ಸೌದಿ ಅರೇಬಿಯಾ: ಹೀರಾ ಗುಹೆಯ ಸಂದರ್ಶನ ನಿಷೇಧ ನಂತರ ಇದೀಗ ತಾಯಿಫ್‌ನ ಕೆಲವು ಪ್ರದೇಶಗಳಲ್ಲಿನ ಸಂದರ್ಶನವನ್ನು ಹಜ್ ಉಮ್ರಾ ಯಾತ್ರಾರ್ಥಿಗಳಿಗೆ ನಿಷೇಧಿಸಲಾಗಿದೆ. ತಾಯಿಫ್‌ನ ಹತ್ತಿರದ ಹಲೀಮತು ಸಅದಿಯ್ಯ ಪ್ರದೇಶ ಮತ್ತು ಇತರ ಕೆಲವು ಮಸೀದಿಗಳನ್ನು ಭೇಟಿ ಮಾಡುವುದನ್ನು ಹಜ್ ಉಮ್ರಾ ಯಾತ್ರಾರ್ಥಿಗಳಿಗೆ ನಿಯಂತ್ರಣ ಏರ್ಪಡಿಸಲಾಗಿದೆ.
ಯಾತ್ರೆಯ ಭಾಗವಾಗಿ ಈ ಸ್ಥಳಗಳನ್ನು ಭೇಟಿ ಮಾಡಬಾರದು ಎಂದು ಸಚಿವಾಲಯವು ಕೇಳಿಕೊಂಡಿದೆ ಮತ್ತು ಹಜ್ ಪ್ಯಾಕೇಜ್ ಗಳಲ್ಲಿ ಈ ಸ್ಥಳಗಳನ್ನು ಅಳವಡಿಸಬಾರದು ಎಂದು ಸಚಿವಾಲಯ ನಿರ್ದೇಶಿಸಿದೆ.ಹಜ್ ಮತ್ತು ಸೇವಾ ಸಂಸ್ಥೆಗಳು ಉಲ್ಲಂಘನೆ ಮಾಡಿದಲ್ಲಿ ಅದರ ಪರವಾನಗಿಯನ್ನು ರದ್ದುಗೊಳಿಸಲು ಸಚಿವಾಲಯ ಆದೇಶ ನೀಡಿದೆ.
ಐತಿಹಾಸಿಕ ಹಿನ್ನೆಲೆಯನ್ನು ದೃಢೀಕರಿಸಲಾಗದ ಕಾರಣ ಈ ನಿಯಂತ್ರಣ ಎನ್ನಲಾಗಿದೆ.ಸಚಿವಾಲಯದ ಉಪ ನಿರ್ದೇಶಕರಾದ ಅಬ್ದುಲ್ ಅಝೀಝ್ ಬಿನ್ ಅಸ್ಸಾದ್ ದಮನ್‌ಹುರಿ, ಈ ಸ್ಥಳಗಳಿಗೆ ಪ್ರವಾದಿ ಇತಿಹಾಸದೊಂದಿಗೆ ಯಾವುದೇ ಸಂಬಂಧ ಇರುವುದಾಗಿ ದೃಢೀಕರಿಸಲಾಗಿಲ್ಲ ಎಂದು ಹೇಳಿದ್ದಾರೆ.
ಪ್ರವಾದಿ(ಸ.ಅ)ಯವರಿಗೆ ಎದೆಹಾಲು ಉಣಿಸಿ, ಬೆಳೆಸಿದ ಹಲೀಮಾ ಬೀವಿ ಅವರ ಮನೆಯಾಗಿ ಗಣಿಸಿ ಹಲೀಮತು ಸಅದಿಯಾಗೆ ಯಾತ್ರಿಗಳು ಬರುತ್ತದ್ದಾರೆ ಆದರೆ, ಇದಕ್ಕೆ ಐತಿಹಾಸಿಕ ಆಧಾರವಿಲ್ಲ ಎಂದು ಸಚಿವಾಲಯ ಹೇಳಿಕೊಂಡಿದೆ.
ಪ್ರವಾಸೋದ್ಯಮಕ್ಕೆ ಸಚಿವಾಲಯ ಅನುಮತಿಸದ ಪ್ರವಾಸಿ ಸ್ಥಳಗಳು ಮತ್ತು ನಿರ್ಮಾಣ ಹಂತದ ಸ್ಥಳಗಳನ್ನು ಭೇಟಿ ಮಾಡಲು ಸಾಧ್ಯವಿಲ್ಲ.
ಐತಿಹಾಸಿಕ ಹಿನ್ನೆಲೆಯನ್ನು ಒಳಗೊಂಡಿದ್ದ ಜಬಲನ್ನೂರ್ ಬೆಟ್ಟಕ್ಕೆ ಭೇಟಿ ನೀಡುವುದಕ್ಕೂ ಇತ್ತೀಚೆಗೆ ಸಚಿವಾಲಯವು ನಿರ್ಬಂಧ ಹೇರಿತ್ತು.ಭದ್ರತಾ ಕಾಳಜಿ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಂದ ಈ ನಿರ್ಬಂಧವನ್ನು ಹೇರಲಾಗಿದೆ ಎಂದು ಸಚಿವಾಲಯ ತಿಳಿಸಿತ್ತು.