janadhvani

Kannada Online News Paper

ಯಶಸ್ವಿ ವ್ಯವಹಾರ ಸ್ಥಗಿತ- ಕೆ.ಅಶ್ರಫ್,ಮುಸ್ಲಿಮ್ ಒಕ್ಕೂಟ ಅಭಿನಂದನೆ

ಮಂಗಳೂರು: ಕರ್ನಾಟಕ ಉಚ್ಛ ನ್ಯಾಯಾಲಯ ಇತ್ತೀಚಿಗೆ ಪ್ರಕಟಿಸಿದ ಹಿಜಾಬ್ ಬಗ್ಗೆಗಿನ ತೀರ್ಪುವಿನಲ್ಲಿ, ಹಿಜಾಬ್ ಇಸ್ಲಾಮ್ ಧರ್ಮದ ಅಂಗವಲ್ಲ, ಹಿಜಾಬ್ ಗೆ ಧಾರ್ಮಿಕ ಮಹತ್ವವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುವಿಕೆ ಮತ್ತು ಮುಸ್ಲಿಮ್ ಮಹಿಳೆಯರ ಧಾರ್ಮಿಕ ಸ್ವಾತಂತ್ರ್ಯ ದ ಹಕ್ಕು ಆದ ಹಿಜಾಬ್ ಧರಿಸುವಿಕೆಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿರೋಧವನ್ನು ವಿಮರ್ಶಿಸಿ ಕರ್ನಾಟಕ ರಾಜ್ಯ ಅಮೀರ್ ಎ ಶರಿಯತ್ ಮುಖ್ಯಸ್ಥರಾದ ಮೌಲಾನ ಸಗೀರ್ ಅಹಮ್ಮದ್ ರವರು ನೀಡಿದ ಒಂದು ದಿನದ ಶಾಂತಿಯುತ ಕರ್ನಾಟಕ ವ್ಯವಹಾರ ಸ್ಥಗಿತ ಮತ್ತು ಈ ಬಂದ್ ಅನ್ನು ಸ್ವಯಂ ಪ್ರೇರಿತ ವಾಗಿ ರಾಜ್ಯಾದ್ಯಂತ ಮತ್ತು ದ.ಕ.ಜಿಲ್ಲೆಯಾದ್ಯಂತ ಶಾಂತಿಯುತವಾಗಿ ನಡೆಸಿದ ಸರ್ವರಿಗೂ ಧನ್ಯವಾದಗಳು.

ಹಿಜಾಬ್ ತೀರ್ಪು ವಿಮರ್ಶಿಸಿ ನಡೆಸಿದ ಈ ಸ್ವಯಂ ಪ್ರೇರಿತ ವ್ಯವಹಾರ ಸ್ಥಗಿತಕ್ಕೆ ಸಹಕರಿಸಿದ ಜಿಲ್ಲೆಯ ಹಸಿ ಮೀನು ಮಾರಾಟ ಮತ್ತು ಕಮಿಷನ್ ಏಜೆಂಟರ ಸಂಘ, ಟ್ರಾವೆಲರ್ ಮೀನುಗಾರಿಕಾ ಬೋಟ್ ಸಂಘ, ಜವಳಿ, ಫ್ಯಾನ್ಸಿ, ಚಪ್ಪಲಿ ವ್ಯಾಪಾರಸ್ಥರು, ರೆಸ್ಟೋರೆಂಟ್ ಮಾಲಕರು,ದಿನಸಿ ವ್ಯಾಪಾರಸ್ಥರು, ಸ್ಟೀಲ್,ಸ್ಕ್ರಾಪ್ ವ್ಯಾಪಾರಸ್ಥರು,ಚಿಕನ್,ಮಟನ್, ಫಿಶ್ ವ್ಯವಹಾರಸ್ಥರು,ಜಿಲ್ಲೆಯ ತರಕಾರಿ,ಹಣ್ಣು ವ್ಯಾಪಾರಸ್ಥರು , ಕಟ್ಟಡ ಸಮಾಗ್ರಿ, ಹಾರ್ಡ್ವೇರ್ ಅಂಗಡಿ ಮಾಲೀಕರು,ಸ್ಟೇಷನರಿ,ಆಟೋ ಕ್ಯಾಬ್,ರಿಕ್ಷಾ ಚಾಲಕರು ಮತ್ತು ಮಾಲಕ ರು,ಶಿಕ್ಷಣ ಸಂಸ್ಥೆ ಮುಖ್ಯಸ್ಥರು,ನಗರ ಮತ್ತು ಗ್ರಾಮಾಂತರ ಜಮಾತ್ ಕಮಿಟಿ,ಕಾರ್ಮಿಕರು,ದಿನಗೂಲಿ ನೌಕರರು, ವೃತ್ತಿ ದಾರರು, ಸ್ಥಳೀಯ ನಗರ ಮತ್ತು ತಾಲೂಕು ಮಟ್ಟದ ಸರ್ವ ಒಕ್ಕೂಟ ಸಂಘಟನೆಗಳು,ವೇದಿಕೆ,ಸಂಘ ಸಂಸ್ಥೆಗಳು,ವಿಧ್ಯಾರ್ಥಿ ವಿದ್ಯಾರ್ಥಿನಿಯರು, ವಿಧ್ಯಾರ್ಥಿ ಸಂಘಟನೆಗಳು, ಪ್ರಜಾಸತ್ತಾತ್ಮಕ ಉದ್ದೇಶಿತ ವಿವಿದ ರಾಜಕೀಯ ಪಕ್ಷಗಳು ಸರ್ವರಿಗೂ ಧನ್ಯವಾದಗಳು. ಈ ವ್ಯವಹಾರ ಸ್ಥಗಿತ ಪ್ರದರ್ಶನಕ್ಕೆ ಸಹಕರಿಸಿದ ದ.ಕ.ಜಿಲ್ಲಾಡಳಿತ, ಮಂಗಳೂರು ನಗರ ಮತ್ತು ದ.ಕ.ಜಿಲ್ಲಾ ಪೊಲೀಸು ಇಲಾಖೆಗೆ ಕೂಡಾ ಧನ್ಯವಾದಗಳು.

ಕೆ.ಅಶ್ರಫ್ (ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.

error: Content is protected !! Not allowed copy content from janadhvani.com