✍️ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ
ಭಾಷಣ ರಂಗದ ಆವೇಶ ಧ್ವನಿ, ಸಂಘ- ಸಂಸ್ಥೆಗಳ ಪ್ರೀತಿಯ ನಾಯಕ ಅಬ್ದುಲ್ ಲತೀಫ್ ಸಅದಿ ಪಝಶಿ ಉಸ್ತಾದ್ ರವರ ಇವತ್ತು ಕಣ್ಣೂರು ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ನಡೆದ ಕೊನೆಯ ಭಾಷಣವನ್ನು ಆಲಿಸಲು ಸಾಧ್ಯವಾಯಿತು.
ಕೆಡುಕಿನ ವಿರುದ್ಧ ಹೋರಾಟದ ಕಿಚ್ಚು ಆ .ಧ್ವನಿಯಲ್ಲಿ ಇನ್ನೂ ಬಾಕಿಯಿತ್ತು. ಅವರ ಭಾಷಣ ಯಾವಾಗಲೂ ಕೇಳುಗರನ್ನು ಆವೇಶದ ತುತ್ತ ತುದಿಯಲ್ಲಿ ನಿಲ್ಲಿಸುತ್ತಿದೆ. ಅವರಿಗೆ ಅದು ಈಗಲೂ ಸಾಧ್ಯವಾಗುತ್ತಿತ್ತು. ಸಭಿಕರ ತಕ್ಬೀರಿನ ಮಾರ್ದನಿಗಳೇ ಇದಕ್ಕೆ ಸಾಕ್ಷಿಯಾಗಿದೆ. ಆದರೆ ಅಲ್ಲಾಹನ ಕರೆಗೆ ಉತ್ತರಿಸುವುದು ಅನಿವಾರ್ಯ ತಾನೇ.!?
ಆ ಮಹಾನ್ ವಿದ್ವಾಂಸರು ಬಹಳಷ್ಟು ಬೇಗ ನಮ್ಮಿಂದ ಆಗಲಿದ್ದಾರೆ.ಅವರ ಪರಲೋಕ ಉನ್ನತಿಗಾಗಿ ಪ್ರಾರ್ಥಿಸೋಣ.
ಕೊನೆಯಾಗದ ಕೊನೆಯ ಮಾತು
✍️ಕೆ.ಎಂ ಅಬೂಬಕರ್ ಸಿದ್ದೀಖ್
“ಇದು ಕೇವಲ ಮುಸ್ಲಿಮರ ಹಕ್ಕು ಮಂಡನೆಯಲ್ಲ. ಎಸ್ ವೈ ಎಸ್, ಎಸ್ ಎಸ್ ಎಫ್ ಮತ್ತಿತರ ನಮ್ಮ ಸಂಘಟನೆಗಳ ಹಕ್ಕು ಮಂಡನೆಯಲ್ಲ. ಬದಲು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಪ್ರತಿಯೊಬ್ಬರ ಹಕ್ಕು ಮಂಡನೆಯಿದು…”
ಪಯಸ್ಸಿ ಉಸ್ತಾದು ಹೀಗೆನ್ನುವಾಗ ಲುಹ್ರ್ ಸಮಯ ಆಗಿದೆ ಅಷ್ಟೇ. ಆದರೆ ಅಸರ್ ನಮಾಝ್ನ ವೇಳೆಯಾಗುವ ಹೊತ್ತಿಗೆ ಅದೇ ಪಯಸ್ಸಿ ಉಸ್ತಾದ್ ಅಲ್ಲಾಹನ ಕರೆಗೆ ಓಗೊಟ್ಟಿದ್ದಾರೆ!
ಪಯಸ್ಸಿ ಉಸ್ತಾದ್…
ಹೋಲಿಕೆ ಇಲ್ಲದ ಹೊಗಳಿಕೆಯ ಹೊನ್ನು…
ಉಸ್ತಾದ್ ಇನ್ನು ಬರೀ ನೆನಪು ಮಾತ್ರ. ಅಲ್ಲಾಹುವೇ, ಸ್ವರ್ಗವನ್ನು ಅನುಗ್ರಹಿಸು ನಾಥಾ…