ದುಬೈ: ದುಬೈ ನಿವಾಸಿಗಳು ತಮ್ಮ ಸಹ- ನಿವಾಸಿಗಳ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು. ಕಟ್ಟಡ ಮಾಲೀಕರು, ಆಸ್ತಿ ನಿರ್ವಹಣೆ ಕಂಪನಿಗಳು ಮತ್ತು ಬಾಡಿಗೆದಾರರಿಗೆ ಇದು ಕಡ್ಡಾಯವಾಗಿದೆ ಎಂದು ದುಬೈ ಭೂ ಇಲಾಖೆ (Dubai Land Department) ತಿಳಿಸಿದೆ.
ಸ್ವಯಂ ಒಡೆತನದ ಅಥವಾ ಬಾಡಿಗೆ ಕಟ್ಟಡಗಳಲ್ಲಿ ವಾಸಿಸುವವರು ಎರಡು ವಾರಗಳಲ್ಲಿ ತಮ್ಮ ಎಲ್ಲಾ ಸಹ-ನಿವಾಸಿಗಳ ವಿವರಗಳನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ.
Dubai REST ಅಪ್ಲಿಕೇಶನ್ ಮೂಲಕ ನೋಂದಣಿ ಮಾಡಬೇಕಾಗಿದೆ. ಇದಕ್ಕಾಗಿ ಎಂಟು ಹಂತದ ಪ್ರಕ್ರಿಯೆಯನ್ನು ಆಪ್ ಸಿದ್ಧಪಡಿಸಿದೆ. ಎಲ್ಲಾ ಕಟ್ಟಡ ಮಾಲೀಕರು, ಡೆವಲಪರ್‌ಗಳು, ಆಸ್ತಿ ನಿರ್ವಹಣೆ ಕಂಪನಿಗಳು ಮತ್ತು ಬಾಡಿಗೆದಾರರು ಈ ಎಂಟು ಹಂತಗಳನ್ನು ಪೂರ್ಣಗೊಳಿಸಬೇಕು ಮತ್ತು ತಮ್ಮ ಸಹ- ನಿವಾಸಿಗಳನ್ನು ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ ಎಲ್ಲಾ ನಿವಾಸಿಗಳ ವೈಯಕ್ತಿಕ ವಿವರಗಳು ಮತ್ತು ಎಮಿರೇಟ್ಸ್ ಐಡಿ ಅಗತ್ಯವಾಗಿದೆ.
ಒಮ್ಮೆ ನೋಂದಾಯಿಸಿದ ನಂತರ, ಅವರ ಮಾಹಿತಿಯನ್ನು ಸ್ವಯಂಚಾಲಿತವಾಗಿ ನಂತರದ ಬಾಡಿಗೆ ಒಪ್ಪಂದಗಳಿಗೆ ಸೇರಿಸಲಾಗುತ್ತದೆ.
Dubai REST ಅಪ್ಲಿಕೇಶನ್ ಅನ್ನು ತೆರೆದ ನಂತರ ಮೊದಲ ಬಾರಿಯ ಬಳಕೆದಾರರು ರಿಜಿಸ್ಟರ್ ಮಾಡಿಕೊಳ್ಳಬೇಕು. ನಂತರ Individual ವಿಭಾಗವನ್ನು ಆಯ್ಕೆ ಮಾಡಿ UAE PASS ಮೂಲಕ ಲಾಗಿನ್ ಮಾಡಬಹುದಾಗಿದೆ. ಲಾಗಿನ್ ವಿವರಗಳನ್ನು ಪರಿಶೀಲಿಸಿದ ನಂತರ, ಲಭ್ಯವಿರುವ ಡ್ಯಾಶ್‌ಬೋರ್ಡ್‌ನಿಂದ ನಿಮ್ಮ ಪ್ರಾಪರ್ಟಿಯನ್ನು ಆಯ್ಕೆ ಮಾಡಬೇಕು. ನಂತರ Manage Co Occupants ಮೆನು ಆಯ್ಕೆಮಾಡಿ Proceed ಕ್ಲಿಕ್ ಮಾಡಿ. ಇದರಲ್ಲಿ Add more ಎಂದು ನಮೂದಿಸುವ ಮೂಲಕ ನಿಮ್ಮೊಂದಿಗೆ ವಾಸಿಸುವ ಪ್ರತಿಯೊಬ್ಬರ ಮಾಹಿತಿಯನ್ನು ಸೇರಿಸಬೇಕಾಗುತ್ತದೆ.
ಪ್ರತಿಯೊಬ್ಬರ ಎಮಿರೇಟ್ಸ್ ಐಡಿ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ Verify ಬಟನ್ ಕ್ಲಿಕ್ ಮಾಡಿ. ನಿಮ್ಮೊಂದಿಗೆ ಪ್ರಸ್ತುತ ಪ್ರಾಪರ್ಟಿಯಲ್ಲಿ ವಾಸಿಸುವ ಎಲ್ಲಾ ಕುಟುಂಬ ಸದಸ್ಯರು ಮತ್ತು ಕುಟುಂಬೇತರ ಸದಸ್ಯರ ಬಗ್ಗೆ ನೀವು ಮಾಹಿತಿಯನ್ನು ಸೇರಿಸುವ ಅಗತ್ಯವಿದೆ. Delete ಐಕಾನ್ ಬಳಸಿ ಹೆಸರುಗಳನ್ನು ಅಳಿಸಬಹುದು. ಮಾಹಿತಿ ಪೂರ್ಣಗೊಂಡ ನಂತರ,Submit ಬಟನ್ ಕ್ಲಿಕ್ ಮಾಡಬೇಕು.