ರಿಯಾದ್: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ವತಿಯಿಂದ ಎಪ್ರಿಲ್ 20 ಶುಕ್ರವಾರದಂದು ಕಿಂಗ್ ಖಾಲಿದ್ ಆಸ್ಪತ್ರೆಯ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವು ರಿಯಾದ್’ನ ಕಿಂಗ್ ಸೌದ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ನಡೆಯಿತು.ಶಿಬಿರದ ಉದ್ಘಾಟನೆಯನ್ನು ಸ್ಪೂರ್ತಿದಾಯಕ ಭಾಷಣಕಾರ ಹಾಗೂ ಜೀವನ ತರಬೇತುದಾರರಾದ ಡಾ.ಅಬ್ದುಸ್ಸಲಾಮ್ ಓಮರ್ ನಡೆಸಿಕೊಟ್ಟರು. ಕೆ.ಸಿ.ಎಫ್. ರಿಯಾದ್ ಝೋನ್ ಅಧ್ಯಕ್ಷರಾದ ಹನೀಫ್ ಬೆಳ್ಳಾರೆ ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೆ.ಸಿ.ಎಫ್. ರಿಯಾದ್ ಝೋನ್ ಅಧೀನದ ಹಲವಾರು ಸೆಕ್ಟರ್’ಗಳ ಕಾರ್ಯಕರ್ತರು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು.
ವೇದಿಕೆಯಲ್ಲಿ ಮಖ್ಯ ಅತಿಥಿಗಳಾಗಿ ಭಾರತ ರಾಯಭಾರಿ ಕಚೇರಿ ರಿಯಾದ್ ಇದರ ಕಮ್ಯುನಿಟ್ ವೆಲ್ಫೇರ್ ಮುಖ್ಯಸ್ಥರಾದ ಪಿ.ರಾಜೇಂದ್ರನ್, ರಿಯಾದ್’ನ ನೋರ್ಕಾ ಜನರಲ್ ಕನ್ಸಲ್’ಟೆಂಟ್ ಶಿಹಾಬ್ ಕೊಟ್ಟುಕಾಡ್, ಕರಾವಳಿ ವೆಲ್ಫೇರ್ ಅಸೋಸಿಯೇಶನ್ ರಿಯಾದ್ ಘಟಕದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಕಿಂಗ್ ಖಾಲಿದ್ ಆಸ್ಪತ್ರೆಯ ರಕ್ತದಾನ ವಿಭಾಗದ ನಿರ್ವಾಹಕ ಮೊಹಮ್ಮದ್ ಸಲೀಂ ರೋಝಿ ಹಾಗೂ ಆಸ್ಪತ್ರೆಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಸಲ್ಮಾನ್ ಖಾಲಿದ್ ಶಿಬಿರಕ್ಕೆ ಬೇಕಾದ ಎಲ್ಲ ರೀತಿಯ ನೆರವನ್ನು ಒದಗಿಸಿದ್ದರು.
masha allah. ..allahu sweekarisali aameen.
good job kcf.👍👍