janadhvani

Kannada Online News Paper

ಅತ್ತಾಜೆ ಮದರಸ ಸ್ಮಾರ್ಟ್‌ಕ್ಲಾಸ್ ಉಧ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮ

ಉಜಿರೆ: ಅರಫಾ ಜಾಮಿಅಃ ಮಸ್ಜಿದ್ ಇದರ ಅಧೀನದ ಮುಹಿಯುದ್ದೀನ್ ಅರಬಿಕ್ ಮದರಸ ಅತ್ತಾಜೆ ಇದರ ಸ್ಮಾರ್ಟ್ ತರಗತಿಯ ಉದ್ಘಾಟನಾ ಕಾರ್ಯಕ್ರಮ ಹಾಗೂ ಉಜಿರೆಯ ಜಮಾ‌ಅತ್‌ನ ಇತಿಹಾಸದಲ್ಲಿ 4 ಬಡ ಹೆಣ್ಣುಮಕ್ಕಳ ಉಚಿತ ಸಾಮೂಹಿಕ ವಿವಾಹ ನೆರವೇರಿಸಿದ ರಫೀಕ್ ಮುಗುಳಿಯವರಿಗೆ ಸನ್ಮಾನ ಕಾರ್ಯಕ್ರಮವು ದಿನಾಂಕ 21ಮಾರ್ಚ್ 2022 ಸೋಮವಾರ ಇಶಾಅ್ ನಮಾಝಿನ ಬಳಿಕ ಅತ್ತಾಜೆ ಮದರಸ ವಠಾರದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಫಾ ಜಾಮಿಅಃ ಮಸ್ಜಿದ್ ಅಧ್ಯಕ್ಷರಾದ ಇಬ್ರಾಹಿಂ ಅತ್ತಾಜೆಯವರು ವಹಿಸಿದ್ದರು. ಮುಅಲ್ಲಿಂ‌ರಾದ ಮುಹಮ್ಮದ್ ಅನ್ಸಾರ್ ಇಹ್ಸಾನಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಮುಹಿಯುದ್ದೀನ್ ಜುಮಾ ಮಸ್ಜಿದ್ ಹಳೆಪೇಟೆ ಉಜಿರೆ ಇದರ ಅಧ್ಯಕ್ಷರಾದ ಬಿ.ಎಂ.ಹಮೀದ್, ಉಪಾಧ್ಯಕ್ಷರಾದ ಯು.ಎ ಹಮೀದ್, ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಎಸ್.ಎಂ ಕೋಯ ತಂಙಳ್ ಅಲ್-ಅಮೀನ್ ಯಂಗ್‌ಮೆನ್ಸ್ ಗಲ್ಫ್ ಘಟಕದ ಸದಸ್ಯರಾದ ಅಝೀಝ್ ಎಸ್.ಎ ಅಲ್-ಅಮೀನ್ ಯಂಗ್‌ಮೆನ್ಸ್ ಉಜಿರೆ ಇದರ ಅಧ್ಯಕ್ಷರಾದರು ಶಾಕಿರ್ ಉಜಿರೆ, ಪ್ರ.ಕಾರ್ಯದರ್ಶಿ ಫಝಲ್ ರಹ್‌ಮಾನ್ ಎಸ್.ಜೆ.ಎಂ ಉಜಿರೆ ರೇಂಜ್ ಪ್ರ.ಕಾರ್ಯದರ್ಶಿ ಖಾಲಿದ್ ಮುಸ್ಲಿಯಾರ್, ಅರಫಾ ಜಾಮಿಅಃ ಮಸ್ಜಿದ್ ಪ್ರ.ಕಾರ್ಯದರ್ಶಿ ಇಕ್ಬಾಲ್ ಕೋಶಾಧಿಕಾರಿ ಮನ್ಸೂರ್ ಎಸ್‌ವೈಎಸ್ ಅತ್ತಾಜೆ ಅಧ್ಯಕ್ಷರಾದ ಹಕೀಂ ಎಸ್ಸೆಸ್ಸೆಫ್ ಉಜಿರೆ ಸೆಕ್ಟರ್ ಕಾರ್ಯದರ್ಶಿಗಳಾದ ಮಜೀದ್, ಅನ್ವರ್ ಅತ್ತಾಜೆ ಅಧ್ಯಕ್ಷರಾದ ಝುಬೈರ್ ಅತ್ತಾಜೆ, ಕರ್ನಾಟಕ ಮುಸ್ಲಿಂ ಜಮಾಅತ್ ಉಜಿರೆ ಬ್ಲಾಕ್ ಪ್ರ.ಕಾರ್ಯದರ್ಶಿ ಹಾರಿಸ್ ಎಟುಝಟ್, ಆಸಿಫ್, ಬಶೀರ್, ಜಬ್ಬಾರ್ ,ಲಬೀಬ್, ಇಸುಬು ಹಾಗೂ ಎಸ್ಸೆಸ್ಸೆಫ್, ಎಸ್‌ವೈ‌ಎಸ್ ಕಾರ್ಯಕರ್ತರು ಹಾಗೂ ಜಮಾಅತರು ಉಪಸ್ಥಿತರಿದ್ದರು. ಅತ್ತಾಜೆಯ ಗಲ್ಫ್ ಸದಸ್ಯರಾದ ರವೂಫ್, ನಝೀರ್, ಉಮರ್, ಖಲಂದರ್ ಸಫಾ, ಸುಲೈಮಾನ್,ಖಲಂದರ್, ಶರೀಫ್, ನಝೀರ್ ಮೆಲ್ಮನೆ ಹಾಗೂ ಹಾರಿಸ್ ಸಬ್‌ ಇನ್ಸ್‌ಪೆಕ್ಟರ್, ಸಾದಿಕ್ ಸಹಕರಿಸಿದರು.
ಎಸ್‌ವೈಎಸ್ ಅತ್ತಾಜೆ ಪ್ರ.ಕಾರ್ಯದರ್ಶಿ ಅಶ್ರಫ್ ಮೆಡಿಕಲ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

ವರದಿ: ಎಂ.ಎಂ.ಉಜಿರೆ

error: Content is protected !! Not allowed copy content from janadhvani.com