ಬಂಟ್ವಾಳ : ( ಜನಧ್ವನಿ ವಾರ್ತೆ) ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಎಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್ ವತಿಯಿಂದ ಎಸ್.ಬಿ.ಎಸ್ ವಿಧ್ಯಾರ್ಥಿಗಳಿಗೆ ಬಟರ್ ಫ್ಲೈ ಕ್ಯಾಂಪ್ ಪೆರಾಳದಲ್ಲಿ ನಡೆಯಿತು. ಸೆಕ್ಟರ್ ಉಪಾಧ್ಯಕ್ಷರಾದ ಜುನೈದ್ ಮುಸ್ಲಿಯಾರ್ ಅರಬಿಗುಡ್ಡೆ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಪೆರಾಲ ಮಸೀದಿ ಖತೀಬರಾದ ಉಸ್ಮಾನ್ ಸಖಾಫಿ ಉಸ್ತಾದರು ದುವಾಗೈದು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಹಬೀಬ್ ಪೆರಾಳ ಸ್ವಾಗತಿಸಿದರು. ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ “ಜಲ ಅಮೂಲ್ಯ ಸಂಪತ್ತು”*ಲ ಎಂಬ ವಿಷಯದಲ್ಲಿ ತರಗತಿ ನಡೆಸಿದರು. ಇಸ್ಲಾಮಿನಲ್ಲಿ ಮಹತ್ವ ಕಲ್ಪಿಸಿದ ಐದು ವಿಧದ ನೀರುಗಳಾದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕೈ ಬೆರಳಿನಿಂದ ಬಂದ ನೀರು, ಝಂ ಝಂ ನೀರು, ಹೌಳುಲ್ ಕೌಸರ್, ನೈಲ್ ನದಿಯ ನೀರು, ಸಾಮಾನ್ಯ ನೀರು ಹೀಗೆ ಐದು ಪ್ರಮುಖ ನೀರಿನ ಬಗ್ಗೆ ವಿವರಿಸಿದರು.
ಭೂಮಿಯಲ್ಲಿರುವ ಒಟ್ಟು ನೀರಿನಲ್ಲಿ ಕೇವಲ ಒಂದು ಶತಮಾನ ಮಾತ್ರ ಶುದ್ಧ ನೀರಾಗಿರುತ್ತದೆ ಉಳಿದ ತೊಂಬತ್ತೊಂಬತ್ತು ಶತಮಾನ ಉಪ್ಪು, ಮಂಜು, ಹಿಮ ಗಳಾಗಿರುತ್ತದೆ ಆದುದರಿಂದ ನೀರನ್ನು ಮಿತವಾಗಿ ಬಳಸಬೇಕೆಂದು ಕರೆ ನೀಡಿದರು.
ನಂತರ “ಒಳಿತಿಗಾಗಿ ಒಗ್ಗೂಡಿ” ಎಂಬ ವಿಷಯದಲ್ಲಿ ಎಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್ ಉಪಾಧ್ಯಕ್ಷರಾದ ಜುನೈದ್ ಮುಸ್ಲಿಯಾರ್ ಅರಬಿಗುಡ್ಡೆ ತರಗತಿ ನಡೆಸಿದರು. ಅಲ್ಲಾಹನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ತಮ್ಮ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸಬೇಕು, ಪ್ರತಿ ದಿನವೂ ಸ್ವಲಾತ್ ಹೇಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕ್ಯಾಂಪಸ್ ಕಾರ್ಯದರ್ಶಿ ಆಶಿಕ್ ಪೆರಾಲ,ಪದಾಧಿಕಾರಿಗಳಾದ ಅಶ್ರಫ್ ಸಖಾಫಿ ಪೆರಾಲ, ಸುಹೈಲ್ ಕುಳಾಲ್, ಸಂಶುದ್ದೀನ್ ಪೆರಾಳ ಉಪಸ್ಥಿತರಿದ್ದರು.