janadhvani

Kannada Online News Paper

ಮುಸ್ಲಿಂ ಮುಖಂಡರ ನಿಯೋಗ-ಬಿ.ಕೆ.ಹರಿಪ್ರಸಾದ್ ಭೇಟಿ: ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ

ಮಂಗಳೂರು,ಆಗಸ್ಟ್.1: ಜಿಲ್ಲೆಯಲ್ಲಿ ನಡೆದ ಇತ್ತೀಚೆಗಿನ ಅಹಿತಕರ ಘಟನೆಗಳು ಮತ್ತು ಮೂರು ಮತೀಯ ದ್ವೇಷ ಬಿಂಬಿತ ಕೊಲೆಗಳ ಹಿನ್ನೆಲೆಯಲ್ಲಿ ಇಂದು ಜಿಲ್ಲೆಗೆ ಆಗಮಿಸಿದ ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಶ್ರೀ ಬಿ. ಕೆ.ಹರಿಪ್ರಸಾದ್ ರನ್ನು ಮಂಗಳೂರಿನ ಮುಸ್ಲಿಮ್ ಮುಖಂಡರ ನಿಯೋಗ ಭೇಟಿ ಮಾಡಿ ಸಮಸ್ಯೆಗಳ ಅವಹಾಲು ಅರ್ಜಿ ಸಲ್ಲಿಸಿ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು.

ಮುಖ್ಯ ಮಂತ್ರಿ ಬೇಟಿ ಸಂದರ್ಭದಲ್ಲಿ ಉಂಟಾದ ತಾರತಮ್ಯ ವಿಚಾರ, ಪ್ರವೀಣ್ ತಂದೆಯ ಹೇಳಿಕೆಯ ಬಗ್ಗೆ ತನಿಖೆ ನಡೆಸದಿರುವ ಬಗ್ಗೆ ಇರುವ ಸಂಶಯ, ಅಮಾಯಕರ ಬಂದನದ ಬಗ್ಗೆ ಇರುವ ಆತಂಕ ಮುಂತಾದ ವಿಷಯಗಳಲ್ಲಿ ಚರ್ಚೆ ನಡೆಯಿತು.

ವಿರೋಧ ಪಕ್ಷದ ಉಪ ನಾಯಕ ಯು ಟಿ ಖಾದರ್ ಹಾಗೂ ಮಾಜಿ ಶಾಸಕ ಮೊಯ್ದಿನ್ ಬಾವ, ಕೆ.ಅಶ್ರಫ್, ಸಿ.ಎಂ.ಮುಸ್ತಾಫಾ ರವರ ಜಂಟಿ ನೇತೃತ್ವದಲ್ಲಿ ಮುಸ್ಲಿಂ ಮುಖಂಡರ ನಿಯೋಗವು ಬಿ. ಕೆ. ಹರಿಪ್ರಸಾದ್ ಅವರನ್ನು ಭೇಟಿ ಮಾಡಿತು.