ರಿಯಾದ್ : ಸೌದಿ ಪಾಸ್‌ಪೋರ್ಟ್ (Jawazat) ನಿರ್ದೇಶನಾಲಯವು ಇಖಾಮಾ (Iqama) ಕಳೆದುಹೋದರೆ, ಬದಲಿಗೆ ಇಖಾಮಾ ನೀಡಲು 500 ರಿಯಾಲ್‌ಗಳ ಶುಲ್ಕ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದೆ.
ಇಖಾಮಾ ಅವಧಿಯಲ್ಲಿ ಒಂದು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿ ಉಳಿದಿದ್ದರೆ ಪರ್ಯಾಯ ಇಖಾಮಾಕ್ಕಾಗಿ 500 ರಿಯಾಲ್‌ಗಳ ಶುಲ್ಕವನ್ನು ಪಾವತಿಸಬೇಕು. ಶುಲ್ಕವನ್ನು ಸದ್ದಾದ್ ವ್ಯವಸ್ಥೆಯ ಮೂಲಕ ಪಾವತಿಸಬೇಕು. ಪರ್ಯಾಯ ಇಖಾಮಾ ಪಡೆಯಲು ಜವಾಝಾತ್ (Jawazat) ನಿರ್ದೇಶನಾಲಯಕ್ಕೆ ಇಖಾಮ ನಷ್ಟವಾಗಿರುವ ಬಗ್ಗೆ ಮಾಹಿತಿ ನೀಡಬೇಕು ಎಂಬ ಷರತ್ತು ಇದೆ.
ಜವಾಝಾತ್ ನಿರ್ದೇಶನಾಲಯ ಇಲ್ಲದ ಪ್ರದೇಶಗಳಲ್ಲಿ, ಇಖಾಮಾ ನಷ್ಟಗೊಂಡ ಬಗ್ಗೆ ಪೊಲೀಸ್ ಠಾಣೆಯಲ್ಲಿ ವರದಿ ಮಾಡಬೇಕು. ಉದ್ಯೋಗದಾತ ಅಥವಾ ಪೋಷಕರು ಜವಾಝಾತ್ ನಿರ್ದೇಶನಾಲಯದ ಮುಖ್ಯಸ್ಥರಿಗೆ ಇಖಾಮಾ ನಷ್ಟಕ್ಕೆ ಕಾರಣ ಮತ್ತು ನಷ್ಟಗೊಂಡ ಸ್ಥಳವನ್ನು ಸೂಚಿಸುವ ಅರ್ಜಿಯನ್ನು ಸಲ್ಲಿಸುವುದು ಶರತ್ತಿನ ಭಾಗವಾಗಿದೆ.
ಇಖಾಮಾ ಹೊಂದಿರುವವರ ಮಾನ್ಯವಾದ ಪಾಸ್‌ಪೋರ್ಟ್ ಮತ್ತು ಕಳೆದು ಹೋದ ಇಖಾಮಾದ ಪ್ರತಿ ಇದ್ದರೆ ಅದನ್ನೂ ಹಾಜರುಪಡಿಸಬೇಕು.
ಇಖಾಮಾ ನಷ್ಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ಜವಾಝಾತ್ ನಿರ್ದೇಶನಾಲಯದಲ್ಲಿ ವಿಶೇಷ ಅರ್ಜಿಯನ್ನು ಭರ್ತಿ ಮಾಡಬೇಕು. ಇದಲ್ಲದೇ ಪರ್ಯಾಯ ಇಖಾಮಾಗೆ ಬೇಕಾದ ಫಾರಂ ನ್ನೂ ಭರ್ತಿ ಮಾಡಿ ಸಲ್ಲಿಸಬೇಕು. ಪಾಸ್‌ಪೋರ್ಟ್‌ನಲ್ಲಿರುವ ಮಾಹಿತಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವ ರೀತಿಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಭರ್ತಿ ಮಾಡಿದ ಫಾರಂ ಮೇಲೆ ಉದ್ಯೋಗದಾತನು ಸಹಿ ಮತ್ತು ಮುದ್ರೆಯನ್ನು ಹಾಕಬೇಕು.
ಪರ್ಯಾಯ ಇಖಾಮಾ ಮಂಜೂರಾತಿಗಾಗಿ ಅರ್ಜಿಯೊಂದಿಗೆ ಇತ್ತೀಚಿನ ಎರಡು ಬಣ್ಣದ ಭಾವಚಿತ್ರಗಳನ್ನು ಸಲ್ಲಿಸಬೇಕು. ಇಖಾಮಾ ಕಳೆದುಕೊಂಡರೆ 1,000 ರಿಯಾಲ್‌ಗಳ ದಂಡವನ್ನೂ ಪಾವತಿಸಬೇಕು. ಬೆರಳಚ್ಚು ಮತ್ತು ಕಣ್ಣಿನ ಐರಿಸ್ ಚಿತ್ರವನ್ನು ನೋಂದಾಯಿಸುವ ಅವಶ್ಯಕತೆಯಿದೆ ಎಂದು ಜವಾಝಾತ್ ನಿರ್ದೇಶನಾಲಯ ಸ್ಪಷ್ಟಪಡಿಸಿದೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ