೋ ಸಭಾಂಗಣದಲ್ಲಿ ಅಕ್ಟೋಬರ್ 28-2022 ರಂದು ಕೊಡಗು ಸುನ್ನಿ ವೇಲ್ಪೇರ್ ಅಸೋಸಿಯೇಷನ್ ಅಧ್ಯಕ್ಷರಾದ ಬಾದುಶ ಸಖಾಫಿರವರ ನೇತೃತ್ವದಲ್ಲಿ ಜರುಗಿದ ವಾರ್ಷಿಕ ಮಹಾಸಭೆಯಲ್ಲಿ 2022-23 ನೆ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಬಾದುಶ ಸಖಾಫಿ ಕಾರೆಕ್ಕಾಡ್.
ಪ್ರಧಾನ ಕಾರ್ಯದರ್ಶಿಯಾಗಿ ರಹೀಮ್ ಕೊಳಕ್ಕೇರಿ ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಹಾಜಿ ಹುಂಡಿ.
ಸಂಘಟನಾ ವಿಭಾಗದ ಅಧ್ಯಕ್ಷರಾಗಿ ಸಿರಾಜ್ ಸುಂಟಿಕೊಪ್ಪ ಕಾರ್ಯದರ್ಶಿ ಹಾಫಿಲ್ ಅಶ್ರಫ್ ಮಿಸ್ಬಾಹಿ ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಶರೀಫ್ ಮುಸ್ಲಿಯಾರ್ ಅಯ್ಯಂಗೇರಿ ಕಾರ್ಯದರ್ಶಿ ಶರೀಫ್ ಸಹದಿ ಕೊಡ್ಲಿಪೇಟ. ಸಾಂತ್ವನ ವಿಭಾಗದ ಅಧ್ಯಕ್ಷ ರಾಗಿ ಅಬ್ದುಲ್ ರೆಹಮಾನ್ ಪಾರಪಳ್ಳಿ ಕಾರ್ಯದರ್ಶಿ ಅಶ್ರಫ್ ಕೊಂಡಗೇರಿ
ಅಡ್ಮಿನ್ ವಿಭಾಗದ ಅಧ್ಯಕ್ಷ ರಾಗಿ ರಿಯಾಜ್ ಸುಂಟಿಕೊಪ್ಪ ಕಾರ್ಯದರ್ಶಿ ಮುನೀರ್ ಹಾಕತ್ತೂರ್. ನೇಮಕಗೊಂಡರು.
ಅದೇ ರೀತಿ ಕಾರ್ಯಕಾರಿ ಸಮಿತಿಗೆ 9 ಸದಸ್ಯರನ್ನು ನೇಮಕ ಮಾಡಲಾಯಿತು.

ಸಮಿತಿಯ ಕೋರ್ಡಿನೇಟರಾಗಿ ಇಸ್ಮಾಯಿಲ್ ಅಯ್ಯಂಗೇರಿ ಹಾಗೂ ಸಲಹಾ ಸಮಿತಿ ಚೇರ್ಮಾನಾಗಿ ಮಾಹಿನ್ ಸಖಾಫಿ ಅಯ್ಯಂಗೇರಿ ಸಲಹಾ ಸಮಿತಿ ಸದಸ್ಯರಾಗಿ ಮುಹಮ್ಮದ್ ಹಾಜಿ ಮೂರ್ನಾಡ್ ಇಬ್ರಾಹಿಂ ಚೇರಿಯಪರಂಬು ಅಬ್ದುಲ್ ಖಾದರ್ ಮಡಿಕೇರಿ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯ ನಿಯಂತ್ರಕ(ಆರ್ ಓ) KCF ಸಮಿತಿಯ ಅಧ್ಯಕ್ಷರಾದ ಹುಸೈನ್ ಮುಸ್ಲಿಯಾರ್ ಎಮ್ಮೆಮಾಡು ಅವರ ನೇತ್ರತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಹುಸೈನ್ ಮುಸ್ಲಿಯಾರ್ ಮತ್ತು ಇಸ್ಮಾಯಿಲ್ ಅಯ್ಯಂಗೇರಿ ಮಾತಾಡಿ ಸಮಿತಿಯ ಅಧೀನದಲ್ಲಿ ಕಾರ್ಯಚರಿಸುವ ಪ್ರತಿ ಸಮಿತಿಗಳ ಉದ್ದೇಶ ಮತ್ತು ಅದರ ಕಾರ್ಯವೈಕರಿಯ್ಯಗಳ ಕುರಿತು ಸವಿಸ್ತಾರವಾಗಿ ವಿವರಿಸಿ ಕೊಡಗು ಸುನ್ನಿ ವೇಲ್ಪೇರ್ ಅಸೋಸಿಯೇಷನ್ ನ ಕಾರ್ಯಕರ್ತನ ಪ್ರವೃತ್ತಿ ಹೇಗಿರಬೇಕು ಎಂದು ತಿಳಿಸಿದರು.

ಪ್ರಸ್ತುತ ಸಭೆಯ ಮುಂಚಿತವಾಗಿ ಅದ್ದೂರಿಯಾಗಿ ಈದ್ ಮೀಲಾದ್ ಕಾರ್ಯಕ್ರಮ ನಡೆಯಿತು.

ಹಾಫಿಲ್ ಅಶ್ರಫ್ ಮಿಸ್ಬಾಹಿ ರವರ ನೇತೃತ್ವದಲ್ಲಿ ನಡೆದ ಮೌಲಿದ್ ಪಾರಾಯಣ ದೊಂದಿಗೆ ಪ್ರಾರಂಭಿಸಿದ ಕಾರ್ಯಕ್ರಮದಲ್ಲಿ ಸಯ್ಯಿದ್ ಹಬೀಬ್ ಕೊಯ ತಂಗಲ್ ಪ್ರಾರ್ಥನೆ ನಿರವೈಸಿ ಸಭೆಯನ್ನು ಹುಸೈನ್ ಮುಸ್ಲಿಯಾರ್ ಉದ್ಘಾಟನೆ ಗೈದರು.
ಕಾರ್ಯಕ್ರಮದಲ್ಲಿ ICF ಪ್ರ.ಕಾರ್ಯದರ್ಶಿ ಅಬ್ದುಲ್ಲ ವಡಗರ ಮುಖ್ಯ ಭಾಷಣ ಮಾಡಿದರು.
ಅಮೀನ್ ಸಕಾಫಿ ಕೇರಳ
ಬಶೀರ್ ಸಖಾಫಿ. ಬಾದುಶ ಸಖಾಫಿ. ಹುಸೈನ್ ಮುಸ್ಲಿಯಾರ್. ಶರೀಫ್ ಮುಸ್ಲಿಯಾರ್ ಹಮೀದ್ ಸಹದಿ.ಉಮರ್ ಝುಹರಿ.ಯಃಕೂಬ್ ಕಾರ್ಕಳ.ಆಶಂಷ ಭಾಷಣ ಮಾಡಿದರು
ಹನೀಫ್ ಚೇರಿಯಪರಂಬು ಮತ್ತು ಕಲಂದರ್ ಶಾಫಿ ಹಾಡು ಆಲಾಪಿಸಿದರು.
ಇಸ್ಮಾಯಿಲ್ ಅಯ್ಯಂಗೇರಿ ಸ್ವಾಗತಿಸಿ ಹನೀಫ್ ಚೇರಿಯಪರಂಬು ಧನ್ಯವಾದ ನಡೆಸಿ ಕೊನೆಯಲ್ಲಿ ಬಶೀರ್ ಸಖಾಫಿ ಅವರು ದುಆ ನಿರ್ವಹಿಸಿದರು.

error: Content is protected !! Not allowed copy content from janadhvani.com