ದಮ್ಮಾಮ್: ಅಲ್ ಹಸ್ಸಾ ಕೆಸಿಎಫ್ ವತಿಯಿಂದ ಗ್ರ್ಯಾಂಡ್ ಈದ್ ಮೀಟ್ ಕೆಸಿಎಫ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ನೌಶಾದ್ ಅಮಾನಿ ಉಸ್ತಾದ್ ಉದ್ಘಾಟಿಸಿದರು.
ಸೆಕ್ಟರ್ ಶಿಕ್ಷಣ ಇಲಾಖೆಯ ಚೇರ್ಮನ್ ಇಬ್ರಾಹಿಮ್ ಸಅದಿ ಮಚ್ಚಂಪಾಡಿ ಈದ್ ಸಂದೇಶ ನೀಡಿದರು.
ಅನಾರೋಗ್ಯದಿಂದ ಬಳಲುತ್ತಿರುವ ಸೈಯ್ಯಿದ್ ಅಥಾವುಲ್ಲಾ ತಂಙಳ್ ಮಂಜೇಶ್ವರ, ಹಾಗೂ ಉಸ್ತಾದ್ ಕೆ.ಎಮ್ ಸಿದ್ದೀಖ್ ಮೋಂಟುಗೋಳಿ ಅವರಿಗೆ ವಿಶೇಷ ದುಆ ನಡೆಸಲಾಯಿತು.
ಅಬ್ದುಲ್ ರಹ್ಮಾನ್ ಕೈರಂಗಳ ಸಮಾಧಿ ಸಂದರ್ಶನ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸೆಕ್ಟರ್ ಅಧ್ಯಕ್ಷ ಹಮೀದ್ ಕೈರಂಗಳ,ರಾಷ್ಟ್ರೀಯ ನಾಯಕ ಅಸ್ರು ಬಜ್ಪೆ,ಝೋನ್ ನಾಯಕರಾದ ಅಬೂಬಕ್ಕರ್ ಕಿಲ್ಲೂರು,ಹಾರಿಸ್ ಕಾಜೂರು, ಇಕ್ಬಾಲ್ ಗುಲ್ವಾಡಿ ಮತ್ತು ಇಸ್ಹಾಕ್ ಫಜೀರ್ ಭಾಗವಹಿಸಿದರು.
ಕಾರ್ಯಕ್ರಮವನ್ನು ಹಮೀದ್ ಕೈರಂಗಳ
ಸ್ವಾಗತಿಸಿ, ಕೊನೆಯಲ್ಲಿ ಧನ್ಯವಾದಗೈದರು.