ಮಲ್ಲೂರು, ಏ.21: ಮಲ್ಲೂರು ಟುಡೇ ಮೀಡಿಯಾ ಸೆಂಟರ್ ಹಾಗೂ ಮೋಟಿವಿಟಲೈಝ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಇಂದು ಬಂಟರ ಭವನ ಬದ್ರಿಯಾನಗರ ಪೆರ್ಮಾಯಿ ಯಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ನಂತರ ಮುಂದೇನು? ಮಾಹಿತಿ ಶಿಬಿರ ಜರುಗಿತು.
ಮಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ.ಇ.ಇಸ್ಮಾಯಿಲ್ ಬೊಲ್ಲಂಕಿಣಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ, ಶಿಕ್ಷಣ ಪ್ರೇಮಿ ಎಂ.ವೈ. ಮಜೀದ್ ಪಲ್ಲಿಬೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶೈಕ್ಷಣಿಕ ಮುಂದಾಳು ಎಂ.ಟಿ. ಹಕೀಂ ತಾಳಿಪ್ಪಾಡಿ ಕಲಾಯಿ, ಅಲ್ ಬಿರ್ರ್ ಕರ್ನಾಟಕ ಕೋ ಆರ್ಡಿನೇಟರ್ ಅಕ್ಬರ್ ಆಲಿ ಅಡ್ಡೂರು ಆಶಂಸಾ ಭಾಷಣ ಗೈದರು. ಮಲ್ಲೂರು ಟುಡೇ ಮೀಡಿಯಾ ಸೆಂಟರ್ ಮುಖ್ಯಸ್ಥ ಜಬ್ಬಾರ್ ಮಲ್ಲೂರು ಪ್ರಾಸ್ತಾವಿಕ ಭಾಷಣ ಮಾಡಿದರು.
ಸಭಾ ಕಾರ್ಯಕ್ರಮದಲ್ಲಿ ಮಲ್ಲೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ ಕೆ ಯೂಸುಫ್ ಬದ್ರಿಯಾನಗರ, ಅಲ್ ಮಸ್ಜಿದುಲ್ ಬದ್ರಿಯಾ ಜುಮ್ಮಾ ಮಸ್ಜಿದ್ ಬದ್ರಿಯಾನಗರ ಅಧ್ಯಕ್ಷರಾದ ಅಶ್ರಫ್ ಬದ್ರಿಯಾನಗರ, ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾದ ಹನೀಫ್ ಜೆಜೆಸಿ ಮಲ್ಲೂರು, ಗ್ರಾಮ ಪಂಚಾಯತ್ ಸದಸ್ಯರಾದ ಡಿ.ಅಬುಸಾಲಿ ದೆಮ್ಮಲೆ, ಇಲ್ಯಾಸ್ ಪಾದೆ, ಮೋಟಿವಿಟಲೈಝ್ ಮಂಗಳೂರು ಮ್ಯಾನೇಜಿಂಗ್ ಡೈರೆಕ್ಟರ್ ನಸ್ರೀನ್ , ಪ್ರಮುಖರಾದ ಫಾರೂಕ್, ತೌಸೀಫ್, ಸಮಾಜ ಸೇವಕರಾದ ಎನ್ ಎ ಸತ್ತಾರ್ ಬದ್ರಿಯಾನಗರ, ಎಂ ಟಿ ಕರೀಂ ಮಲ್ಲೂರು, ಎ.ಪಿ.ಎಂ.ಜಿ ಗ್ರಾನೈಟ್ ಡೀಲರ್ ಅಬೂಬಕ್ಕರ್ ಬೊಲ್ಲಂಕಿಣಿ ಉಪಸ್ಥಿತರಿದ್ದರು.
ಸಮೀಮ್ ಕುಟ್ಟಿಕಳ ಧನ್ಯವಾದ ಗೈದರು. ಮಲ್ಲೂರು ಟುಡೇ ಮೀಡಿಯಾ ಸೆಂಟರ್ ಪ್ರಧಾನ ಕಾರ್ಯದರ್ಶಿ ಶವೀಲ್ ಉದ್ದಬೆಟ್ಟು, ಪ್ರಮುಖರಾದ ನಿಹಾಲ್ ದೆಮ್ಮಲೆ, ಜಾಬೀರ್ ಉದ್ದಬೆಟ್ಟು, ನವಾಫ್ ಕಲಾಯಿ ತಾಳಿಪ್ಪಾಡಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತವರ ಪೋಷಕರು ಭಾಗವಹಿಸಿದ್ದರು.