ಕಾಪು, ಜುಲೈ 30; ಪ್ರಚಲಿತವಾದ ವಿದ್ಯಮಾನಗಳು ಹಾಗೂ ಕೆಲವು ಘಟನೆಗಳು ವಿದ್ಯಾರ್ಥಿ ಸಮೂಹವನ್ನು ಅರಾಜಕತೆ ಕಡೆಗೆ ಮುಖ ಮಾಡುತ್ತಿರುವಾಗ ಅವರಿಗೆ ಶಿಕ್ಷಣದ ಮಹತ್ವವನ್ನು ಕಲಿಸಿ, ಧಾರ್ಮಿಕ ಶಿಷ್ಟಾಚಾರಗಳ ಭೋಧನೆಯ ಒಂದು ಪರಿಕಲ್ಪನೆಯ ಹೊಸ ಅಧ್ಯಾಯವಾಗಿದೆ “ನೈತಿಕತೆ ಸಮಗ್ರತೆ ಸಮರ್ಪಣೆ” ಎಂಬ ಧ್ಯೇಯ ವಾಕ್ಯದಲ್ಲಿ ಎಸ್ಸೆಸ್ಸೆಫ್ ನಡೆಸುತ್ತಿರುವ “ಕ್ಯಾಂಪಸ್ ಅಸೆಂಬ್ಲಿ” ಎಂಬ ಐತಿಹಾಸಿಕ ಕಾರ್ಯಕ್ರಮ.
ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಕ್ಯಾಂಪಸ್ ಅಸೆಂಬ್ಲಿ 2022 ಜುಲೈ 31 ಆದಿತ್ಯವಾರ ಪ್ಯಾಲೇಸ್ ಗಾರ್ಡನ್ ಪಕೀರ್ಣಕಟ್ಟೆ ಕಾಪುವಿನಲ್ಲಿ ಐತಿಹಾಸಿಕವಾಗಿ ನಡೆಯಲಿದೆ.
ಎಸ್ಸೆಸ್ಸೆಲ್ಸಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮಾತ್ರ ನಡೆಯುವ ಈ ಒಂದು ಕಾರ್ಯಕ್ರಮದಲ್ಲಿ ಡಾ. ಹುಸೈನ್ ಸಖಾಫಿ ಚುಳ್ಳಿಕೋಡು, ಶಾಹಿಬ್’ಝದ ಯಮೀನ್ ಯಾಕೂಬ್ ಬೆಂಗಳೂರು, ಡಾ. ಎಮ್ಮೆಸ್ಸೆಮ್ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಹಂಝ ಮದನಿ ಮಿತ್ತೂರು, ಮುಹಮ್ಮದ್ ರಕೀಬ್ ಮಾಸ್ಟರ್ ಎಂ.ಎ. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ.
ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಅಹ್ಮದ್ ಶಬೀರ್ ಸಖಾಫಿ ಅಧ್ಯಕ್ಷತೆ ವಹಿಸಲಿದ್ದು SYS ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಉದ್ಘಾಟಿಸಲಿದ್ದಾರೆ.
ಜಿಲ್ಲಾ ಉಲಮಾ ಒಕ್ಕೂಟ ನಾಯಕ ಪಿ.ಬಿ. ಅಹ್ಮದ್ ಮುಸ್ಲಿಯಾರ್ ಕಾಪು, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ, ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ರಾಜ್ಯ ಕೋಶಾಧಿಕಾರಿ ಹಾಫಿಳ್ ಸುಫ್ಯಾನ್ ಸಖಾಫಿ, ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಕೊಡಗು, ರಾಜ್ಯ ಕಾರ್ಯದರ್ಶಿ ಉಡುಪಿ ಜಿಲ್ಲಾ ಉಸ್ತುವಾರಿ ಮುನೀರ್ ಅಹ್ಮದ್ ಸಖಾಫಿ, ರಾಜ್ಯ ನಾಯಕರಾದ ಎನ್.ಸಿ. ರಹೀಮ್, ಅಬ್ದುರ್ರವೂಫ್ ಖಾನ್, ಮನ್ಸೂರ್ ಕೆಎಸ್ಸೆಎಮ್ ಉಡುಪಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಂದು ಎಸ್ಸೆಸ್ಸೆಫ್ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ತ್ವಾಹೀರ್ ಮೂಡುಗೋಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.